IND vs SA: ಮೊದಲ ಏಕದಿನಕ್ಕೆ ಭರ್ಜರಿ ಅಭ್ಯಾಸ: ಮ್ಯಾಜಿಕ್ ಮಾಡುತ್ತಾ ಧವನ್ ಪಡೆ

| Updated By: Vinay Bhat

Updated on: Oct 06, 2022 | 10:58 AM

ಇಂದು ಲಕ್ನೋದ ಅಟಲ್ ಬಿಹಾರಿ ವಾಜಪೈ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.

1 / 8
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು 2-1 ಅಂಕಗಳ ಅಂತರದಿಂದ ವಶಪಡಿಸಿಕೊಂಡ ಭಾರತ (India vs South Africa) ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ಇಂದು ಲಕ್ನೋದ ಅಟಲ್ ಬಿಹಾರಿ ವಾಜಪೈ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.

2 / 8
ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ, ಕೆಎಲ್ ರಾಹುಲ್​ರಂತಹ ಸ್ಟಾರ್ ಆಟಗಾರರು ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ ತೆರಳಲಿರುವ ಕಾರಣ ತಂಡವನ್ನು ಶಿಖರ್ ಧವನ್ (Shikhar Dhawan) ಮುನ್ನಡೆಸುತ್ತಿದ್ದಾರೆ. ಇತ್ತ ಹರಿಣಗಳ ಪಡೆಯಲ್ಲಿ ಹೆಚ್ಚಿನ ಬದಲಾವಣೆಯಿಲ್ಲ. ತೆಂಬಾ ಬವುಮಾ ನಾಯಕನಾಗಿದ್ದಾರೆ.

3 / 8
ಭಾರತ ಪರ ಓಪನರ್​ಗಳಾಗಿ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಆಡಲಿದ್ದಾರೆ. ಉಪ ನಾಯಕನ ಜವಾಬ್ದಾರಿ ಹೊತ್ತಿರುವ ಶ್ರೇಯಸ್ ಅಯ್ಯರ್ ಮೂರನೇ ಸ್ಥಾನದಲ್ಲಿದ್ದರೆ ಇಶಾನ್ ಕಿಶನ್ ನಂತರದ ಸ್ಥಾನದಲ್ಲಿ ಆಡಬಹುದು. ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಜವಾಬ್ದಾರಿ ಹೊರಲಿದ್ದಾರೆ.

4 / 8
ರಜತ್ ಪಟಿದಾರ್ ಇಂದಿನ ಪಂದ್ಯದ ಮೂಲಕ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಪಟಿದಾರ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ.

5 / 8
ರಾಹುಲ್ ತ್ರಿಪಾಠಿ ಕೂಡ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬಹುದು. ಆಲ್ರೌಂಡರ್​ಗಳಾಗಿ ಶಾರ್ದೂಲ್ ಠಾಕೂರ್ ಅಥವಾ ದೀಪಕ್ ಚಹರ್ ಇರಲಿದ್ದಾರೆ.

6 / 8
ಸ್ಪಿನ್ನರ್​ಗಳಾಗಿ ಕುಲ್ದೀಪ್ ಯಾದವ್ ಹಾಗೂ ರವಿ ಬಿಷ್ಟೋಯಿ ಅವರಿದ್ದು ಮೊಹಮ್ಮದ್ ಸಿರಾಜ್​ಗೆ ಕೂಡ ಅವಕಾಶ ಸಿಗಬಹುದು. ಇವರ ಜೊತೆಗೆ ರುತುರಾಜ್ ಗಾಯಕ್ವಾಡ್, ಶಹ್ಬಾಜ್ ಅಹ್ಮದ್, ಆವೇಶ್ ಖಾನ್ ಕೂಡ ತಂಡದಲ್ಲಿದ್ದಾರೆ.

7 / 8
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು, ಪಂದ್ಯದ ಟಾಸ್ 1 ಗಂಟೆಗೆ ನಡೆಯಲಿದೆ. ರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು. ಚಂದಾದಾರಿಕೆಯೊಂದಿಗೆ Hotstar ನಲ್ಲಿ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು.

8 / 8
ಭಾರತ ತಂಡ: ಶಿಖರ್ ಧವನ್(ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್(ಉಪ ನಾಯಕ), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.