T20 World Cup 2024: ‘ಈತನನ್ನು ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿ’; ಅಜಿತ್ ಬಳಿ ರೈನಾ ಒತ್ತಾಯ
T20 World Cup 2024: ಈ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕೆಲವು ಭಾರತದ ಯುವ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಅವರಲ್ಲಿ ಶಿವಂ ದುಬೆಗೆ ಅವಕಾಶ ನೀಡಲೇಬೇಕೆಂದು ಮಾಜಿ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ, ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್ ಅಗರ್ಕರ್ ಬಳಿ ಮನವಿ ಮಾಡಿದ್ದಾರೆ.
1 / 7
ಈ ಬಾರಿಯ ಐಪಿಎಲ್‌ನಲ್ಲಿ ಭಾರತದ ಹಲವು ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುತ್ತಿವೆ. ಇದರಲ್ಲಿ ಮಯಾಂಕ್ ಯಾದವ್ರಿಂದ ಹಿಡಿದು, ಆಶುತೋಷ್ ಶರ್ಮಾ, ಆಂಗ್ಕ್ರಿಶ್ ರಘುವಂಶಿ ಸೇರಿದಂತೆ ಹಲವು ಆಟಗಾರರು ಸೇರಿದ್ದಾರೆ. ಇದರಲ್ಲಿ ಸಿಎಸ್ಕೆ ತಂಡದ ಸ್ಫೋಟಕ ಬ್ಯಾಟರ್ ಶಿವಂ ದುಬೆ ಹೆಸರು ಕೂಡ ಸೇರಿದೆ.
2 / 7
ಸಿಎಸ್ಕೆ ಪರ ಕಳೆದ ಆವೃತ್ತಿಯಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ದುಬೆ, ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದಾರೆ. ಯಾವುದೇ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಬಂದರೂ ದುಬೆ ಮಾತ್ರ ತನ್ನ ಆಟದ ಶೈಲಿಯನ್ನು ಬದಲಿಸುವುದಿಲ್ಲ.
3 / 7
ಅಲ್ಲದೆ ಏಕಾಂಗಿಯಾಗಿಯೇ ಪಂದ್ಯದ ದಿಕ್ಕು ಬದಲಿಸುವ ಸಾಮಥ್ರ್ಯ ದುಬೆಗಿದೆ. ಇದನ್ನು ನಾವು ಸಾಕಷ್ಟು ಪಂದ್ಯಗಳಲ್ಲಿ ನೋಡಿದ್ದೇವೆ. ಇದೀಗ ಇಂತಹ ಅದ್ಭುತ ಆಟಗಾರ ದುಬೆಗೆ ಬೆನ್ನೇಲುಬಾಗಿ ಮಾಜಿ ಟೀಂ ಇಂಡಿಯಾ ಆಟಗಾರರು ಬ್ಯಾಟ್ ಬೀಸುತ್ತಿದ್ದಾರೆ.
4 / 7
ವಾಸ್ತವವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಮುಂಬರುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಮಂಡಳಿ ಆಯ್ಕೆ ಮಾಡಲಿದೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಕೂಡ ಭಾರತ ಟಿ20 ವಿಶ್ವಕಪ್ ತಂಡದ ಆಯ್ಕೆಗೆ ನೆರವಾಗಲಿದೆ.
5 / 7
ಈ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕೆಲವು ಭಾರತದ ಯುವ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಅವರಲ್ಲಿ ಶಿವಂ ದುಬೆಗೆ ಅವಕಾಶ ನೀಡಲೇಬೇಕೆಂದು ಮಾಜಿ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ, ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್ ಅಗರ್ಕರ್ ಬಳಿ ಮನವಿ ಮಾಡಿದ್ದಾರೆ.
6 / 7
ವಾಸ್ತವವಾಗಿ ನಿನ್ನೆ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಈ ಪಂದ್ಯದಲ್ಲಿ ಶಿವಂ ಕೇವಲ 27 ಎಸೆತಗಳಲ್ಲಿ 66 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ದುಬೆ 2 ಬೌಂಡರಿ ಮತ್ತು 7 ಅದ್ಭುತ ಸಿಕ್ಸರ್‌ಗಳನ್ನು ಬಾರಿಸಿದರು.
7 / 7
ಇದಾದ ಬಳಿಕ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರೈನಾ, ಶಿವಂ ದುಬೆಗೆ ವಿಶ್ವಕಪ್ ಲೋಡಿಂಗ್, ಅಜಿತ್ ಅಗರ್ಕರ್ ಭಾಯ್ ದಯವಿಟ್ಟು ಈತನನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿ ಎಂದು ಬರೆದುಕೊಂಡಿದ್ದಾರೆ. ರೈನಾ ಅವರ ಈ ಟ್ವೀಟ್‌ಗೆ ಅಭಿಮಾನಿಗಳು ಕೂಡ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Published On - 5:38 pm, Wed, 24 April 24