116, 112, 100… ವಿಶ್ವ ದಾಖಲೆ ನಿರ್ಮಿಸಿದ ಶಾಹೀನ್ ಅಫ್ರಿದಿ

| Updated By: ಝಾಹಿರ್ ಯೂಸುಫ್

Updated on: Dec 11, 2024 | 9:31 AM

South Africa vs Pakistan: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 11 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನ ಹೊರತಾಗಿಯೂ ಪಾಕ್ ತಂಡದ ವೇಗಿ ಶಾಹೀನ್ ಶಾ ಅಫ್ರಿದಿ ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ. ಆ ದಾಖಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ...

1 / 6
ಪಾಕಿಸ್ತಾನ್ ತಂಡದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಡರ್ಬನ್​​ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 4 ಓವರ್​ ಎಸೆದಿದ್ದ ಅಫ್ರಿದಿ 22 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

2 / 6
ಈ ಮೂರು ವಿಕೆಟ್​​ಗಳೊಂದಿಗೆ ಶಾಹೀನ್ ಅಫ್ರಿದಿ ಟಿ20 ಕ್ರಿಕೆಟ್​​ನಲ್ಲಿ 100 ವಿಕೆಟ್​​ಗಳ ಸಾಧನೆ ಮಾಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಪಾಕಿಸ್ತಾನದ 2ನೇ ವೇಗಿ, ವಿಶ್ವದ 20ನೇ ಬೌಲರ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

3 / 6
ಅಷ್ಟೇ ಅಲ್ಲದೆ ಮೂರು ಸ್ವರೂಪಗಳಲ್ಲೂ 100 ವಿಕೆಟ್ ಕಬಳಿಸಿದ ಪಾಕಿಸ್ತಾನದ ಮೊದಲ ವೇಗಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಹಾಗೆಯೇ ಈ ವಿಶ್ವ ದಾಖಲೆ ಬರೆದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೇವಲ ಮೂವರು ಮಾತ್ರ ಮೂರು ಸ್ವರೂಪಗಳಲ್ಲಿ 100+ ವಿಕೆಟ್ ಕಬಳಿಸಿದ್ದಾರೆ.

4 / 6
ಈ ಪಟ್ಟಿಯಲ್ಲಿ ನ್ಯೂಝಿಲೆಂಡ್​ನ ಟಿಮ್ ಸೌಥಿ ಅಗ್ರಸ್ಥಾನದಲ್ಲಿದ್ದಾರೆ. ಸೌಥಿ ಟೆಸ್ಟ್​ನಲ್ಲಿ 389, ಏಕದಿನದಲ್ಲಿ 221 ಹಾಗೂ ಟಿ20 ಕ್ರಿಕೆಟ್​ನಲ್ಲಿ 164 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಶಕೀಬ್ ಅಲ್ ಹಸನ್ ಟೆಸ್ಟ್​ನಲ್ಲಿ 246, ಏಕದಿನದಲ್ಲಿ 317, ಟಿ20 ಕ್ರಿಕೆಟ್​ನಲ್ಲಿ 149 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

5 / 6
ಹಾಗೆಯೇ ಈ ಪಟ್ಟಿಯಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ಮೂರನೇ ಸ್ಥಾನದಲ್ಲಿದ್ದು, ಮಾಲಿಂಗ ಟೆಸ್ಟ್​ನಲ್ಲಿ 101, ಏಕದಿನದಲ್ಲಿ 338, ಟಿ20 ಕ್ರಿಕೆಟ್​ನಲ್ಲಿ 107 ವಿಕೆಟ್ ಪಡೆದಿದ್ದಾರೆ. ಇದೀಗ ಈ ಸಾಧಕರ ಪಟ್ಟಿಗೆ ಶಾಹೀನ್ ಶಾ ಅಫ್ರಿದಿ ಕೂಡ ಸೇರ್ಪಡೆಯಾಗಿದ್ದಾರೆ.

6 / 6
2018 ರಿಂದ 2024 ರವರೆಗೆ 161 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಶಾಹೀನ್ ಅಫ್ರಿದಿ ಟೆಸ್ಟ್​ನಲ್ಲಿ 116, ಏಕದಿನದಲ್ಲಿ 112, ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ 100 ವಿಕೆಟ್ ಪಡೆದ ವಿಶ್ವದ ಮೊದಲ ಎಡಗೈ ವೇಗಿ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Published On - 9:30 am, Wed, 11 December 24