KL Rahul: ಕೆಎಲ್ ರಾಹುಲ್​ಗೆ ಇನ್ನೊಂದು ಚಾನ್ಸ್ ನೀಡಬೇಕೆಂದ ಮಾಜಿ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Feb 12, 2023 | 9:22 PM

India vs Australia 2nd Test: ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್​ಗೆ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ಆಗ್ರಹಿಸಿದ್ದಾರೆ.

1 / 6
ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಆರಂಭಿಕ ಆಟಗಾರನ ಚಿಂತೆ ಎದುರಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 20 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಕಳೆದ 8 ಟೆಸ್ಟ್​​ ಇನಿಂಗ್ಸ್​ಗಳಲ್ಲಿ ಕನ್ನಡಿಗ ಗರಿಷ್ಠ ಸ್ಕೋರ್ 23 ಮಾತ್ರ. ಹೀಗಾಗಿಯೇ ಕೆಎಲ್ ರಾಹುಲ್ ಅವರ ಆಯ್ಕೆ ಬಗ್ಗೆ ಪ್ರಶ್ನೆಗಳೆದ್ದಿವೆ.

2 / 6
ಏಕೆಂದರೆ ತಂಡದಲ್ಲಿ ಇನ್​ ಫಾರ್ಮ್ ಆಟಗಾರ ಶುಭ್​ಮನ್ ಗಿಲ್ ಕೂಡ ಇದ್ದಾರೆ. ಆದರೆ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡಿದ ಪರಿಣಾಮ ಗಿಲ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾಯಿತು. ಆದರೆ ಸಿಕ್ಕ ಅವಕಾಶದಲ್ಲಿ ರಾಹುಲ್ ವಿಫಲರಾಗಿದ್ದಾರೆ. ಇದೇ ಕಾರಣದಿಂದಾಗಿ 2ನೇ ಪಂದ್ಯದಿಂದ ಕೆಎಲ್​ಆರ್​ ಅವರನ್ನು ಕೈ ಬಿಡಬೇಕೆಂದು ಅನೇಕ ಮಾಜಿ ಕ್ರಿಕೆಟಿಗರು ಆಗ್ರಹಿಸಿದ್ದಾರೆ.

3 / 6
ಆದರೆ ಇದರ ನಡುವೆ ಕೆಎಲ್ ರಾಹುಲ್ ಅವರಿಗೆ ಇನ್ನೊಂದು ಅವಕಾಶ ನೀಡಬೇಕೆಂಬ ಅಭಿಪ್ರಾಯವನ್ನು ಟೀಮ್ ಇಂಡಿಯಾ ಲೆಜೆಂಡ್ ಸುನೀಲ್ ಗವಾಸ್ಕರ್ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಗವಾಸ್ಕರ್, ದೆಹಲಿ ಟೆಸ್ಟ್​ನಲ್ಲಿ ರಾಹುಲ್​ಗೆ ಮತ್ತೊಂದು ಅವಕಾಶ ನೀಡಬೇಕು. ಕೇವಲ 1 ಇನಿಂಗ್ಸ್​ ಮೂಲಕ ಆತನ ಸಾಮರ್ಥ್ಯವನ್ನು ಅಳೆಯಬಾರದು ಎಂದು ತಿಳಿಸಿದ್ದಾರೆ.

4 / 6
ಕಳೆದ 1-2 ವರ್ಷಗಳಲ್ಲಿ ಅವರು ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿ, ಆತ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾನೆ. ಹೀಗಾಗಿ ಇನ್ನೂ ಒಂದು ಅವಕಾಶ ನೀಡಬೇಕೆಂದು ನಾನು ಭಾವಿಸುತ್ತೇನೆ. ಅದರಂತೆ ದೆಹಲಿ ಟೆಸ್ಟ್​ನಲ್ಲಿ ಕೆಎಲ್ ರಾಹುಲ್ ಅವರಿಗೆ ಚಾನ್ಸ್ ನೀಡಬೇಕೆಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.

5 / 6
ಸದ್ಯ ಇನ್​ಫಾರ್ಮ್ ಆಟಗಾರನಾಗಿ ತಂಡದಲ್ಲಿ ಶುಭ್​ಮನ್ ಗಿಲ್ ಇದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಅವರಿಗೆ ಇನ್ನೊಂದು ಅವಕಾಶ ನೀಡಿದ ಬಳಿಕ ಬದಲಾವಣೆ ಬಗ್ಗೆ ಯೋಚಿಸಬಹುದು. ತಂಡದಲ್ಲಿ ಗಿಲ್ ಇರುವುದರಿಂದ ಹೆಚ್ಚು ಚಿಂತಿಸಬೇಕಾದ ಅಗತ್ಯ ಕೂಡ ಇಲ್ಲ.

6 / 6
ಮುಂದಿನ ಅವಕಾಶದಲ್ಲಿ ರಾಹುಲ್ ವಿಫಲರಾದರೆ, ಯುವ ಆಟಗಾರನಿಗೆ ಚಾನ್ಸ್ ಸಿಗಲಿದೆ. ಆದರೆ ಅದಕ್ಕೂ ಮುನ್ನ ಟೀಮ್ ಇಂಡಿಯಾ ಉಪನಾಯಕನಾಗಿರುವ ಕೆಎಲ್ ರಾಹುಲ್​ಗೆ ಮತ್ತೊಂದು ಅವಕಾಶ ನೀಡಬೇಕೆಂಬುದು ನನ್ನ ಅಭಿಪ್ರಾಯ ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.