Shubman Gill: 10ನೇ ಶತಕದೊಂದಿಗೆ ವಿಶೇಷ ದಾಖಲೆ ಬರೆದ ಶುಭ್ಮನ್ ಗಿಲ್
TV9 Web | Updated By: ಝಾಹಿರ್ ಯೂಸುಫ್
Updated on:
Feb 04, 2024 | 2:59 PM
Shubman Gill: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಶುಭ್ಮನ್ ಬ್ಯಾಟ್ನಿಂದ ಮೂಡಿಬಂದಿರುವ ಮೂರನೇ ಶತಕ. ಇದಕ್ಕೂ ಮುನ್ನ ಗಿಲ್ ಬಾಂಗ್ಲಾದೇಶ್ ವಿರುದ್ಧ 110 ರನ್ಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 128 ರನ್ಸ್ ಬಾರಿಸಿದ್ದರು.
1 / 7
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ (Shubman Gill) ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದರು. ಪರಿಣಾಮ ಅವರ ಬ್ಯಾಟ್ನಿಂದ ಕೇವಲ 59 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.
2 / 7
ಅರ್ಧಶತಕದ ಬಳಿಕ ತುಸು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ರನ್ ಪೇರಿಸುತ್ತಾ ಸಾಗಿದರು. ಅದರಲ್ಲೂ ಹೆಚ್ಚಿನ ರನ್ಗಳನ್ನು ಸಿಕ್ಸ್-ಫೋರ್ಗಳೊಂದಿಗೆ ಕಲೆಹಾಕಿದ್ದು ವಿಶೇಷ. ಈ ಮೂಲಕ ಕೇವಲ 132 ಎಸೆತಗಳಲ್ಲಿ ಶುಭ್ಮನ್ ಗಿಲ್ ಮೂರನೇ ಟೆಸ್ಟ್ ಶತಕ ಪೂರೈಸಿದರು.
3 / 7
ಈ ಶತಕದೊಂದಿಗೆ 24ನೇ ವಯಸ್ಸಿನೊಳಗೆ ಟೀಮ್ ಇಂಡಿಯಾ ಪರ ಅತ್ಯಧಿಕ ಸೆಂಚುರಿಗಳನ್ನು ಸಿಡಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿರುವುದು ಶತಕಗಳ ಸರದಾರರು ಎಂಬುದು ವಿಶೇಷ.
4 / 7
ಹೌದು, ಭಾರತದ ಪರ 24 ವಯಸ್ಸಿನೊಳಗೆ ಅತ್ಯಧಿಕ ಶತಕ ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 24 ವಯಸ್ಸು ದಾಟುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 30 ಶತಕಗಳನ್ನು ಬಾರಿಸಿದ್ದರು.
5 / 7
ಇನ್ನು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ 24 ವರ್ಷದೊಳಗೆ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 21 ಬಾರಿ ಮೂರಂಕಿ ಮೊತ್ತ ಕಲೆಹಾಕಿದ್ದರು. ಅಂದರೆ ಕಿರಿ ವಯಸ್ಸಿನಲ್ಲೇ ಕೊಹ್ಲಿ 21 ಶತಕಗಳನ್ನು ಸಿಡಿಸಿದ್ದರು.
6 / 7
ಇದೀಗ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸುವುದರೊಂದಿಗೆ ಶುಭ್ಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಸೆಂಚುರಿಗಳನ್ನು ಪೂರೈಸಿದ್ದಾರೆ. ಇದಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ 1 ಶತಕ ಸಿಡಿಸಿದ್ದ ಗಿಲ್, ಏಕದಿನ ಕ್ರಿಕೆಟ್ನಲ್ಲಿ 6 ಸೆಂಚುರಿ ಬಾರಿಸಿದ್ದರು. ಇದೀಗ ಟೆಸ್ಟ್ನಲ್ಲಿ ಮೂರನೇ ಶತಕ ಪೂರೈಸುವುದರೊಂದಿಗೆ 24 ವರ್ಷದೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ 3ನೇ ಭಾರತೀಯ ಎನಿಸಿಕೊಂಡಿದ್ದಾರೆ.
7 / 7
ಇನ್ನು ಈ ಪಂದ್ಯದಲ್ಲಿ 147 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್ 2 ಭರ್ಜರಿ ಸಿಕ್ಸರ್ ಹಾಗೂ 11 ಫೋರ್ಗಳೊಂದಿಗೆ 104 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಗಿಲ್ ಅವರ ಈ ಆಕರ್ಷಕ ಶತಕದ ನೆರವಿನಿಂದ 64 ಓವರ್ಗಳ ಮುಕ್ತಾಯದ ವೇಳೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿದೆ. ಈ ಮೂಲಕ 370 ರನ್ಗಳ ಮುನ್ನಡೆ ಸಾಧಿಸಿದೆ.