Shubman Gill: ಸಚಿನ್ರ ಮತ್ತೊಂದು ವಿಶ್ವ ದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್
TV9 Web | Updated By: ಝಾಹಿರ್ ಯೂಸುಫ್
Updated on:
Dec 05, 2023 | 9:23 PM
Shubman Gill Records: ಶುಭ್ಮನ್ ಗಿಲ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 50+ ಸ್ಕೋರ್ಗಳ ದಾಖಲೆಯೊಂದನ್ನು ಮುರಿದಿದ್ದರು. ಭಾರತದ ಪರ ಮೊದಲ 30 ಪಂದ್ಯಗಳಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್ಗಳಿಸಿದ ಆರಂಭಿಕ ಆಟಗಾರ ಎಂಬ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.
1 / 7
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಶುಭ್ಮನ್ ಗಿಲ್ ಸರಿಗಟ್ಟಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
2 / 7
ಸಚಿನ್ ತೆಂಡೂಲ್ಕರ್ 1998 ರಲ್ಲಿ ಏಕದಿನ ಕ್ರಿಕೆಟ್ನಲ್ಲಿ 100+ ಸ್ಟ್ರೈಕ್ ರೇಟ್ನಲ್ಲಿ 1894 ರನ್ ಕಲೆಹಾಕಿದ್ದರು. ಈ ಮೂಲಕ ಒಂದೇ ವರ್ಷದಲ್ಲಿ ನೂರರ ಸ್ಟ್ರೈಕ್ನಲ್ಲಿ ಸಾವಿರದ ಐನೂರಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.
3 / 7
ವಿಶೇಷ ಎಂದರೆ 2023 ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಶುಭ್ಮನ್ ಗಿಲ್ 100+ ಸ್ಟ್ರೈಕ್ ರೇಟ್ನಲ್ಲಿ 1584 ರನ್ ಕಲೆಹಾಕಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 100ರ ಸ್ಟ್ರೈಕ್ ರೇಟ್ನಲ್ಲಿ ಒಂದೇ ವರ್ಷದಲ್ಲಿ 1500+ ರನ್ಗಳಿಸಿದ ದಾಖಲೆಯನ್ನು ಶುಭ್ಮನ್ ಗಿಲ್ ಸರಿಗಟ್ಟಿದ್ದಾರೆ.
4 / 7
ಇನ್ನು 1998 ರಲ್ಲಿ ಸಚಿನ್ ತೆಂಡೂಲ್ಕರ್ 33 ಏಕದಿನ ಇನಿಂಗ್ಸ್ಗಳ ಮೂಲಕ 1854 ರನ್ಗಳ ಸಾಧನೆ ಮಾಡಿದ್ದರು. ಆ ವರ್ಷ 9 ಶತಕಗಳನ್ನು ಬಾರಿಸಿ ಮಾಸ್ಟರ್ ಬ್ಲಾಸ್ಟರ್ ಅಬ್ಬರಿಸಿದ್ದರು. ಅಲ್ಲದೆ 7 ಅರ್ಧಶತಕಗಳನ್ನು ಕೂಡ ಸಿಡಿಸಿದ್ದರು.
5 / 7
ಈ ವರ್ಷ ಶುಭ್ಮನ್ ಗಿಲ್ 29 ಏಕದಿನ ಇನಿಂಗ್ಸ್ಗಳ ಮೂಲಕ 1584 ರನ್ ಪೇರಿಸಿದ್ದಾರೆ. ಈ ವೇಳೆ 5 ಶತಕಗಳು ಹಾಗೂ 9 ಅರ್ಧಶತಕಗಳು ಮೂಡಿಬಂದಿವೆ.
6 / 7
ಇದಕ್ಕೂ ಮುನ್ನ ಶುಭ್ಮನ್ ಗಿಲ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 50+ ಸ್ಕೋರ್ಗಳ ದಾಖಲೆಯೊಂದನ್ನು ಮುರಿದಿದ್ದರು. ಭಾರತದ ಪರ ಮೊದಲ 30 ಪಂದ್ಯಗಳಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್ಗಳಿಸಿದ ಆರಂಭಿಕ ಆಟಗಾರ ಎಂಬ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.
7 / 7
ಮಾಸ್ಟರ್ ಬ್ಲಾಸ್ಟರ್ ಮೊದಲ 30 ಪಂದ್ಯಗಳಲ್ಲಿ 12 ಬಾರಿ 50+ ಸ್ಕೋರ್ಗಳಿಸಿ ದಾಖಲೆ ನಿರ್ಮಿಸಿದ್ದರು. ಆದರೆ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಮೊದಲ 30 ಪಂದ್ಯಗಳಲ್ಲಿ 13 ಬಾರಿ 50+ ಸ್ಕೋರ್ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದರು. ಇದೀಗ 100+ ಸ್ಟ್ರೈಕ್ ರೇಟ್ ಮತ್ತು 1500+ ರನ್ಗಳ ದಾಖಲೆಯನ್ನು ಕೂಡ ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.