
ಟಿ20 ವಿಶ್ವಕಪ್ನ ಸೂಪರ್-12 ಪಂದ್ಯಗಳು ರಣರೋಚಕವಾಗಿ ಸಾಗುತ್ತಿದೆ. ಈಗಾಗಲೇ ಅನಿರೀಕ್ಷಿತ ಫಲಿತಾಂಶಗಳಿಗೆ ಸಾಕ್ಷಿಯಾಗಿರುವ ಪಂದ್ಯಾವಳಿಯಲ್ಲಿ ನಾಕೌಟ್ ಹಂತ ಪ್ರವೇಶಿಸುವ ತಂಡಗಳು ಯಾವುವು ಎಂಬುದೇ ಕುತೂಹಲ.

ಏಕೆಂದರೆ ಗ್ರೂಪ್-1 ರಲ್ಲಿ ಎಲ್ಲಾ ತಂಡಗಳು 3 ಪಂದ್ಯಗಳನ್ನು ಆಡಿದರೂ ಯಾವುದೇ ತಂಡ ಸೆಮಿಫೈನಲ್ಗೇರುವುದನ್ನು ಖಚಿತಪಡಿಸಿಕೊಂಡಿಲ್ಲ. ಇತ್ತ ಗ್ರೂಪ್-2 ರ ಫಲಿತಾಂಶಗಳು ಕೂಡ ಭಿನ್ನವಾಗಿಲ್ಲ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಎಲ್ಲಾ ತಂಡಗಳಿಂದ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು.

ಇದರ ನಡುವೆ ಈ ಸಲ ಸೆಮಿಫೈನಲ್ಗೇರುವ ನಾಲ್ಕು ತಂಡಗಳಾವುವು ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ.

ಈ ಬಗ್ಗೆ ಮಾತನಾಡಿರುವ ಗಂಗೂಲಿ, ಟಿ20 ಸ್ವರೂಪವು ಅತ್ಯಂತ ಅನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ಇಲ್ಲಿ ಯಾವುದೇ ತಂಡವು ಯಾರನ್ನು ಬೇಕಾದರು ಸೋಲಿಸಬಹುದು. ಇದಾಗ್ಯೂ ಕೆಲ ಫೇವರೇಟ್ಗಳು ಉತ್ತಮ ಪ್ರದರ್ಶನವನ್ನೇ ಮುಂದುವರೆಸಿದೆ. ಹೀಗಾಗಿ ಆ ತಂಡಗಳೇ ಸೆಮಿಫೈನಲ್ಗೇರಲಿದೆ ಎಂದಿದ್ದಾರೆ ಸೌರವ್ ಗಂಗೂಲಿ.

ಅದರಂತೆ ಸೌರವ್ ಗಂಗೂಲಿ ಹೆಸರಿಸಿದ ನಾಲ್ಕು ಸೆಮಿಫೈನಲಿಸ್ಟ್ ತಂಡಗಳು ಹೀಗಿವೆ...

ಇಂಗ್ಲೆಂಡ್

ಸೌತ್ ಆಫ್ರಿಕಾ

ಆಸ್ಟ್ರೇಲಿಯಾ

ಭಾರತ