AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಸಂಜು ಸ್ಯಾಮ್ಸನ್​ರನ್ನು ಹೊಗಳಿ ಹೊನ್ನ ಶೂಲಕ್ಕೇರಿಸಿದ್ರಾ ಗೌತಮ್ ಗಂಭೀರ್..?

Asia Cup 2025: 2025ರ ಏಷ್ಯಾಕಪ್‌ಗಾಗಿ ಭಾರತದ ಟಿ20 ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ, ಸಂಜು ಸ್ಯಾಮ್ಸನ್ ಅವರ ಸ್ಥಾನ ಅನಿಶ್ಚಿತವಾಗಿದೆ. ಇತ್ತೀಚಿನ ಕಳಪೆ ಪ್ರದರ್ಶನ ಮತ್ತು ಶುಭ್‌ಮನ್ ಗಿಲ್ ಅವರ ಆಗಮನದಿಂದ ಸಂಜು ಅವರ ಆಡುವ ಹನ್ನೊಂದರ ಸ್ಥಾನಕ್ಕೆ ಅಪಾಯವಿದೆ. ಅವರನ್ನು ಗೇಮ್ ಫಿನಿಶರ್ ಆಗಿ ಬಳಸುವ ಸಾಧ್ಯತೆಯೂ ಕಡಿಮೆ. ಗೌತಮ್ ಗಂಭೀರ್ ಅವರ ಹಿಂದಿನ ಹೊಗಳಿಕೆ ಮತ್ತು ಈಗಿನ ನಿರ್ಲಕ್ಷ್ಯದ ನಡುವಿನ ವ್ಯತ್ಯಾಸವೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೃಥ್ವಿಶಂಕರ
|

Updated on:Sep 04, 2025 | 5:44 PM

Share
2025 ರ ಏಷ್ಯಾಕಪ್​ಗೆ ಭಾರತ ಟಿ20 ತಂಡವನ್ನು ಆಯ್ಕೆ ಮಾಡಲಾಗಿದೆ. ಮೀಸಲು ಆಟಗಾರರು ಸೇರಿದಂತೆ ಒಟ್ಟು 20 ಸದಸ್ಯರನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಆದಾಗ್ಯೂ ಆಯ್ಕೆಯಾಗಿರುವ ಈ 20 ಆಟಗಾರರಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ಪ್ರಶ್ನೆಯಾಗಿದೆ. ಕೆಲವರ ಸ್ಥಾನ ಈಗಾಗಲೇ ಖಚಿತವಾಗಿದೆಯಾದರೂ, ಇನ್ನು ಕೆಲವರು ತಮ್ಮ ಸ್ಥಾನವನ್ನು ಮಾತ್ರವಲ್ಲದೆ ಪ್ಲೇಯಿಂಗ್​ 11 ನಿಂದಲೂ ಹೊರಬೀಳುವ ಸಾಧ್ಯತೆಗಳಿವೆ.

1 / 8
 ಆ ರೀತಿ ಆಡುವ ಹನ್ನೊಂದರ ಬಳಗದಿಂದ ಹೊರಬೀಳಬಹುದಾದ ಆಟಗಾರರ ಪಟ್ಟಿಯಲ್ಲಿ ಆರಂಭಿಕ ಸಂಜು ಸ್ಯಾಮ್ಸನ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಟಿ20 ತಂಡದ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಸಂಜು, ಇದೀಗ ತಮ್ಮ ಆರಂಭಿಕ ಸ್ಥಾನವನ್ನು ಕಳೆದುಕೊಳ್ಳುವ ಸನಿಹದಲ್ಲಿದ್ದಾರೆ.

2 / 8
ವಾಸ್ತವವಾಗಿ, ಸಂಜು ಅವರ ಇತ್ತೀಚಿನ ಟಿ20 ಫಾರ್ಮ್ ಸ್ವಲ್ಪ ಕಳಪೆಯಾಗಿದೆ. ಕಳೆದ 5 ಟಿ20 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 51 ರನ್ ಮಾತ್ರ ಗಳಿಸಿದ್ದಾರೆ. ಆದರೆ ಅದಕ್ಕೂ ಮೊದಲು, ಅವರು ಆಡಿದ 5 ಇನ್ನಿಂಗ್ಸ್‌ಗಳಲ್ಲಿ 3 ಶತಕಗಳನ್ನು ಬಾರಿಸಿದ್ದರು. ಅಂದರೆ, ಸಂಜು ಸ್ಯಾಮ್ಸನ್‌ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಎನ್ನಬಹುದು.

3 / 8
ಆದರೀಗ ಏಷ್ಯಾಕಪ್​ಗೆ ಪ್ರಕಟವಾಗಿರುವ ತಂಡದಲ್ಲಿ ಸಂಜು ಆರಂಭಿಕನಾಗಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಏಕೆಂದರೆ ಅವರ ಜಾಗಕ್ಕೆ ಶುಭ್​ಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಸಾಲದೆಂಬಂತೆ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಇದರರ್ಥ ತಂಡದಲ್ಲಿ ಗಿಲ್ ಆಡುವುದು ಖಚಿತವಾಗಿದೆ. ಹೀಗಿರುವಾಗ ಸಂಜು ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು.

4 / 8
ಸಂಜು ಸ್ಯಾಮ್ಸನ್‌ ಈ ಚುಟುಕು ಮಾದರಿಯಲ್ಲಿ ಆರಂಭಿಕನಾಗಿ ಆಡಿದ್ದೆ ಹೆಚ್ಚು. ಹೀಗಿರುವಾಗ ಅವರನ್ನು ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣುವುದು ಸ್ವಲ್ಪ ಕಷ್ಟ. ಅಲ್ಲದೆ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಜಿತೇಶ್ ಶರ್ಮಾ ಈ ಹಿಂದೆ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸಂಜು ಬದಲಿಗೆ ಜಿತೇಶ್​ಗೆ ಆಯ್ಕೆದಾರರು ಮಣೆ ಹಾಕಿದರೆ ಅಚ್ಚರಿ ಪಡಬೇಕಾಗಿಲ್ಲ.

5 / 8
ಇನ್ನು ಸಂಜುರನ್ನು ಆರಂಭಿಕನಾಗಿ ಅಲ್ಲದೆ ಬೇರೆ ಕ್ರಮಾಂಕದಲ್ಲಿ ಆಡಿಸಬಹುದು ಅಂದುಕೊಂಡರೆ, ಅದು ಕೂಡ ಆಗದ ಮಾತು. ಏಕೆಂದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಎಡ, ಬಲ ಸಂಯೋಜನೆಯನ್ನು ಪರಿಗಣನೆಗೆ ತೆಗದುಕೊಂಡರೆ, ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಬರಲಿದ್ದಾರೆ. ಆ ಬಳಿಕ ಸೂರ್ಯ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಬರಲಿದ್ದಾರೆ.

6 / 8
ಹೀಗಾಗಿ ಒಂದು ವೇಳೆ ಸಂಜು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ ಅವರಿಗೆ ಯಾವ ಕ್ರಮಾಂಕ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಇದೆಲ್ಲವನ್ನು ಗಮನಿಸಿದಾಗ ಒಂದು ಸಮಯದಲ್ಲಿ ಸಂಜು ಸ್ಯಾಮ್ಸನ್​ರನ್ನು ಹಾಡಿ ಹೊಗಳಿದ್ದ ಮುಖ್ಯ ಕೋಚ್ ಗೌತಮ್ ಗಂಭೀರ್, ಇದೀಗ ತಮ್ಮ ಅಧಿಕಾರವದಿಯಲ್ಲಿ ಸಂಜುರನ್ನು ಕಡೆಗಣಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ.

7 / 8
ವಾಸ್ತವವಾಗಿ ಇದೇ ಗೌತಮ್ ಗಂಭೀರ್ 2020 ರಲ್ಲಿ ತಮ್ಮ ಎಕ್ಸ್​ ಖಾತೆಯಲ್ಲಿ ಸಂಜುರನ್ನು ಹೊಗಳಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ಸಂಜು ಸ್ಯಾಮ್ಸನ್ ಭಾರತದ ಅತ್ಯುತ್ತಮ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್. ನನ್ನ ಈ ನಿಲುವಿನ ಬಗ್ಗೆ ಯಾರಾದರೂ ಚರ್ಚೆಗೆ ಸಿದ್ಧರಿದ್ದೀರಾ?" ಎಂಬ ಪ್ರಶ್ನೆಯನ್ನು ಕೂಡ ತಮ್ಮ ಪೋಸ್ಟ್‌ನಲ್ಲಿ ಕೇಳಿದ್ದರು. ಐದು ವರ್ಷಗಳ ಹಿಂದೆ ಸಂಜು ಬಗ್ಗೆ ಈ ರೀತಿಯ ಅಭಿಪ್ರಾಯ ಹೊಂದಿದ್ದ ಗಂಭೀರ್, ಇದೀಗ ಅವರನ್ನು ಟಿ20 ತಂಡದಿಂದ ಹೊರಹಾಕಲು ನೋಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

8 / 8

Published On - 6:15 pm, Wed, 20 August 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!