Shamar Joseph: ಬರೋಬ್ಬರಿ 7 ವಿಕೆಟ್​: ಹೊಸ ಇತಿಹಾಸ ರಚಿಸಿದ ಶಮರ್

| Updated By: ಝಾಹಿರ್ ಯೂಸುಫ್

Updated on: Jan 28, 2024 | 2:30 PM

Australia vs West Indies: ಬ್ರಿಸ್ಬೇನ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿರುವ ಶಮರ್ ಜೋಸೆಫ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

1 / 8
ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾಗೆ ಗರ್ವಭಂಗವಾಗಿದೆ. ರಣರೋಚಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ 8 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ 27 ವರ್ಷಗಳ ಬಳಿಕ ವಿಂಡೀಸ್ ಪಡೆ ಆಸೀಸ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದನ್ನು ಗೆದ್ದುಕೊಂಡಿದೆ.

2 / 8
ಈ ಐತಿಹಾಸಿಕ ಗೆಲುವಿನ ರೂವಾರಿ ವಿಂಡೀಸ್ ವೇಗಿ ಶಮರ್ ಜೋಸೆಫ್. 24 ವರ್ಷದ ಯುವ ವೇಗದ ಬೌಲರ್​ಗೆ ಇದು ಚೊಚ್ಚಲ ಟೆಸ್ಟ್ ಸರಣಿ. ಮೊದಲ ಪಂದ್ಯದಲ್ಲಿ 5 ವಿಕೆಟ್​ ಕಬಳಿಸಿ ಮಿಂಚಿದ್ದ ಶಮರ್ ದ್ವಿತೀಯ ಟೆಸ್ಟ್​ನಲ್ಲೂ ಕಮಾಲ್ ಮಾಡಿದ್ದಾರೆ. ಅದು ಅಂತಿಂಥ ಕಮಾಲ್ ಅಲ್ಲ ಎಂಬುದಷ್ಟೇ ವ್ಯತ್ಯಾಸ.

3 / 8
ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಶಮರ್ ಜೋಸೆಫ್ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಆದರೆ ದ್ವಿತೀಯ ಇನಿಂಗ್ಸ್​ 216 ರನ್​ಗಳ ಸುಲಭ ಗುರಿ ಪಡೆದಿದ್ದ ಆಸ್ಟ್ರೇಲಿಯಾಗೆ ಯುವ ವೇಗಿ ಮಾರಕವಾಗಿ ಪರಿಣಮಿಸಿದರು. ಅನಿರೀಕ್ಷಿತ ಬೌನ್ಸರ್​ಗಳ ಮೂಲಕ ಆಸ್ಟ್ರೇಲಿಯನ್ನರನ್ನು ಕಾಡಿದ ಶಮರ್ ಪಂದ್ಯದ ಗತಿಯನ್ನೇ ಬದಲಿಸುವ ಸೂಚನೆ ನೀಡಿದ್ದರು.

4 / 8
ಅದರಂತೆ ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್​, ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹ್ಯಾಝಲ್​ವುಡ್​ಗೆ ಪೆವಿಯನ್ ಹಾದಿ ತೋರಿಸಿದರು. ಅಲ್ಲದೆ ಕೇವಲ 11.5 ಓವರ್​ಗಳಲ್ಲಿ 68 ರನ್ ನೀಡಿ 7 ವಿಕೆಟ್​ ಕಬಳಿಸಿ ವೆಸ್ಟ್ ಇಂಡೀಸ್ ತಂಡಕ್ಕೆ 8 ರನ್​ಗಳ ರೋಚಕ ಜಯ ತಂದುಕೊಟ್ಟರು. ಈ ಐತಿಹಾಸಿಕ ಗೆಲುವಿನೊಂದಿಗೆ ಶಮರ್ ಜೋಸೆಫ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ..

5 / 8
ಆಸ್ಟ್ರೇಲಿಯಾದಲ್ಲಿ ಆಡಿದ ಚೊಚ್ಚಲ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 5 ಅಥವಾ 5+ ವಿಕೆಟ್​ಗಳನ್ನು ಕಬಳಿಸಿದ ಮೊದಲ ವಿಂಡೀಸ್ ವೇಗಿ ಎಂಬ ದಾಖಲೆ ಶಮರ್ ಜೋಸೆಫ್ ಪಾಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಶಮರ್ 94 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಇದೀಗ 68 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ಈ ವಿಶೇಷ ದಾಖಲೆ ಬರೆದಿದ್ದಾರೆ.

6 / 8
ಹಾಗೆಯೇ ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 7 ವಿಕೆಟ್ ಪಡೆದ ವೆಸ್ಟ್ ಇಂಡೀಸ್​ನ 4ನೇ ಬೌಲರ್ ಎಂಬ ಹೆಗ್ಗಳಿಕೆಗೆ ಶಮರ್ ಜೋಸೆಫ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಕರ್ಟ್ಲಿ ಆಂಬ್ರೋಸ್ (7/25, 1993), ಆಂಡಿ ರಾಬರ್ಟ್ಸ್ (7/54, 1975), ಮತ್ತು ಗೆರ್ರಿ ಗೊಮೆಜ್ (7/55, 1952) ಈ ಸಾಧನೆ ಮಾಡಿದ್ದರು. ಇದೀಗ ಈ ವಿಶೇಷ ಸಾಧಕರ ಪಟ್ಟಿಗೆ ಶಮರ್ (7/68, 2024) ಕೂಡ ಸೇರ್ಪಡೆಯಾಗಿದ್ದಾರೆ.

7 / 8
ಇನ್ನು ಅಡಿಲೇಡ್ ಓವಲ್​ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಶಮರ್ ಜೋಸೆಫ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಎಸೆದ ಮೊದಲ ಎಸೆತದಲ್ಲೇ ಸ್ಟೀವ್ ಸ್ಮಿತ್ ವಿಕೆಟ್ ಪಡೆದಿದ್ದರು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಎರಡನೇ ವೆಸ್ಟ್ ಇಂಡೀಸ್ ಬೌಲರ್ ಎನಿಸಿಕೊಂಡಿದ್ದರು.

8 / 8
ಇದೀಗ ಕರಾರುವಾಕ್ ದಾಳಿ ಮೂಲಕ 7 ವಿಕೆಟ್​ ಉರುಳಿಸಿ ಶಮರ್ ಜೋಸೆಫ್ ವೆಸ್ಟ್ ಇಂಡೀಸ್ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ 24ರ ಹರೆಯದ ಯುವ ವೇಗಿ ಕ್ರಿಕೆಟ್​ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದು ವಿಶೇಷ.