- Kannada News Photo gallery Cricket photos IPL 2024: IPL teams to lose most matches while defending 200 Runs
IPL 2024: RCB ತಂಡದ ಕಳಪೆ ದಾಖಲೆ ಸರಿಗಟ್ಟಿದ CSK
IPL 2024: ಐಪಿಎಲ್ 2024ರ ಆರ್ಸಿಬಿ ತಂಡ ಇದುವರೆಗೆ 8 ಪಂದ್ಯಗಳನ್ನಾಡಿದೆ. ಈ ಎಂಟು ಪಂದ್ಯಗಳಲ್ಲಿ ಫಾಫ್ ಡುಪ್ಲೆಸಿಸ್ ಪಡೆ ಗೆದ್ದಿರುವುದು ಕೇವಲ ಒಂದು ಪಂದ್ಯವನ್ನು ಮಾತ್ರ. ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿದ್ದನ್ನು ಬಿಟ್ಟರೆ, ಉಳಿದೆಲ್ಲಾ ಪಂದ್ಯಗಳಲ್ಲೂ ಆರ್ಸಿಬಿ ಸೋಲನುಭವಿಸಿದೆ. ಇದೀಗ ಆರ್ಸಿಬಿ ತನ್ನ 9ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.
Updated on: Apr 24, 2024 | 2:23 PM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 39ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಅನಗತ್ಯ ದಾಖಲೆಯೊಂದನ್ನು ಬರೆದಿದೆ. ಅದು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕಳಪೆ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಅಂದರೆ ಐಪಿಎಲ್ ಇತಿಹಾಸದಲ್ಲಿ 200+ ರನ್ ಬಾರಿಸಿ ಅತೀ ಹೆಚ್ಚು ಬಾರಿ ಸೋತ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿತ್ತು. ಆರ್ಸಿಬಿ ಒಟ್ಟು 5 ಬಾರಿ 200 ಕ್ಕೂ ಅಧಿಕ ರನ್ಗಳ ಗುರಿ ನೀಡಿ ಸೋಲನುಭವಿಸಿತ್ತು.

ಇದೀಗ ಈ ದಾಖಲೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ಸರಿಗಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 210 ರನ್ ಕಲೆಹಾಕಿತ್ತು. ಈ ಗುರಿಯನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡವು 19.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಎಲ್ಎಸ್ಜಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 200+ ಸ್ಕೋರ್ಗಳಿಸಿ 5ನೇ ಬಾರಿ ಸೋತಂತಾಗಿದೆ. ಈ ಮೂಲಕ ಆರ್ಸಿಬಿ ಹೆಸರಿನಲ್ಲಿದ್ದ ಅನಗತ್ಯ ದಾಖಲೆಯನ್ನು ಸಿಎಸ್ಕೆ ತಂಡ ಸರಿಗಟ್ಟಿರುವುದು ವಿಶೇಷ.

ಇನ್ನು ಆರ್ಸಿಬಿ ಮತ್ತು ಸಿಎಸ್ಕೆ ನಡುವಣ 2ನೇ ಪಂದ್ಯವು ಮೇ 18 ರಂದು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಆರ್ಸಿಬಿ ಐಪಿಎಲ್ ಸೀಸನ್ 17ರ ಲೀಗ್ ಹಂತದ ಪಂದ್ಯಗಳನ್ನು ಮುಗಿಸಲಿದೆ.

ಗುರುವಾರ (ಏ.25) ನಡೆಯಲಿರುವ ಐಪಿಎಲ್ನ 41ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಆರ್ಸಿಬಿ ಪಾಲಿಗೆ ತುಂಬಾ ಮಹತ್ವದ ಪಂದ್ಯ. ಏಕೆಂದರೆ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಆರ್ಸಿಬಿ ತಂಡದ ಪ್ಲೇಆಫ್ ಆಸೆ ಜೀವಂತವಾಗಿರಲಿದೆ.
