Updated on: Sep 03, 2022 | 10:30 AM
ಹದಿನೈದನೇ ಆವೃತ್ತಿಯ ಏಷ್ಯಾಕಪ್ 2022 (Asia Cup 2022) ಟೂರ್ನಿ ರೋಚಕತೆ ಸೃಷ್ಟಿಸಿದೆ. ಗ್ರೂಪ್ ಹಂತದ ಎಲ್ಲ ಪಂದ್ಯಗಳು ಮುಕ್ತಾಯಗೊಂಡಿದ್ದು ಇಂದಿನಿಂದ ಸೂಪರ್ 4 ಹಂತದ ಪಂದ್ಯಗಳು ಶುರುವಾಗಲಿದೆ.
ಸೂಪರ್ 4 ಹಂತದ ಪಂದ್ಯ ಸೆ. 3 ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಬಿ ಗ್ರೂಪ್ನ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಲಿದೆ. ಭಾನುವಾರದ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು ಭಾರತ ಹಾಗೂ ಪಾಕಿಸ್ತಾನ ನಡುವೆ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಇಂಡೋ-ಪಾಕ್ ನಡು ಮತೊಮ್ಮೆ ರೋಚಕ ಕಾದಟ ವೀಕ್ಷಿಸಲು ಅಭಿಮಾನಿಗಳಂತು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ಪಂದ್ಯಕ್ಕೆ ಭಾರತದ ಆಟಗಾರರು ಕೂಡ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಯುಜ್ವೇಂದ್ರ ಚಹಲ್ ಬೊಂಬಾಟ್ ಪ್ರ್ಯಾಕ್ಟೀಸ್ ನಡೆಸುತ್ತಿದ್ದರೆ, ರವೀಂದ್ರ ಜಡೇಜಾ ಇಂಜುರಿ ಕಾರಣದಿಂದ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ರವೀಂದ್ರ ಜಡೇಜಾ ಹೊರಬಿದ್ದ ಕಾರಣ ಆರ್. ಅಶ್ವಿನ್ ಅಥವಾ ರವಿ ಬಿಷ್ಟೋಯ್ ಪಾಕ್ ವಿರುದ್ಧ ಕಣಕ್ಕಿಳಿಯಬಹುದು.
ಇನ್ನು ಸೆಪ್ಟೆಂಬರ್ 6 ರಂದು ಭಾರತ ದುಬೈನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ.
ಸೆ. 8 ರಂದು ಭಾರತ– ಅಫ್ಘಾನಿಸ್ತಾನ ಸೆಣೆಸಾಟ ನಡೆಸಲಿದೆ. ಏಷ್ಯಾಕಪ್ 2022 ಫೈನಲ್ ಫೈಟ್ ಸೆಪ್ಟೆಂಬರ್ 11 ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ಈ ಬಾರಿಯ ಏಷ್ಯಾಕಪ್ನಲ್ಲಿ ಅರ್ಶ್ ದೀಪ್ ಸಿಂಗ್ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಿಲ್ಲ.
ಪಾಕ್ ವಿರುದ್ಧದ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂತು.