T20 World Cup 2024: ಟಿ20 ವಿಶ್ವಕಪ್ ರಾಯಭಾರಿಯಾಗಿ ಉಸೇನ್ ಬೋಲ್ಟ್ ನೇಮಕ..!
T20 World Cup 2024: ಅಮೇರಿಕಾದಲ್ಲಿ ಕ್ರಿಕೆಟ್ ಸಾಮ್ರಾಜ್ಯ ಸ್ಥಾಪಿಸುವ ಸಲುವಾಗಿ ಐಸಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಪ್ರಯುಕ್ತ ಇದೀಗ ತನ್ನ ವೇಗದ ಮೂಲಕ ಒಲಂಪಿಕ್ಸ್ನಲ್ಲಿ ಚಿನ್ನದ ಪದಕಗಳ ಭೇಟೆಯಾಡಿದ್ದ ಜಮೈಕಾದ ಶರ ವೇಗದ ಸರದಾರ ಉಸೇನ್ ಬೋಲ್ಟ್ ಅವರನ್ನು ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.