Sarfaraz Khan: ಅಬ್ಬರ ಸಿಡಿಲಬ್ಬರ: ಸ್ಪೋಟಕ ಸೆಂಚುರಿ ಸಿಡಿಸಿದ ಸರ್ಫರಾಝ್ ಖಾನ್

| Updated By: ಝಾಹಿರ್ ಯೂಸುಫ್

Updated on: Jan 25, 2024 | 2:03 PM

Sarfaraz Khan: ರಣಜಿ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಸರ್ಫರಾಝ್ ಖಾನ್ ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿಲ್ಲ. ಇದರ ಬೆನ್ನಲ್ಲೇ ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಸರ್ಫರಾಝ್ ಎಲ್ಲರ ಗಮನ ಸೆಳೆದಿದ್ದಾರೆ.

1 / 6
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್​ ವಿರುದ್ಧದ ಪಂದ್ಯದಲ್ಲಿ ಸರ್ಫರಾಝ್ ಖಾನ್ (Sarfaraz Khan) ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಲಯನ್ಸ್ ತಂಡವು 152 ರನ್​ಗಳಿಸಿ ಆಲೌಟ್ ಆಗಿತ್ತು.

2 / 6
ಆ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಅಭಿಮನ್ಯು ಈಶ್ವರನ್ (58) ಹಾಗೂ ದೇವದತ್ ಪಡಿಕ್ಕಲ್ (105) ಉತ್ತಮ ಆರಂಭ ಒದಗಿಸಿದ್ದರು. ಇದಾದ ಬಳಿಕ ಕಣಕ್ಕಿಳಿದ ಸರ್ಫರಾಝ್ ಖಾನ್ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು.

3 / 6
ಇಂಗ್ಲೆಂಡ್ ಲಯನ್ಸ್ ಬೌಲರ್​ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಸರ್ಫರಾಝ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ ಕೇವಲ 89 ಎಸೆತಗಳಲ್ಲಿ ಸರ್ಫರಾಝ್ ಖಾನ್ ಶತಕ ಪೂರೈಸಿದರು.

4 / 6
ಈ ಸ್ಪೋಟಕ ಶತಕದೊಂದಿಗೆ ಸರ್ಫರಾಝ್ ಖಾನ್ ಮತ್ತೊಮ್ಮೆ ಟೀಮ್ ಇಂಡಿಯಾದ ಕದ ತಟ್ಟಿದ್ದಾರೆ. ದೇಶೀಯ ಅಂಗಳದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿರುವ ಯುವ ದಾಂಡಿಗನಿಗೆ ಇದುವರೆಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು.

5 / 6
ಆದರೆ ಈ ಬಾರಿ ಕೂಡ ಆಯ್ಕೆ ಸಮಿತಿ ಸರ್ಫರಾಝ್ ಅವರನ್ನು ಕಡೆಗಣಿಸಿದ್ದರು. ಅಲ್ಲದೆ ವಿಕೆಟ್ ಕೀಪರ್ ಬ್ಯಾಟರ್​ ಆಗಿ 23 ವರ್ಷದ ಧ್ರುವ್ ಜುರೇಲ್​ಗೆ ಮಣೆ ಹಾಕಿದ್ದರು. ಹಾಗೆಯೇ ವೈಯುಕ್ತಿಕ ಕಾರಣಗಳಿಂದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಬದಲಿ ಆಟಗಾರನಾಗಿ ರಜತ್ ಪಾಟಿದಾರ್​​​ಗೆ ಚಾನ್ಸ್ ನೀಡಲಾಗಿದೆ. ಈ ಆಯ್ಕೆಗಳ ಬೆನ್ನಲ್ಲೇ ಇದೀಗ ಸ್ಪೋಟಕ ಬ್ಯಾಟಿಂಗ್ ಮೂಲಕ ಸರ್ಫರಾಝ್ ಖಾನ್ ಅಬ್ಬರಿಸಿರುವುದು ವಿಶೇಷ.

6 / 6
ಇನ್ನು ಸರ್ಫರಾಝ್ ಖಾನ್ ಅವರ ಈ ಬಿರುಸಿನ ಶತಕದ ನೆರವಿನಿಂದ ಭಾರತ ತಂಡವು 73 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 313 ರನ್​ ಕಲೆಹಾಕಿದೆ. ಈ ಮೂಲಕ ಇಂಗ್ಲೆಂಡ್ ಲಯನ್ಸ್ ವಿರುದ್ಧ 161 ರನ್​ಗಳ ಮುನ್ನಡೆ ಸಾಧಿಸಿದೆ.