ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಈ ಸರಣಿಯ ನಂತರವೂ ಆಸ್ಟ್ರೇಲಿಯ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ ತಂಡದ ಗೆಲುವಿನ ಶೇಕಡಾವಾರು ಕಡಿಮೆಯಾಗಿದೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯ ತಂಡದ ಗೆಲುವಿನ ಶೇಕಡಾವಾರು 61.11ರಷ್ಟಿದ್ದು, ಈಗ ಅದು ಶೇಕಡಾ 55ಕ್ಕೆ ಇಳಿದಿದೆ.