IPL 2023: ನಾಯಕ ಹಾರ್ದಿಕ್ ಪಾಂಡ್ಯ ನಡೆಯ ಬಗ್ಗೆ ಕಿಡಿಕಾರಿದ ಸುನಿಲ್ ಗವಾಸ್ಕರ್

Edited By:

Updated on: May 31, 2023 | 10:29 PM

IPL 2023 Kannada: ಗುಜರಾತ್ ಟೈಟಾನ್ಸ್-ಸಿಎಸ್​ಕೆ ನಡುವಣ ಫೈನಲ್ ಪಂದ್ಯವು​ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಕೊನೆಯ ಓವರ್​ನಲ್ಲಿ ಸಿಎಸ್​ಕೆಗೆ ಗೆಲ್ಲಲು 13 ರನ್​ಗಳ ಅಗತ್ಯವಿತ್ತು.

1 / 8
IPL 2023: ಐಪಿಎಲ್ ಫೈನಲ್ ಪಂದ್ಯ ಮುಗಿದರೂ ಚರ್ಚೆಗಳು ಮಾತ್ರ ಮುಂದುವರೆದಿದೆ. ಅದರಲ್ಲೂ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೋತಿದ್ದು ಈ ಚರ್ಚೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ. ಇದೀಗ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕನ ನಡೆಯ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

IPL 2023: ಐಪಿಎಲ್ ಫೈನಲ್ ಪಂದ್ಯ ಮುಗಿದರೂ ಚರ್ಚೆಗಳು ಮಾತ್ರ ಮುಂದುವರೆದಿದೆ. ಅದರಲ್ಲೂ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೋತಿದ್ದು ಈ ಚರ್ಚೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ. ಇದೀಗ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕನ ನಡೆಯ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

2 / 8

ಗುಜರಾತ್ ಟೈಟಾನ್ಸ್-ಸಿಎಸ್​ಕೆ ನಡುವಣ ಫೈನಲ್ ಪಂದ್ಯವು​ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಕೊನೆಯ ಓವರ್​ನಲ್ಲಿ ಸಿಎಸ್​ಕೆಗೆ ಗೆಲ್ಲಲು 13 ರನ್​ಗಳ ಅಗತ್ಯವಿತ್ತು. ಈ ಹಂತದಲ್ಲಿ ದಾಳಿಗಿಳಿದ ಮೋಹಿತ್ ಶರ್ಮಾ 4 ಎಸೆತಗಳಲ್ಲಿ ನೀಡಿದ್ದು ಕೇವಲ 3 ರನ್ ಮಾತ್ರ.

3 / 8

ಆದರೆ ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಸಿಕ್ಸ್ ಹಾಗೂ ಫೋರ್ ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಆದರೆ ಅದುವರೆಗೆ ಚೆನ್ನಾಗಿಯೇ ಬೌಲ್ ಮಾಡಿದ್ದ ಮೋಹಿತ್ ಶರ್ಮಾ ಕೊನೆಯ ಎಸೆತಗಳಲ್ಲಿ ಸಿಕ್ಸ್-ಫೋರ್ ಹೊಡೆಸಿಕೊಂಡಿದ್ದೇಕೆ ಎಂಬ ಪ್ರಶ್ನೆ ಇದೀಗ ಗುಜರಾತ್ ಟೈಟಾನ್ಸ್ ಅಭಿಮಾನಿಗಳನ್ನು ಕಾಡುತ್ತಿದೆ.

4 / 8

ಈ ಕಾಡುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಸುನಿಲ್ ಗವಾಸ್ಕರ್. ಮೋಹಿತ್ ಶರ್ಮಾ ಅವರ ಕೊನೆಯ ಎರಡು ಎಸೆತಗಳ ಮೇಲೆ ಪರಿಣಾಮ ಬೀರಿದ್ದು ಗುಜರಾತ್ ಟೈಟಾನ್ಸ್ ತಂಡದ ನಾಯಕ ನಿರ್ಧಾರ ಎಂದು ಗವಾಸ್ಕರ್ ಆರೋಪಿಸಿದ್ದಾರೆ.

5 / 8

ಈ ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ಮೋಹಿತ್ ಶರ್ಮಾ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡುತ್ತಿದ್ದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್ ಮಾತ್ರ ನೀಡಿದ್ದರು. ಇದಾಗ್ಯೂ ಹಾರ್ದಿಕ್ ಪಾಂಡ್ಯ ಅವರ ಬಳಿ ಚರ್ಚಿಸುವ ಅಗತ್ಯವೇ ಇರಲಿಲ್ಲ.

6 / 8

ಇನ್ನು ಕೊನೆಯ ಓವರ್​ನ 2 ಎಸೆತಗಳು ಬಾಕಿ ಇರುವಾಗ ಅವರಿಗೆ ನೀರು ಕಳುಹಿಸಿರುವುದು ಅಚ್ಚರಿ ಮೂಡಿಸಿತು. ಇದೇ ವೇಳೆ ಹಾರ್ದಿಕ್ ಪಾಂಡ್ಯ ಅವರ ಬಳಿ ಮಾತನಾಡಿದರು. ಬೌಲರ್ ಉತ್ತಮ ಲಯದಲ್ಲಿದ್ದಾಗ, ಮಾನಸಿಕವಾಗಿಯೂ ದೃಢವಾಗಿರುವಾಗ ಯಾರೂ ಕೂಡ ಏನು ಹೇಳಲು ಹೋಗಬಾರದು.

7 / 8

4 ಎಸೆತಗಳನ್ನು ಉತ್ತಮವಾಗಿಯೇ ಮಾಡಿದ್ದರಿಂದ ದೂರದಿಂದ ಚೆನ್ನಾಗಿ ಬೌಲಿಂಗ್ ಮಾಡಿದ್ದೀಯಾ ಎಂದು ಪ್ರೋತ್ಸಾಹಿಸಬೇಕಷ್ಟೇ. ಆದರೆ ಓವರ್​ ಮಧ್ಯೆ ನೀರು ತರಿಸಿ, ಹಾರ್ದಿಕ್ ಪಾಂಡ್ಯ ಬಂದು ಚರ್ಚಿಸಿದರು. ಈ ವೇಳೆ ಇದ್ದಕ್ಕಿದ್ದಂತೆ ಮೋಹಿತ್ ಶರ್ಮಾ ಅತ್ತ-ಇತ್ತ ನೋಡುತ್ತಿದ್ದರು. ಅದಕ್ಕೂ ಮೊದಲು ಅವರು ಸಂಪೂರ್ಣವಾಗಿ ಕೇಂದ್ರೀಕೃತರಾಗಿದ್ದರು.

8 / 8

ಈ ಎಲ್ಲಾ ಘಟನೆಗಳ ಬಳಿಕ ಮೋಹಿತ್ ಶರ್ಮಾರ 5ನೇ ಎಸೆತದಲ್ಲಿ ಜಡೇಜಾ ಸಿಕ್ಸ್ ಬಾರಿಸಿದರು. ಇನ್ನು ಕೊನೆಯ ಎಸೆತದಲ್ಲಿ ಫೋರ್ ಬಾರಿಸಿ ಸ್ಮರಣೀಯ ಜಯ ತಂದುಕೊಟ್ಟರು. ಅಂದರೆ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಬೌಲರ್​ ಬಳಿ ಹೋಗಿ ಹಾರ್ದಿಕ್ ಪಾಂಡ್ಯ ಚರ್ಚಿಸಿದ್ದು ಅವರ ಲಯ ತಪ್ಪಲು ಕಾರಣವಾಯಿತು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Loading...
Unable to load recommendations.
Follow Us