Updated on: Jan 09, 2023 | 7:30 PM
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯಶಸ್ಸಿನ ಬೆನ್ನಲ್ಲೇ ಹಲವು ಲೀಗ್ಗಳು ಶುರುವಾಗಿದ್ದವು. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್, ವೆಸ್ಟ್ ಇಂಡೀಸ್ ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕ್ನಲ್ಲಿ ಪಾಕಿಸ್ತಾನ್ ಸೂಪರ್ ಲೀಗ್...ಈ ಟೂರ್ನಿಗಳ ಪಟ್ಟಿಗೆ ಹೊಸ ಸೇರ್ಪಡೆ ಸೌತ್ ಆಫ್ರಿಕಾ ಟಿ20 ಲೀಗ್. ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಟಿ20 ಲೀಗ್ನ ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ.
ಈ ಹೊಸ ಲೀಗ್ನಲ್ಲಿ ಒಟ್ಟು 6 ತಂಡಗಳಿದ್ದು, ಈ ಎಲ್ಲಾ ತಂಡಗಳನ್ನು ಐಪಿಎಲ್ನಲ್ಲಿ ತಂಡಗಳ ಮಾಲೀಕತ್ವವನ್ನು ಹೊಂದಿರುವ ಫ್ರಾಂಚೈಸಿಗಳೇ ಖರೀದಿಸಿದೆ. ಅದರಂತೆ ತಂಡಗಳ ಹೆಸರು ಹಾಗೂ ಲೋಗೋ ಕೂಡ ಐಪಿಎಲ್ ಟೀಮ್ಗಳನ್ನೇ ಹೋಲುತ್ತಿದೆ. ಹೀಗಾಗಿಯೇ ಸೌತ್ ಆಫ್ರಿಕಾ ಲೀಗ್ ಅನ್ನು ಮಿನಿ ಐಪಿಎಲ್ ಎಂದು ಕರೆಯಲಾಗುತ್ತಿದೆ.
ಮಿನಿ ಐಪಿಎಲ್ (ಎಸ್ಎ ಟಿ20) ಜನವರಿ 10 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದದಲ್ಲಿ ಎಂಐ ಕೇಪ್ಟೌನ್ ಹಾಗೂ ಪರ್ಲ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಈ ಎಲ್ಲಾ ಪಂದ್ಯಗಳನ್ನು ಭಾರತೀಯ ಕಾಲಮಾನ ರಾತ್ರಿ 8.30 ರಿಂದ ಸ್ಪೋರ್ಟ್ಸ್ 18 ಚಾನೆಲ್ ಹಾಗೂ ಜಿಯೋ ಸಿನೆಮಾ ಆ್ಯಪ್ನಲ್ಲಿ ವೀಕ್ಷಿಸಬಹುದು.
ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಕಣಕ್ಕಿಳಿಯುವ 6 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ:
ಪ್ರಿಟೋರಿಯಾ ಕ್ಯಾಪಿಟಲ್ಸ್: ರಿಲೀ ರೊಸ್ಸೌ , ಮಾರ್ಕೊ ಮಾರೈಸ್, ಶೇನ್ ಡ್ಯಾಡ್ಸ್‌ವೆಲ್, ಕ್ಯಾಮೆರಾನ್ ಡೆಲ್ಪೋರ್ಟ್, ವಿಲ್ ಜ್ಯಾಕ್ಸ್, ಥೀನಿಸ್ ಡಿ ಬ್ರುಯಿನ್, ಜೇಮ್ಸ್ ನೀಶಮ್, ಮಿಗೇಲ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್ (ನಾಯಕ), ಶಾನ್ ವಾನ್ ಬರ್ಗ್, ಫಿಲಿಪ್ ಸಾಲ್ಟ್, ಕುಸಾಲ್ ಮೆಂಡಿಸ್, ಆನ್ರಿಕ್ ನೋಕಿಯಾ, ಜೋಶ್ವ ಲಿಟಲ್, ಆದಿಲ್ ರಶೀದ್, ಡೇರಿನ್ ಡುಪಾವಿಲ್ಲನ್, ಈಥನ್ ಬಾಷ್.
ಜೋಬರ್ಗ್ ಸೂಪರ್ ಕಿಂಗ್ಸ್: ಫಾಫ್ ಡು ಪ್ಲೆಸಿಸ್ (ನಾಯಕ), ಹ್ಯಾರಿ ಬ್ರೂಕ್, ಜಾನ್ನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಲೆಯುಸ್ ಡು ಪ್ಲೂಯ್, ಲೆವಿಸ್ ಗ್ರೆಗೊರಿ, ಮಾಲುಸಿ ಸಿಬೊಟೊ, ಕೈಲ್ ವೆರ್ರಿನ್ನೆ, ಡೊನಾವೊನ್ ಫೆರೇರಾ, ಮಹೇಶ್ ತೀಕ್ಷಣ, ರೊಮಾರಿಯೊ ಶೆಫರ್ಡ್, ಜೆರಾಲ್ಡ್ ಕೋಟ್ಜಿ , ಜಾರ್ಜ್ ಗಾರ್ಟನ್, ಅಲ್ಝಾರಿ ಜೋಸೆಫ್, ಲಿಜಾದ್ ವಿಲಿಯಮ್ಸ್, ನಾಂದ್ರೆ ಬರ್ಗರ್, ಕ್ಯಾಲೆಬ್ ಸೆಲೆಕಾ.
ಸನ್‌ರೈಸರ್ಸ್ ಈಸ್ಟರ್ನ್ ಕೇಪ್: ಐಡೆನ್ ಮಾರ್ಕ್ರಾಮ್ (ನಾಯಕ), ಮಾರ್ಕ್ವೆಸ್ ಅಕರ್‌ಮನ್, ಸರೆಲ್ ಎರ್ವೀ, ಜೆಜೆ ಸ್ಮಟ್ಸ್, ಟಾಮ್ ಅಬೆಲ್, ಮಾರ್ಕೊ ಯಾನ್ಸೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಅಯಬುಲೆಲಾ ಗ್ಕಮಾನೆ, ಟ್ರಿಸ್ಟಾನ್ ಸ್ಟಬ್ಸ್, ಜೋರ್ಡಾನ್ ಕಾಕ್ಸ್, ಆಡಮ್ ರೋಸಿಂಗ್‌ಟನ್, ಒಟ್ನಿಯೆಲ್ ಬಾರ್ಟ್‌ಮನ್, ಸಿಸಾಂಡಾ ಮಗಾಲಾವುಡ್, ಸಿಸಂಡಾ ಮಗಾಲಾವುಡ್ , ಜೇಮ್ಸ್ ಫುಲ್ಲರ್, ಬ್ರೈಡನ್ ಕಾರ್ಸೆ
ಡರ್ಬನ್ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ನಾಯಕ), ಕ್ರಿಸ್ಟಿಯನ್ ಜೊಂಕರ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಪ್ರೆನೆಲನ್ ಸುಬ್ರಾಯೆನ್, ಡ್ವೈನ್ ಪ್ರಿಟೋರಿಯಸ್, ಕೀಮೋ ಪಾಲ್, ವಿಯಾನ್ ಮುಲ್ಡರ್, ಹೆನ್ರಿಚ್ ಕ್ಲಾಸೆನ್, ಜಾನ್ಸನ್ ಚಾರ್ಲ್ಸ್, ಮ್ಯಾಥ್ಯೂ ಬ್ರೀಟ್ಜ್‌ಕೆ, ರೀಸ್ ಟೋಪ್ಲಿ, ಕೆಶವ್ ಮಹಾರಾಜ್, ಕೈಲ್ ಅಬಾಟ್, ಜೂನಿಯರ್ ಡಾಲ, ದಿಲ್ಶನ್ ಮಧುಶಂಕ, ಸೈಮನ್ ಹಾರ್ಮರ್
ಪರ್ಲ್ ರಾಯಲ್ಸ್: ಡೇವಿಡ್ ಮಿಲ್ಲರ್ (ನಾಯಕ), ಜೇಸನ್ ರಾಯ್ , ಮಿಚೆಲ್ ವ್ಯಾನ್ ಬ್ಯೂರೆನ್, ಇವಾನ್ ಜೋನ್ಸ್, ಇಯಾನ್ ಮಾರ್ಗನ್, ವಿಹಾನ್ ಲುಬ್ಬೆ, ಫೆರಿಸ್ಕೊ ಆಡಮ್ಸ್, ಕೋಡಿ ಯೂಸುಫ್, ಜೋಸ್ ಬಟ್ಲರ್, ಡೇನ್ ವಿಲಾಸ್, ಓಬೆಡ್ ಮೆಕಾಯ್, ಕಾರ್ಬಿನ್ ಬಾಷ್, ಲುಂಗಿ ಎನ್ಗಿಡಿ, ತಬ್ರೈಜ್ ಶಮ್ಸಿ, ಬ್ಜೋರ್ನ್ ಫಾರ್ಟುಯಿನ್, ಇಮ್ರಾನ್ ಮನಕ್, ರಾಮನ್ ಸಿಮಂಡ್ಸ್.
MI ಕೇಪ್ ಟೌನ್: ರಶೀದ್ ಖಾನ್ (ನಾಯಕ), ಡೆವಾಲ್ಡ್ ಬ್ರೆವಿಸ್, ಲಿಯಾಮ್ ಲಿವಿಂಗ್‌ಸ್ಟೋನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ವೆಸ್ಲಿ ಮಾರ್ಷಲ್, ಜಾರ್ಜ್ ಲಿಂಡೆ, ಡೆಲಾನೊ ಪಾಟ್‌ಗೀಟರ್, ಸ್ಯಾಮ್ ಕರನ್, ರಿಯಾನ್ ರಿಕೆಲ್ಟನ್, ಗ್ರಾಂಟ್ ರೋಲೋಫ್‌ಸೆನ್, ಕಗಿಸೊ ರಬಾಡಾ, ಬ್ಯೂರಾನ್ ಹೆಂಡ್ರಿಕ್ಸ್, ಡುವಾನ್ ಸ್ಹೆಂಡ್ರಿಕ್ಸ್, , ಜಿಯಾದ್ ಅಬ್ರಹಾಮ್ಸ್, ಓಲಿ ಸ್ಟೋನ್, ವಕಾರ್ ಸಲಾಮ್ಖೈಲ್.