Shakib Al Hasan: ವಿಶ್ವದ ಎರಡನೇ ಆಟಗಾರ: ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದ ಶಕಿಬ್ ಅಹ್ ಹಸನ್
TV9 Web | Updated By: Vinay Bhat
Updated on:
Sep 02, 2022 | 11:36 AM
SL vs BAN, Asia Cup 2022: ಟಿ20 ಮಾದರಿಯ ಕ್ರಿಕೆಟ್ ಇತಿಹಾಸದಲ್ಲಿ 400 ವಿಕೆಟ್ ಮತ್ತು 6,000 ರನ್ ಪೂರೈಸಿದ ವಿಶ್ವದ ಎರಡನೇ ಆಟಗಾರ ಎಂಬ ಸಾಧನೆಯನ್ನು ಶಕಿಬ್ ಅಲ್ ಹಸನ್ ಮಾಡಿದ್ದಾರೆ. ಶಕಿಬ್ ಲಂಕಾ ವಿರುದ್ಧದ ಪಂದ್ಯದಲ್ಲಿ 22 ಎಸೆತಗಳಲ್ಲಿ 24 ರನ್ ಬಾರಿಸಿ ಈ ವಿಶೇಷ ಸಾಧನೆ ಮಾಡಿದ್ದಾರೆ.
1 / 7
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಏಷ್ಯಾಕಪ್ ನ ಐದನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ತಂಡ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಕೊನೆಯ ಓವರ್ ವರೆಗೂ ನಡೆದ ರೋಚಕ ಕಾದಾಟದಲ್ಲಿ ಸೋತ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಬಾಂಗ್ಲಾ ತಂಡದ ನಾಯಕ ಶಕಿಬ್ ಅಲ್ ಹಸನ್ ವಿಶೇಷ ದಾಖಲೆ ಮಾಡಿದ್ದಾರೆ.
2 / 7
ಟಿ20 ಮಾದರಿಯ ಕ್ರಿಕೆಟ್ ಇತಿಹಾಸದಲ್ಲಿ 400 ವಿಕೆಟ್ ಮತ್ತು 6,000 ರನ್ ಪೂರೈಸಿದ ವಿಶ್ವದ ಎರಡನೇ ಆಟಗಾರ ಎಂಬ ಸಾಧನೆಯನ್ನು ಶಕಿಬ್ ಅಲ್ ಹಸನ್ ಮಾಡಿದ್ದಾರೆ. ಶಕಿಬ್ ಲಂಕಾ ವಿರುದ್ಧದ ಪಂದ್ಯದಲ್ಲಿ 22 ಎಸೆತಗಳಲ್ಲಿ 24 ರನ್ ಬಾರಿಸಿ ಈ ವಿಶೇಷ ಸಾಧನೆ ಮಾಡಿದ್ದಾರೆ.
3 / 7
ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಡ್ವೇನ್ ಬ್ರಾವೋ ಅವರಿದ್ದಾರೆ. ಇವರು 6871 ರನ್ ಮತ್ತು 605 ವಿಕೆಟ್ ಕಿತ್ತಿದ್ದಾರೆ. ಶಕಿಬ್ 6009 ರನ್ ಮತ್ತು 419 ವಿಕೆಟ್ ಕಬಳಿಸಿದ್ದಾರೆ.
4 / 7
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಗಳಿಕೆ ಮಾಡಿತು. ತಂಡದ ಪರ ಬ್ಯಾಟಿಂಗ್ನ ಲ್ಲಿ ಅಬ್ಬರಿಸಿದ ಆರಂಭಿಕ ಆಟಗಾರ ಮೆಹ್ದಿ ಹಸನ್ ಮಿರ್ಜಾ(38), ನಾಯಕ ಶಕೀಬ್ ಅಲ್ ಹಸನ್(24), ಅಫಿಫ್ ಹುಸೈನ್(39), ಮೊಹಮ್ಮದುಲ್ಲಾ (27) ಹಾಗೂ ಮೊಸಡಕ್ ಹುಸೈ್ (24) ರನ್ಗಳ ಕೊಡುಗೆ ನೀಡಿದರು.
5 / 7
184 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಂಡಿತು. ನಿಸಂಕಾ ಮತ್ತು ಕುಸಾಲ್ ಮೆಂಡಿಸ್ ತಂಡಕ್ಕೆ 45 ರನ್ ಗಳ ಕಾಣಿಕೆ ನೀಡಿದರು. 20 ರನ್ ಗಳಿಸಿ ನಿಸಾಂಕ್ ಔಟಾದರರು. ಇದರ ಬೆನ್ನಲ್ಲೇ ದಿಢೀರ್ ಮತ್ತೆ 3 ವಿಕೆಟ್ ಉರುಳಿದವು. ಈ ಸಂದರ್ಭ ತಂಡಕ್ಕೆ ಮೆಂಡಿಸ್ ಹಾಗೂ ನಾಯಕ ದಸನ್ ಶನಕ ಆಸರೆಯಾದರು.
6 / 7
ಮೆಂಡಿಸ್ 37 ಎಸೆತಗಳಲ್ಲಿ 4 ಫೋರ್, 3 ಸಿಕ್ಸರ್ ಸಿಡಿಸಿ 60 ರನ್ ಗಳಿಸಿದರೆ, 33 ಎಸೆತಗಳಲ್ಲಿ ಶನಕ 45ರನ್ ಚಚ್ಚಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿ ನಿರ್ಗಮಿಸಿದರು. ಶ್ರೀಲಂಕಾ ತಂಡಕ್ಕೆ ಗೆಲಲ್ಲು ಕೊನೆಯ 12 ಎಸೆತಗಳಲ್ಲಿ 25 ರನ್ ಗಳ ಅವಶ್ಯಕತೆ ಇತ್ತು.
7 / 7
ಈ ವೇಳೆ ಉತ್ತಮವಾಗಿ ಆಡ್ತಿದ್ದ ಕರುಣರತ್ನೆ (16) ರನೌಟ್ ಬಲೆಗೆ ಬಿದ್ದರು. ಆದರೆ, ಅಸಿತಾ ಫೆರ್ನಾಂಡೋ ಕೊನೆಯ ಓವರ್ ನಲ್ಲಿ ಎರಡು ಬೌಂಡರಿ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಶ್ರೀಲಂಕಾ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿದೆ.
Published On - 11:36 am, Fri, 2 September 22