IPL 2024: ಗುಜರಾತ್ ಟೈಟಾನ್ಸ್​ ತಂಡದಿಂದ ಹೊರಬರಲಿದ್ದಾರಾ ಶುಭ್​ಮನ್ ಗಿಲ್?

| Updated By: ಝಾಹಿರ್ ಯೂಸುಫ್

Updated on: Jun 03, 2023 | 8:28 PM

Shubman Gill: ಶುಭ್​ಮನ್ ಗಿಲ್ ಕಳೆದ 4 ಸೀಸನ್​ಗಳಿಂದಲೂ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಐಪಿಎಲ್ 2020 ರಲ್ಲಿ 440 ರನ್ ಕಲೆಹಾಕಿದರೆ, 2021 ರಲ್ಲಿ 478 ರನ್​ ಬಾರಿಸಿದ್ದರು. ಇನ್ನು 2022 ರಲ್ಲಿ 483 ರನ್​ಗಳಿಸಿದ್ದರು. ಈ ಬಾರಿ 890 ರನ್​ ಬಾರಿಸಿ ಟಾಪ್ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.

1 / 16
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮುಕ್ತಾಯದ ಬೆನ್ನಲ್ಲೇ ಇದೀಗ ಐಪಿಎಲ್ 2024 ರ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಕೆಲ ಫ್ರಾಂಚೈಸಿಗಳ ಮಾಲೀಕರು ಕಳಪೆ ಪ್ರದರ್ಶನ ನೀಡಿದ ಆಟಗಾರರ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ಮುಂದಿನ ಸೀಸನ್​ಗೂ ಮುನ್ನವೇ ಕೆಲ ಆಟಗಾರರಿಗೆ ತಂಡದಿಂದ ಗೇಟ್ ಪಾಸ್ ಸಿಗಲಿದೆ.

2 / 16
ಇದಾಗ್ಯೂ ಕೆಲ ಫ್ರಾಂಚೈಸಿಗಳು ಮುಂದಿನ ಸೀಸನ್​ಗಾಗಿ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. ಈ ಪಟ್ಟಿಯಲ್ಲಿ ಕೇಳಿ ಬರುತ್ತಿರುವ ಪ್ರಮುಖ ಹೆಸರೆಂದರೆ ಶುಭ್​ಮನ್ ಗಿಲ್.

3 / 16
ಗುಜರಾತ್ ಟೈಟಾನ್ಸ್ ಪರ ಅದ್ಭುತ ಪ್ರದರ್ಶನ ನೀಡಿರುವ ಶುಭ್​ಮನ್ ಗಿಲ್ ಈ ಬಾರಿ ಒಟ್ಟು 890 ರನ್​ ಕಲೆಹಾಕಿದ್ದರು. ಅಲ್ಲದೆ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇದೀಗ ಗಿಲ್​ಗಾಗಿ ಕೆಲ ಫ್ರಾಂಚೈಸಿಗಳು ಎದುರು ನೋಡುತ್ತಿದೆ ಎಂದು ವರದಿಯಾಗಿದೆ.

4 / 16
ಏಕೆಂದರೆ ಶುಭ್​ಮನ್ ಗಿಲ್ ಕಳೆದ 4 ಸೀಸನ್​ಗಳಿಂದಲೂ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಐಪಿಎಲ್ 2020 ರಲ್ಲಿ 440 ರನ್ ಕಲೆಹಾಕಿದರೆ, 2021 ರಲ್ಲಿ 478 ರನ್​ ಬಾರಿಸಿದ್ದರು. ಇನ್ನು 2022 ರಲ್ಲಿ 483 ರನ್​ಗಳಿಸಿದ್ದರು. ಈ ಬಾರಿ 890 ರನ್​ ಬಾರಿಸಿ ಟಾಪ್ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.

5 / 16
ಇದಾಗ್ಯೂ ಶುಭ್​ಮನ್ ಗಿಲ್​ಗೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ನೀಡುತ್ತಿರುವ ಮೊತ್ತ ಕೇವಲ 8 ಕೋಟಿ ರೂ. ಮಾತ್ರ. ಅಂದರೆ ಇತರೆ ಆಟಗಾರರಿಗಿಂತ ಗಿಲ್ ಅವರ ಸಂಭಾವನೆ ತುಂಬಾ ಕಡಿಮೆ.

6 / 16
ಏಕೆಂದರೆ ಮುಂಬೈ ಇಂಡಿಯನ್ಸ್​​ ಫ್ರಾಂಚೈಸಿಯು ಇಶಾನ್ ಕಿಶನ್​ಗೆ ನೀಡುತ್ತಿರುವ ಮೊತ್ತ 15.25 ಕೋಟಿ ರೂ., ಮತ್ತೊಂದೆಡೆ ಸಿಎಸ್​ಕೆ ದೀಪಕ್ ಚಹರ್​ಗೆ 14 ಕೋಟಿ ರೂ. ನೀಡುತ್ತಿದೆ. ಹಾಗೆಯೇ ಶ್ರೇಯಸ್ ಅಯ್ಯರ್​ಗೆ ಕೆಕೆಆರ್​ 12.25 ಕೋಟಿ ರೂ. ಪಾವತಿಸುತ್ತಿದ್ದಾರೆ.

7 / 16
ಇನ್ನು ಆರ್​ಸಿಬಿಯಿಂದ ಹರ್ಷಲ್ ಪಟೇಲ್ ಪಡೆಯುತ್ತಿರುವ ಮೊತ್ತ 10.75 ಕೋಟಿ ರೂ. ಇನ್ನು ಶಾರ್ದೂಲ್ ಠಾಕೂರ್ 10.75 ಕೋಟಿ ರೂ. ಪಡೆದರೆ, ಅವೇಶ್ ಖಾನ್ 10 ಕೋಟಿ ರೂ. ಪಡೆಯುತ್ತಿದ್ದಾರೆ.

8 / 16
ಆದರೆ ಸತತ ನಾಲ್ಕು ಸೀಸನ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಶುಭ್​ಮನ್ ಗಿಲ್ ಅವರ ಸಂಭಾವನೆ ಇನ್ನೂ ಕೂಡ ಒಂದಂಕಿಯಲ್ಲೇ ಉಳಿದಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ ಅವರನ್ನು ಹರಾಜಿಗೆ ಕರೆತರುವ ಪ್ರಯತ್ನಕ್ಕೆ ಕೆಲ ಫ್ರಾಂಚೈಸಿಗಳು ಕೈ ಹಾಕಲಿದೆ.

9 / 16
ಇತ್ತ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಈಗಾಗಲೇ ಶುಭ್​ಮನ್ ಗಿಲ್ ಅವರ ಖರೀದಿಗಾಗಿ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಪಂಜಾಬ್ ತಂಡಕ್ಕೆ ಸದ್ಯ ಸ್ಟಾರ್ ಆಟಗಾರನ ಅವಶ್ಯಕತೆಯಿದೆ. ಅದರಲ್ಲೂ ಸ್ಥಳೀಯ ಸ್ಟಾರ್ ಆಟಗಾರ ಸಿಕ್ಕರೆ ಪಂಜಾಬ್ ಕಿಂಗ್ಸ್ ಕೈ ಬಿಡುವ ಮಾತೇ ಇಲ್ಲ.

10 / 16
ಏಕೆಂದರೆ ಶುಭ್​ಮನ್ ಗಿಲ್ ಪಂಜಾಬ್ ಮೂಲದ ಕ್ರಿಕೆಟಿಗ. ಆತನನ್ನು ಕರೆ ತಂದು ನಾಯಕತ್ವ ನೀಡಿದರೆ ತಂಡ ವರ್ಚಸ್ಸು ಹೆಚ್ಚಾಗಲಿದೆ. ಇತ್ತ ಐಪಿಎಲ್‌ನಲ್ಲಿ ಯಾವುದೇ ಆಟಗಾರನಿಗೂ ತನ್ನ ತವರು ರಾಜ್ಯದ ತಂಡವನ್ನು ಮುನ್ನಡೆಸುವುದು ಅತ್ಯಂತ ಹೆಮ್ಮೆಯ ವಿಷಯವಾಗಿರುತ್ತದೆ.

11 / 16
ಈಗಾಗಲೇ ರೋಹಿತ್ ಶರ್ಮಾ ತಮ್ಮ ತವರು ತಂಡ ಮುಂಬೈ ಇಂಡಿಯನ್ಸ್​ನ ನಾಯಕರಾಗಿದ್ದರೆ, ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನೂ ರೋಹಿತ್ ಶರ್ಮಾಗೂ ಮೊದಲು, ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್‌ಗೆ ನಾಯಕರಾಗಿದ್ದರು.

12 / 16
ಹಾಗೆಯೇ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಕ್ರಮವಾಗಿ ತಮ್ಮ ತವರಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದಾರೆ. ಇನ್ನು ಸೌರವ್ ಗಂಗೂಲಿ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು.

13 / 16
ಇದಲ್ಲದೆ ಈ ಹಿಂದೆ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಪಂಜಾಬ್ ಮೂಲದ ಯುವರಾಜ್ ಸಿಂಗ್ ಅವರಿಗೆ ನಾಯಕತ್ವ ವಹಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿಯೇ ಮುಂದಿನ ಹರಾಜಿನಲ್ಲಿ ಶುಭ್​ಮನ್ ಗಿಲ್ ಎಂಟ್ರಿಯನ್ನು ಪಂಜಾಬ್ ಕಿಂಗ್ಸ್​ ಎದುರು ನೋಡುತ್ತಿದೆ.

14 / 16
ಇತ್ತ ಶುಭ್​ಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದರೆ ಪಂಜಾಬ್ ಕಿಂಗ್ಸ್ ಪಾಲಾಗುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಏಕೆಂದರೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಆಟಗಾರನ ಖರೀದಿ ಮಾಡಿದ ದಾಖಲೆ ಇರುವುದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹೆಸರಿನಲ್ಲಿ.

15 / 16
2023 ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಇಂಗ್ಲೆಂಡ್ ಆಲ್​ರೌಂಡರ್ ಸ್ಯಾಮ್ ಕರನ್ ಅವರನ್ನು ಬರೋಬ್ಬರಿ 18.50 ಕೋಟಿ ರೂ. ನೀಡಿ ಖರೀದಿಸಿತ್ತು.

16 / 16
ಅಂದರೆ ಮುಂದಿನ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಸ್ಯಾಮ್ ಕರನ್ ಒಬ್ಬರನ್ನೇ ರಿಲೀಸ್ ಮಾಡಿದ್ರೆ 18.50 ಕೋಟಿ ರೂ. ಬಿಡ್ಡಿಂಗ್ ಮೊತ್ತಕ್ಕೆ ಸೇರ್ಪಡೆಯಾಗಲಿದೆ. ಅಲ್ಲದೆ ಅದೇ ಮೊತ್ತವನ್ನು ಶುಭ್​ಮನ್ ಗಿಲ್​ಗೆ ಪಾವತಿಸಿದರೆ ಸಾಕು. ಹೀಗಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಡೀಲ್ ಒಪ್ಪಿಗೆಯಾಗಿ ಗುಜರಾತ್ ಟೈಟಾನ್ಸ್ ತಂಡದಿಂದ ಶುಭ್​ಮನ್ ಗಿಲ್ ಹೊರಬಂದರೂ ಅಚ್ಚರಿಪಡಬೇಕಿಲ್ಲ.