Shoaib Akhtar: ಭಗವದ್ಗೀತೆ ಶ್ಲೋಕ ಹಂಚಿಕೊಂಡ ಶೊಯೇಬ್ ಅಖ್ತರ್

|

Updated on: Jul 01, 2024 | 12:54 PM

Shoaib Akhtar's Record: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗದಲ್ಲಿ ಚೆಂಡೆಸೆದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ಶೊಯೇಬ್ ಅಖ್ತರ್ ಹೆಸರಿನಲ್ಲಿದೆ. 2002 ರಲ್ಲಿ ನ್ಯೂಝಿಲೆಂಡ್ ವಿರುದ್ದದ ಪಂದ್ಯದಲ್ಲಿ ಅಖ್ತರ್ ಬರೋಬ್ಬರಿ ಗಂಟೆ 161.3 ವೇಗದಲ್ಲಿ ಚೆಂಡೆಸೆದು ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ದಾಖಲೆ ನಿರ್ಮಾಣವಾಗಿ 2 ದಶಕಗಳೇ ಕಳೆದರೂ ಇದನ್ನು ಮೀರುವಂತೆ ಯಾರಿಂದಲೂ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ.

1 / 6
ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶೊಯೇಬ್ ಅಖ್ತರ್ (Shoaib Akhtar) ಸಖತ್ ಸುದ್ದಿಯಾಗಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್. ಈ ಪೋಸ್ಟ್ ಭಗವದ್ಗೀತೆಗೆ ಸಂಬಂಧಿಸಿದ್ದು ಎಂಬುದೇ ಇಲ್ಲಿ ವಿಶೇಷ.

2 / 6
ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೊಯೇಬ್ ಅಖ್ತರ್ ಭಗವದ್ಗೀತೆ ಶ್ಲೋಕವನ್ನು ಹಂಚಿಕೊಂಡಿದ್ದಾರೆ. ಅದು ಕೂಡ ಭಗವಾನ್ ವಿಷ್ಣುವಿನ ಅವತಾರವಾದದ ಚಿತ್ರದೊಂದಿಗೆ. ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರುವಿಲ್ಲ ಎನ್ನುವ ಶ್ಲೋಕದ ವಿಡಿಯೋವನ್ನು ಅಖ್ತರ್ ಶೇರ್ ಮಾಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.

3 / 6
ಪಾಕಿಸ್ತಾನ್ ಕ್ರಿಕೆಟಿಗನ ಈ ಪೋಸ್ಟ್​ಗೆ ಭಾರತೀಯ ಕ್ರಿಕೆಟ್​ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಅತ್ತ ಪಾಕ್​ನ ಕೆಲವರು ತಗಾದೆ ತೆಗೆದಿದ್ದಾರೆ. ಇದಾಗ್ಯೂ ಶೊಯೇಬ್ ಅಖ್ತರ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಿಂದ ಈ ಪೋಸ್ಟ್ ಅನ್ನು ಅಳಿಸಿ ಹಾಕಿಲ್ಲ ಎಂಬುದು ವಿಶೇಷ.

4 / 6
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಶೊಯೇಬ್ ಅಖ್ತರ್ ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದರು. ಅಲ್ಲದೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಬೇಕೆಂದು ಹೇಳಿದ್ದರು. ಕಳೆದ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಸೋತಿದ್ದ ಭಾರತ ತಂಡವು ಈ ಬಾರಿ ವಿಶ್ವಕಪ್ ಗೆಲ್ಲಬೇಕು, ರೋಹಿತ್ ಶರ್ಮಾ ಅದಕ್ಕೆ ಅರ್ಹರು ಎಂಬ ಹೇಳಿಕೆ ನೀಡಿದ್ದರು.

5 / 6
ಇದೀಗ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಗೆಲುವಿನ ಬಳಿಕ ಮಾತನಾಡಿದ್ದ ಅಖ್ತರ್, ಅರ್ಹ ತಂಡಕ್ಕೆ ವಿಶ್ವಕಪ್ ಟ್ರೋಫಿ ಸಂದಿದೆ. ರೋಹಿತ್ ಶರ್ಮಾ ಕೊನೆಗೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಅಖ್ತರ್, ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರುವಿಲ್ಲ ಎನ್ನುವ ಶ್ಲೋಕದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿರುವುದು ವಿಶೇಷ.

6 / 6
ಪಾಕಿಸ್ತಾನ್ ಪರ 46 ಟೆಸ್ಟ್ ಪಂದ್ಯಗಳನ್ನಾಡಿರುವ ಶೊಯೇಬ್ ಅಖ್ತರ್ 178	ವಿಕೆಟ್ ಕಬಳಿಸಿದ್ದಾರೆ. 163 ಏಕದಿನ ಪಂದ್ಯಗಳಿಂದ 247 ವಿಕೆಟ್ ಪಡೆದರೆ, 15 ಟಿ20 ಪಂದ್ಯಗಳಿಂದ 19 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗದಲ್ಲಿ ಚೆಂಡೆಸೆದ ವಿಶ್ವ ದಾಖಲೆ ಕೂಡ ಅಖ್ತರ್ ಹೆಸರಿನಲ್ಲಿದೆ. 2002 ರಲ್ಲಿ ನ್ಯೂಝಿಲೆಂಡ್ ವಿರುದ್ದ 161.3 kph ವೇಗದಲ್ಲಿ ಚೆಂಡೆಸೆದು ಶೊಯೇಬ್ ಅಖ್ತರ್ ಈ ವಿಶ್ವ ದಾಖಲೆ ಬರೆದಿದ್ದಾರೆ.

Published On - 12:53 pm, Mon, 1 July 24