AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾವನ್ನು ಮಕಾಡೆ ಮಲಗಿಸಿ ಹೊಸ ಇತಿಹಾಸ ನಿರ್ಮಿಸಿದ ಸೌತ್ ಆಫ್ರಿಕಾ

Australia vs South Africa: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್​ನಲ್ಲಿ ಸೌತ್ ಆಫ್ರಿಕಾ ತಂಡ 98 ರನ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯವನ್ನು 84 ರನ್​ಗಳಿಂದ ಗೆಲ್ಲುವಲ್ಲಿ ಸೌತ್ ಆಫ್ರಿಕಾ ಯಶಸ್ವಿಯಾಗಿತ್ತು. ಮೂರನೇ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡ 276 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಸೋಲಿನ ಹೊರತಾಗಿಯೂ ಸೌತ್ ಆಫ್ರಿಕಾ ತಂಡ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.

ಝಾಹಿರ್ ಯೂಸುಫ್
|

Updated on: Aug 25, 2025 | 8:30 AM

Share
ಸೌತ್ ಆಫ್ರಿಕಾ-ಆಸ್ಟ್ರೇಲಿಯಾ (SA vs AUS) ನಡುವಣ ಸರಣಿ ಮುಕ್ತಾಯಗೊಂಡಿದೆ. ಈ ಸರಣಿಯಲ್ಲಿ ಆಡಲಾದ 3 ಪಂದ್ಯಗಳ ಟಿ20 ಸಿರೀಸ್ ಅನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡರೆ, ಏಕದಿನ ಸರಣಿಯಲ್ಲಿ ಆತಿಥೇಯರನ್ನು 2-1 ಬಗ್ಗು ಬಡಿಯುವಲ್ಲಿ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ.

1 / 5
ಈ ಸರಣಿ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಏಕದಿನ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಕಾಡೆ ಮಲಗಿಸುವ ವಿಷಯದಲ್ಲಿ ಎಂಬುದು ವಿಶೇಷ. ಅಂದರೆ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ದ್ವಿಪಕ್ಷೀಯ ಸರಣಿ ಗೆದ್ದ ದಾಖಲೆಯೊಂದನ್ನು ಸೌತ್ ಆಫ್ರಿಕಾ ತನ್ನದಾಗಿಸಿಕೊಂಡಿದೆ.

2 / 5
ಇದಕ್ಕೂ ಮೊದಲು ಈ ಭರ್ಜರಿ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿತ್ತು. 3+ ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 8 ಬಾರಿ ಸೋಲಿಸಿ ಆಂಗ್ಲರು ಭರ್ಜರಿ ದಾಖಲೆ ನಿರ್ಮಿಸಿದ್ದರು. ಇಂಗ್ಲೆಂಡ್ ತಂಡ ಬರೆದಿದ್ದ ಈ ದಾಖಲೆಯನ್ನು ಮುರಿಯುವಲ್ಲಿ ಕೊನೆಗೂ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ.

3 / 5
ಸೌತ್ ಆಫ್ರಿಕಾ ತಂಡವು ಆಸ್ಟ್ರೇಲಿಯಾವನ್ನು 3+ ಪಂದ್ಯಗಳ ಏಕದಿನ ಸರಣಿಯಲ್ಲಿ ಈವರೆಗೆ 9 ಬಾರಿ ಸೋಲಿಸಿದೆ. ಈ ಮೂಲಕ ಬಲಿಷ್ಠ ಕಾಂಗರೂ ಪಡೆಗೆ ಅತ್ಯಧಿಕ ಸರಣಿ ಸೋಲಿನ ರುಚಿ ತೋರಿಸಿದ ತಂಡವೆಂಬ ಹೆಗ್ಗಳಿಕೆಯನ್ನು ಸೌತ್ ಆಫ್ರಿಕಾ ತನ್ನದಾಗಿಸಿಕೊಂಡಿದೆ.

4 / 5
ವಿಶೇಷ ಎಂದರೆ ಆಸ್ಟ್ರೇಲಿಯಾ ತಂಡವು ಕಳೆದ 9 ವರ್ಷಗಳಿಂದ ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದಿಲ್ಲ. 2016 ರಿಂದ ಶುರುವಾದ ಸೌತ್ ಆಫ್ರಿಕಾ ತಂಡದ ಈ ಸರಣಿ ಗೆಲುವಿನ ನಾಗಾಲೋಟ 2025 ರಲ್ಲೂ ಮುಂದುವರೆದಿದೆ. ಈ ಮೂಲಕ ಆಸೀಸ್ ವಿರುದ್ಧ ಸತತ 5 ಸರಣಿಗಳನ್ನು ಗೆದ್ದ ವಿಶೇಷ ದಾಖಲೆಯನ್ನು ಸಹ ಸೌತ್ ಆಫ್ರಿಕಾ ತಂಡ ನಿರ್ಮಿಸಿದೆ.

5 / 5
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್