- Kannada News Photo gallery Cricket photos Ravindra Jadeja got one wicket became the most successful Indian in the Asia Cup
Asia Cup 2022: ತೆಗೆದಿದ್ದು ಒಂದೇ ಒಂದು ವಿಕೆಟ್; ಆದರೂ ಏಷ್ಯಾಕಪ್‌ನಲ್ಲಿ ಭಾರತದ ಪರ ದಾಖಲೆ ಬರೆದ ಜಡೇಜಾ..!
Ravindra Jadeja: ಜಡೇಜಾ ಈಗ ಏಷ್ಯಾಕಪ್‌ನಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿದ್ದು, ಇದು ಭಾರತದ ಪರ ಒಬ್ಬ ಬೌಲರ್ ಪಡೆದಿರುವ ಗರಿಷ್ಠ ವಿಕೆಟ್ಗಳಾಗಿವೆ.
Updated on: Sep 01, 2022 | 9:06 PM

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಕಳೆದ ಕೆಲ ಸಮಯದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಜಡೇಜಾ ಅವರ ಪ್ರದರ್ಶನ ಹಾಗೇ ಉಳಿದಿದೆ. ಬೌಲಿಂಗ್‌ನಲ್ಲಿ ಅವರನ್ನು ಕೆಲವೊಮ್ಮೆ ಪ್ರಶ್ನಿಸಲಾಗಿದ್ದರೂ, ಏಷ್ಯಾಕಪ್ 2022 ರ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ, ಜಡೇಜಾ ಅತ್ಯುತ್ತಮ ಬೌಲಿಂಗ್‌ನೊಂದಿಗೆ ಲಯಕ್ಕೆ ಮರಳುವುದನ್ನು ಸೂಚಿಸಿದರು. ಇದರೊಂದಿಗೆ ಅವರ ಹೆಸರಲ್ಲಿ ದಾಖಲೆ ಕೂಡ ಮಾಡಿದ್ದಾರೆ.

ಹಾಂಕಾಂಗ್ ವಿರುದ್ಧದ ಎರಡನೇ ಪಂದ್ಯದಲ್ಲಿ ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 1 ವಿಕೆಟ್ ಪಡೆದರು. ಜಡ್ಡು 35 ಎಸೆತಗಳಲ್ಲಿ 41 ರನ್ ಗಳಿಸಿದ ಬಾಬರ್ ಹಯಾತ್ ವಿಕೆಟ್ ಪಡೆದರು.

ಈ ವಿಕೆಟ್‌ನೊಂದಿಗೆ ಜಡೇಜಾ ಏಷ್ಯಾಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದರು. ಜಡೇಜಾ ಈಗ ಏಷ್ಯಾಕಪ್‌ನಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿದ್ದು, ಇದು ಭಾರತದ ಪರ ಒಬ್ಬ ಬೌಲರ್ ಪಡೆದಿರುವ ಗರಿಷ್ಠ ವಿಕೆಟ್ಗಳಾಗಿವೆ.

ಜೊತೆಗೆ ಎಡಗೈ ಸ್ಪಿನ್ನರ್ ಜಡೇಜಾ ಭಾರತದ ಮಾಜಿ ಆಲ್‌ರೌಂಡರ್ ಮತ್ತು ಎಡಗೈ ವೇಗಿ ಇರ್ಫಾನ್ ಪಠಾಣ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಪಠಾಣ್ 22 ವಿಕೆಟ್ ಪಡೆದು ಭಾರತದ ಪರ ಏಷ್ಯಾಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

ಅಂದಹಾಗೆ, ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಶ್ರೀಲಂಕಾದ ಶ್ರೇಷ್ಠ ವೇಗದ ಬೌಲರ್ ಲಸಿತ್ ಮಾಲಿಂಗ ಹೆಸರಿನಲ್ಲಿದೆ. ಮಾಲಿಂಗ 15 ಇನ್ನಿಂಗ್ಸ್‌ಗಳಲ್ಲಿ 33 ವಿಕೆಟ್‌ಗಳನ್ನು ಕಬಳಿಸಿದ್ದಾರೆ.




