ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ಲಂಕಾ ಕ್ರಿಕೆಟಿಗನಿಗೆ ಮತ್ತೊಮ್ಮೆ ನಿಷೇಧದ ಶಿಕ್ಷೆ..!

Updated on: Aug 16, 2024 | 6:57 PM

Niroshan Dickwella: ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣರಾದ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ನಿರೋಶನ್ ಡಿಕ್ವೆಲ್ಲಾ ಅವರನ್ನು ಕ್ರಿಕೆಟ್​ನ ಎಲ್ಲಾ ಸ್ವರೂಪಗಳಿಂದ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಉದ್ದೀಪನ ಮದ್ದು ಸೇವನೆ ತಡೆ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಡಿಕ್ವೆಲ್ಲಾ ಅವರಿಗೆ ನಿಷೇಧ ಹೇರಲಾಗಿದೆ.

1 / 6
ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣರಾದ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ನಿರೋಶನ್ ಡಿಕ್ವೆಲ್ಲಾ ಅವರನ್ನು ಕ್ರಿಕೆಟ್​ನ ಎಲ್ಲಾ ಸ್ವರೂಪಗಳಿಂದ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.  ಉದ್ದೀಪನ ಮದ್ದು ಸೇವನೆ ತಡೆ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಡಿಕ್ವೆಲ್ಲಾ ಅವರಿಗೆ ನಿಷೇಧ ಹೇರಲಾಗಿದೆ.

ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣರಾದ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ನಿರೋಶನ್ ಡಿಕ್ವೆಲ್ಲಾ ಅವರನ್ನು ಕ್ರಿಕೆಟ್​ನ ಎಲ್ಲಾ ಸ್ವರೂಪಗಳಿಂದ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಉದ್ದೀಪನ ಮದ್ದು ಸೇವನೆ ತಡೆ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಡಿಕ್ವೆಲ್ಲಾ ಅವರಿಗೆ ನಿಷೇಧ ಹೇರಲಾಗಿದೆ.

2 / 6

ಡಿಕ್ವೆಲ್ಲಾ ಅವರನ್ನು ಎಷ್ಟು ದಿನಗಳವರೆಗೆ ಕ್ರಿಕೆಟ್​ನಿಂದ ನಿಷೇಧಿಸಲಾಗಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಹೊರಬೀಳಬೇಕಾಗಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ 2024 ರ ಲಂಕಾ ಪ್ರೀಮಿಯರ್ ಲೀಗ್ ವೇಳೆ ಡೋಪಿಂಗ್ ವಿರೋಧಿ ಉಲ್ಲಂಘನೆಯ ಆರೋಪ ಹೋರಿಸಿ ನಿರೋಶನ್ ಡಿಕ್ವೆಲ್ಲಾ ಅವರಿಗೆ ಈ ಶಿಕ್ಷೆ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.

3 / 6

2024 ರ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಗಾಲೆ ಮಾರ್ವೆಲ್ಸ್ ತಂಡದ ನಾಯಕರಾಗಿದ್ದ ಡಿಕ್ವೆಲ್ಲಾ ಇಡೀ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 153.33 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 184 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಆದಾಗ್ಯೂ ಅವರ ತಂಡ ಪಂದ್ಯಾವಳಿಯ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಆದರೆ ಫೈನಲ್​ನಲ್ಲಿ ಜಾಫ್ನಾ ಕಿಂಗ್ಸ್ ವಿರುದ್ಧ ಸೋತು ಚಾಂಪಿಯನ್ಸ್ ಪಟ್ಟದಿಂದ ವಂಚಿತವಾಗಿತ್ತು.

4 / 6

ವಾಸ್ತವವಾಗಿ ನಿರೋಶನ್ ಡಿಕ್ವೆಲ್ಲಾ ನಿಷೇಧಕ್ಕೊಳಗಾಗುತ್ತಿರುವುದ ಇದೇ ಮೊದಲಲ್ಲ. ಈ ಹಿಂದೆಯೂ ಅಂದರೆ 2021 ರಲ್ಲಿ, ಇಂಗ್ಲೆಂಡ್‌ ಪ್ರವಾದ ವೇಳೆ ಬಯೋ ಬಬಲ್ ನಿಯಮವನ್ನು ಉಲ್ಲಂಘಿಸಿದಕ್ಕಾಗಿ ಲಂಕಾ ತಂಡದ ದನುಷ್ಕಾ ಗುಣತಿಲಕ ಮತ್ತು ಕುಸಾಲ್ ಮೆಂಡಿಸ್ ಅವರೊಂದಿಗೆ ನಿರೋಶನ್ ಡಿಕ್ವೆಲ್ಲಾ ಕೂಡ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು.

5 / 6

ಇದಾದ ಬಳಿಕ ತಂಡದಿಂದ ಬಹಳ ಕಾಲ ಹೊರಗಿದ್ದ ಡಿಕ್ವೆಲ್ಲಾ 2023 ರ ಆರಂಭದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಹಾಗೆಯೇ 2022 ರ ಜೂನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ಡಿಕ್ವೆಲ್ಲಾ, 2021 ರ ಜೂನ್​ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಅಂದಿನಿಂದ ಡಿಕ್ವೆಲ್ಲಾಗೆ ರಾಷ್ಟ್ರೀಯ ತಂಡದ ಕದ ತೆರೆದಿಲ್ಲ.

6 / 6

ನಿರೋಶನ್ ಡಿಕ್ವೆಲ್ಲಾ ಅವರ ವೃತ್ತಿಜೀವನವನ್ನು ನೋಡಿದರೆ, ಅವರು ಲಂಕಾ ಪರ 54 ಟೆಸ್ಟ್ ಮತ್ತು 55 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 2757 ರನ್ ಬಾರಿಸಿರುವ ಅವರು ಏಕದಿನದಲ್ಲಿ 1604 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳೂ ಸೇರಿವೆ. ಇನ್ನು ಟಿ20 ಮಾದರಿಯಲ್ಲಿ 28 ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಡಿಕ್ವೆಲ್ಲಾ, ಒಂದು ಶತಕವನ್ನು ಒಳಗೊಂಡಂತೆ 480 ರನ್ ಗಳಿಸಿದ್ದಾರೆ.

Loading...
Unable to load recommendations.
Follow Us