ಟೀಮ್ ಇಂಡಿಯಾದಲ್ಲೇ ಇರದ ಶ್ರೇಯಸ್ ಅಯ್ಯರ್​ಗೆ ನಾಯಕತ್ವ?

Updated on: Aug 21, 2025 | 8:54 AM

Team India: ಶ್ರೇಯಸ್ ಅಯ್ಯರ್ ಭಾರತದ ಪರ ಕೊನೆಯ ಬಾರಿ ಟಿ20 ಪಂದ್ಯವಾಡಿದ್ದು 2023 ರಲ್ಲಿ. ಇನ್ನು ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದು 2024 ರಲ್ಲಿ. ಇದಾದ ಬಳಿಕ ಟೀಮ್ ಇಂಡಿಯಾ ಟಿ20 ಹಾಗೂ ಟೆಸ್ಟ್​ ತಂಡಗಳಿಂದ ಹೊರಬಿದ್ದ ಶ್ರೇಯಸ್ ಅಯ್ಯರ್​ಗೆ ಇದೀಗ ನಾಯಕತ್ವ ಒಲಿಯುವ ಸಾಧ್ಯತೆಯಿದೆ. ಅದು ಸಹ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಎಂಬುದು ವಿಶೇಷ.

1 / 5
ಭಾರತ ತಂಡದ ತ್ರಿ ಫಾರ್ಮ್ಯಾಟ್ ಪ್ಲೇಯರ್ ಎನಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ (Shreyas Iyer) ಟೀಮ್ ಇಂಡಿಯಾ ಪರ ಟೆಸ್ಟ್ ಹಾಗೂ ಟಿ20 ಪಂದ್ಯಗಳನ್ನಾಡಿ ವರ್ಷಗಳೇ ಕಳೆದಿವೆ. ಅದರಲ್ಲೂ ಈ ಬಾರಿಯ ಏಷ್ಯಾಕಪ್​ ತಂಡದಲ್ಲಿ ಸ್ಥಾನ ಪಡೆದು ಟಿ20 ಕ್ರಿಕೆಟ್​ಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಅಯ್ಯರ್​ಗೆ ಇದೀಗ ನಿರಾಸೆಯಾಗಿದೆ. ಈ ನಿರಾಸೆಯ ಬೆನ್ನಲ್ಲೇ ಶ್ರೇಯಸ್ ಅಯ್ಯರ್​ಗೆ ಗುಡ್ ನ್ಯೂಸ್​ವೊಂದು ಸಿಗಲಿದೆ ಎಂದು ವರದಿಯಾಗಿದೆ. 

2 / 5
ಹೌದು, ಶ್ರೇಯಸ್ ಅಯ್ಯರ್ ಅವರಿಗೆ ನಾಯಕತ್ವ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಅಂದರೆ ಏಕದಿನ ತಂಡದ ನಾಯಕನಾಗಿ ಅಯ್ಯರ್ ಅವರನ್ನು ಪರಿಗಣಿಸಲಿದ್ದಾರೆ ಎಂದು ವರದಿಯಾಗಿದೆ. ಈ ವರದಿ ಪ್ರಕಾರ ರೋಹಿತ್ ಶರ್ಮಾ ಬಳಿಕ ಶ್ರೇಯಸ್ ಅಯ್ಯರ್ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

3 / 5
2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಶೀಘ್ರದಲ್ಲೇ ಟೀಮ್ ಇಂಡಿಯಾದ ನಾಯಕತ್ವ ಬದಲಾಗಲಿದೆ. ಅದರಂತೆ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ಮುನ್ನ ಶುಭ್​ಮನ್ ಗಿಲ್ ಭಾರತ ಏಕದಿನ ತಂಡದ ನಾಯಕರಾಗಲಿದ್ದಾರೆ ಎನ್ನಲಾಗಿತ್ತು.

4 / 5
ಆದರೀಗ ಶ್ರೇಯಸ್ ಅಯ್ಯರ್ ಅವರಿಗೆ ಏಕದಿನ ತಂಡದ ನಾಯಕತ್ವ ನೀಡಲು ಬಿಸಿಸಿಐ ಆಸಕ್ತಿ ತೋರಿದೆ. ಅತ್ತ ಟೆಸ್ಟ್ ಹಾಗೂ ಟಿ20 ತಂಡಗಳನ್ನು ಶುಭ್​ಮನ್​ ಗಿಲ್ ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ಟಿ20 ವಿಶ್ವಕಪ್ 2026 ಬಳಿಕ ಸೂರ್ಯಕುಮಾರ್ ಯಾದವ್ ಅವರ ಸ್ಥಾನಕ್ಕೆ ಗಿಲ್ ಆಯ್ಕೆಯಾಗುವುದು ಖಚಿತ. ಇದೇ ಕಾರಣದಿಂದಾಗಿ ಏಷ್ಯಾಕಪ್​ಗೆ ಗಿಲ್ ಅವರನ್ನು ಉಪನಾಯಕನಾಗಿ ಹೆಸರಿಸಲಾಗಿದೆ.

5 / 5
ಇದಾಗ್ಯೂ ವರ್ಕ್​ಲೋಡ್ ಮ್ಯಾನೇಜ್ ಮಾಡಲು ಶುಭ್​ಮನ್ ಗಿಲ್ ಅವರಿಗೆ ಏಕದಿನ ತಂಡದ ನಾಯಕತ್ವ ನೀಡದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ರೋಹಿತ್ ಶರ್ಮಾ ಅವರ ಬಳಿಕ ಭಾರತ ಏಕದಿನ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುವುದನ್ನು ಎದುರು ನೋಡಬಹುದು.