- Kannada News Photo gallery Cricket photos IPL 2023 Kannada: BCCI to give Rishabh Pant full IPL salary and payment
IPL 2023: ಐಪಿಎಲ್ನಿಂದ ಹೊರಬಿದ್ದ ರಿಷಭ್ ಪಂತ್ಗೆ ಸಿಗಲಿದೆ 21 ಕೋಟಿ ರೂ.
IPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ರಿಷಭ್ ಪಂತ್ ಕಳೆದ ಬಾರಿಯ ಒಪ್ಪಂದಂತೆ ಈ ಸಲ ಐಪಿಎಲ್ ಫ್ರಾಂಚೈಸಿಯಿಂದ 16 ಕೋಟಿ ರೂ. ಪಡೆಯಬೇಕಿತ್ತು.
Updated on:Jan 08, 2023 | 8:30 PM

IPL 2023: ಐಪಿಎಲ್ ಸೀಸನ್ 16 ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹೊರಗುಳಿಯುವುದು ಖಚಿತವಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಮುಂಬೈನ ಕೋಕಿಲಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡೆಲ್ಲಿ ತಂಡದ ನಾಯಕ ಮುಂದಿನ 6 ತಿಂಗಳುಗಳ ಕಾಲ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಇತ್ತ ಬಿಸಿಸಿಐ ರಿಷಭ್ ಪಂತ್ ವೈದ್ಯಕೀಯ ವೆಚ್ಚಗಳನ್ನು ಭರಿಸುವುದಾಗಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೆ ಈ ಹಿಂದಿನ ಒಪ್ಪಂದಂತೆ ಅವರಿಗೆ ನೀಡಬೇಕಾದ ಮೊತ್ತವನ್ನೂ ಕೂಡ ಬಿಸಿಸಿಐ ನೀಡಲಿದೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ರಿಷಭ್ ಪಂತ್ ಕಳೆದ ಬಾರಿಯ ಒಪ್ಪಂದಂತೆ ಈ ಸಲ ಐಪಿಎಲ್ ಫ್ರಾಂಚೈಸಿಯಿಂದ 16 ಕೋಟಿ ರೂ. ಪಡೆಯಬೇಕಿತ್ತು. ಇದೀಗ ಈ ಮೊತ್ತವನ್ನು ಬಿಸಿಸಿಐ ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಆಟಗಾರರ ಗುತ್ತಿಗೆಯಿಂದ ನೀಡಲಾಗುವ 5 ಕೋಟಿ ರೂ. ಅನ್ನು ಸಹ ಬಿಸಿಸಿಐ ಪಾವತಿಸಲಿದೆ ಎಂದು ವರದಿಯಾಗಿದೆ.

ಅಂದರೆ ಐಪಿಎಲ್ ಹಾಗೂ ಬಿಸಿಸಿಐ ಒಪ್ಪಂದ ಪ್ರಕಾರ ಈ ವರ್ಷ ರಿಷಭ್ ಪಂತ್ ಪಡೆಯಬೇಕಿದ್ದ ಸಂಪೂರ್ಣ ಮೊತ್ತವನ್ನು ಬಿಸಿಸಿಐ ಪಾವತಿಸಲಿದೆ. ಅದರಂತೆ ಈ ವರ್ಷ ರಿಷಭ್ ಪಂತ್ ಒಟ್ಟು 21 ಕೋಟಿ ರೂ. ಪಡೆಯಲಿದ್ದಾರೆ.

Ricky Ponting wants Rishabh Pant sitting next to him in the dugout during the IPL 2023 Cricket News in Kannada

ಸದ್ಯ ಚಿಕಿತ್ಸೆಯಲ್ಲಿರುವ ರಿಷಭ್ ಪಂತ್ ಶುಕ್ರವಾರ ಸಂಜೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದಾಗ್ಯೂ ಅವರು ಮುಂದಿನ 6 ತಿಂಗಳುಗಳ ಕಾಲ ಮೈದಾನಕ್ಕಿಳಿಯಲಾಗುವುದಿಲ್ಲ ಎಂದು ತಿಳಿದು ಬಂದಿದೆ. ಅದರಲ್ಲೂ ಏಕದಿನ ವಿಶ್ವಕಪ್ನಲ್ಲೂ ರಿಷಭ್ ಪಂತ್ ಕಾಣಿಸಿಕೊಳ್ಳುವುದು ಅನುಮಾನ.
Published On - 8:30 pm, Sun, 8 January 23
