Sourav ganguly: ಟಿ20 ವಿಶ್ವಕಪ್​ಗೆ ಅಶ್ವಿನ್ ಆಯ್ಕೆಯ ಹಿಂದಿನ ಅಸಲಿಯತ್ತು ತಿಳಿಸಿದ ಸೌರವ್ ಗಂಗೂಲಿ

| Updated By: ಝಾಹಿರ್ ಯೂಸುಫ್

Updated on: Dec 14, 2021 | 10:36 PM

ಈ ಹಿಂದೆ 2017 ರಲ್ಲಿ ಕೊನೆಯ ಬಾರಿಗೆ ಸೀಮಿತ ಓವರ್‌ಗಳ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆ ಬಳಿಕ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಜೋಡಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದರು. (ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹೀಗಾಗಿ tv9kannada.com ಗೆ ಭೇಟಿ ನೀಡುವ ಮೂಲಕ ಸಂಪೂರ್ಣ ಸುದ್ದಿ ಓದಬಹುದು)

1 / 5
2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ತಂಡವು ಸೆಮಿಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಹೀನಾಯ ಪ್ರದರ್ಶನದೊಂದಿಗೆ ವಿರಾಟ್ ಕೊಹ್ಲಿ ಅವರ ಟಿ20 ನಾಯಕತ್ವದ ವೃತ್ತಿಜೀವನವೂ ಕೊನೆಗೊಂಡಿತು. ಇದೀಗ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೂಡ ತೆಗೆದುಹಾಕಲಾಗಿದೆ. ಸದ್ಯ ಕೊಹ್ಲಿಯ ಕ್ಯಾಪ್ಟನ್ಸಿ ವಿಚಾರವು ಚರ್ಚೆಯಲ್ಲಿರುವಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಂದು ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2021ರ ಟಿ20 ವಿಶ್ವಕಪ್ ತಂಡದಲ್ಲಿ ಆರ್ ಅಶ್ವಿನ್ ಸ್ಥಾನ ಪಡೆಯಲು ಯಾರು ಕಾರಣ ಎಂಬುದನ್ನು ಗಂಗೂಲಿ ಇದೇ ಮೊದಲ ಬಾರಿಗೆ ತಿಳಿಸಿದ್ದಾರೆ.

2 / 5
2021 ರ ಟಿ20 ವಿಶ್ವಕಪ್​ಗಾಗಿ ನಾಲ್ಕು ವರ್ಷಗಳ ನಂತರ ಆರ್ ಅಶ್ವಿನ್ ತಂಡಕ್ಕೆ ಮರಳಿದ್ದರು. ಅಶ್ವಿನ್ ಅವರನ್ನು ಈ ಹಿಂದೆ 2017 ರಲ್ಲಿ ಕೊನೆಯ ಬಾರಿಗೆ ಸೀಮಿತ ಓವರ್‌ಗಳ ಫಾರ್ಮ್ಯಾಟ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

3 / 5
 ಆ ಬಳಿಕ  ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಜೋಡಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದರು. ಆದರೆ 2021ರ ಟಿ20 ವಿಶ್ವಕಪ್‌ಗೂ ಮುನ್ನವೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಶ್ವಿನ್​ ಅವರ ಆಯ್ಕೆಗಾಗಿ ಬೇಡಿಕೆ ಇಟ್ಟಿದ್ದರು.

4 / 5
'ಅಶ್ವಿನ್ ಅವರು ಸೀಮಿತ ಓವರ್​ ಕ್ರಿಕೆಟ್‌ನಲ್ಲಿ ಕಂಬ್ಯಾಕ್ ಮಾಡುತ್ತಾರೆ ಎಂಬುದರ ಬಗ್ಗೆ ನನಗೆ ಖಚಿತತೆ ಇರಲಿಲ್ಲ. ಆದರೆ ವಿರಾಟ್ ಕೊಹ್ಲಿ ಅಶ್ವಿನ್ ಅವರಿಗೆ ಟಿ20 ವಿಶ್ವಕಪ್‌ನಲ್ಲಿ ಅವಕಾಶ ನೀಡಲು ಬಯಸಿದ್ದರು. ಅದರಂತೆ ಆಯ್ಕೆ ಮಾಡಲಾಯಿತು. ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅಶ್ವಿನ್ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ನಂತರ ಅಶ್ವಿನ್ ನೇತೃತ್ವದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿತು. ರೋಹಿತ್ ಶರ್ಮಾ ಅವರು ಅಶ್ವಿನ್ ಅವರನ್ನು ODI ಮತ್ತು T20 ಕ್ರಿಕೆಟ್‌ನ ಪ್ರಮುಖ ಭಾಗವೆಂದು ಬಣ್ಣಿಸಿದ್ದಾರೆ.

5 / 5
ಆದರೆ ಅಶ್ವಿನ್ ಅವರ ಕಂಬ್ಯಾಕ್ ಹಿಂದಿರುವುದು ವಿರಾಟ್ ಕೊಹ್ಲಿ. ಅಶ್ವಿನ್ ಮೇಲೆ ಕೊಹ್ಲಿ ಇರಿಸಿದ್ದ ನಂಬಿಕೆಯಿಂದಾಗಿ ಅವರು ಮತ್ತೆ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.