PSL 2025: ಪಾಕಿಸ್ತಾನ್ ಸೂಪರ್ ಲೀಗ್ನ 10ನೇ ಸೀಸನ್ನಲ್ಲಿ ಎಡಗೈ ವೇಗಿ ಶಾಹೀನ್ ಅಫ್ರಿದಿ (Shaheen Afridi) ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ಮೊದಲ ಓವರ್ನಲ್ಲೇ ಇಬ್ಬರು ಬ್ಯಾಟರ್ಗಳನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಎಂಬುದು ವಿಶೇಷ. ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ಹಾಗೂ ಕರಾಚಿ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಲಾಹೋರ್ ಖಲಂದರ್ಸ್ ತಂಡದ ನಾಯಕ ಶಾಹೀನ್ ಅಫ್ರಿದಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಖಲಂದರ್ಸ್ ಪರ ಫಖರ್ ಝಮಾನ್ 76 ರನ್ ಬಾರಿಸಿದರೆ, ಡೇರಿಲ್ ಮಿಚೆಲ್ 75 ರನ್ ಸಿಡಿಸಿದರು. ಈ ಸ್ಪೋಟಕ ಅರ್ಧಶತಕಗಳ ನೆರವಿನೊಂದಿಗೆ ಲಾಹೋರ್ ಖಲಂದರ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.
202 ರನ್ಗಳ ಕಠಿಣ ಗುರಿ ಬೆನ್ನತ್ತಿದ ಕರಾಚಿ ಕಿಂಗ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಶಾಹೀನ್ ಅಫ್ರಿದಿ ಯಶಸ್ವಿಯಾದರು. ಮೊದಲ ಓವರ್ನ 2ನೇ ಎಸೆತದಲ್ಲಿ ಡೇವಿಡ್ ವಾರ್ನರ್ (0) ವಿಕೆಟ್ ಪಡೆದ ಅಫ್ರಿದಿ, ಆ ಬಳಿಕ ಬಂದ ಜೇಮ್ಸ್ ವಿನ್ಸ್ (0) ಅವರನ್ನು 4ನೇ ಎಸೆತದಲ್ಲಿ ಬೌಲ್ಡ್ ಮಾಡಿದರು.
ಈ ಮೂಲಕ ಶಾಹೀನ್ ಮೊದಲ ಓವರ್ನಲ್ಲೇ ಇಬ್ಬರು ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳುಹಿಸಿದ್ದಾರೆ. ಅದು ಸಹ ಶೂನ್ಯದೊಂದಿಗೆ. ಇದರೊಂದಿಗೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಮೊದಲ ಓವರ್ನಲ್ಲಿ ಇಬ್ಬರು ದಾಂಡಿಗರನ್ನು ಸಿಲ್ವರ್ ಡಕ್ ಔಟ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಶಾಹೀನ್ ಅಫ್ರಿದಿ ಪಾಲಾಯಿತು.
ಈ ದಾಖಲೆಯ ಜೊತೆಗೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಮೊದಲ ಓವರ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಹೆಗ್ಗಳಿಕೆಯನ್ಹು ಸಹ ಶಾಹೀನ್ ಅಫ್ರಿದಿ ತಮ್ಮದಾಗಿಸಿಕೊಂಡಿದ್ದಾರೆ. ಪಿಎಸ್ಎಲ್ ಇತಿಹಾಸದಲ್ಲಿ ಶಾಹೀನ್ ಅಫ್ರಿದಿ ಮೊದಲ ಓವರ್ನಲ್ಲಿ ಈವರೆಗೆ 22 ವಿಕೆಟ್ ಕಬಳಿಸಿ ಈ ದಾಖಲೆ ನಿರ್ಮಿಸಿದ್ದಾರೆ.
ಇನ್ನು ಶಾಹೀನ್ ಅಫ್ರಿದಿ ನೀಡಿದ ಈ ಆರಂಭಿಕ ಆಘಾತದಿಂದ ತತ್ತರಿಸಿದ ಕರಾಚಿ ಕಿಂಗ್ಸ್ ತಂಡವು 19.1 ಓವರ್ಗಳಲ್ಲಿ 136 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಲಾಹೋರ್ ಖಲಂದರ್ಸ್ ತಂಡವು 65 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಲಾಹೋರ್ ಖಲಂದರ್ಸ್ ತಂಡವು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.