IPL 2022: ಐಪಿಎಲ್​ಗೆ ರಿ ಎಂಟ್ರಿ ಕೊಡಲಿದ್ದಾರೆ ಸುರೇಶ್ ರೈನಾ

| Updated By: ಝಾಹಿರ್ ಯೂಸುಫ್

Updated on: Mar 16, 2022 | 2:47 PM

Suresh Raina: ಟೀಮ್ ಇಂಡಿಯಾ ಪರ 2005ರಲ್ಲಿ ಪದಾರ್ಪಣೆ ಮಾಡಿದ್ದ ಸುರೇಶ್ ರೈನಾ 2020, ಆಗಸ್ಟ್ 15 ರಂದು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. 15 ವರ್ಷಗಳ ವೃತ್ತಿಜೀವನದಲ್ಲಿ ರೈನಾ 226 ಏಕದಿನ ಪಂದ್ಯಗಳನ್ನು ಆಡಿದ್ದು 5,615 ರನ್ ಬಾರಿಸಿದ್ದಾರೆ.

1 / 5
 ಈ ಸಲ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. 2 ಕೋಟಿ ರೂ ಮೂಲ ಬೆಲೆ ಹೊಂದಿದ್ದ ರೈನಾ ಅವರ ಖರೀದಿಗೆ ಈ ಹಿಂದಿನ ಫ್ರಾಂಚೈಸಿ ಸಿಎಸ್​ಕೆ ಕೂಡ ಒಲವು ತೋರಲಿಲ್ಲ. ಹೀಗಾಗಿ ಈ ಬಾರಿ ರೈನಾ ಅನ್​ಸೋಲ್ಡ್​ ಪಟ್ಟಿಯಲ್ಲಿ ಉಳಿದುಕೊಂಡಿದ್ದರು.

2 / 5
ಇದಾಗ್ಯೂ ರೈನಾ ಬದಲಿ ಆಟಗಾರನಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಗುಜರಾತ್ ತಂಡದಿಂದ ಜೇಸನ್ ರಾಯ್ ಹೊರನಡೆದಾಗ ಬದಲಿ ಆಟಗಾರನಾಗಿ ಅಫ್ಘಾನ್ ಆಟಗಾರ ರಹಮನುಲ್ಲಾ ಗುರ್ಬಾಜ್ ಆಯ್ಕೆಯಾಗಿದ್ದರು. ಇನ್ನು ಕೆಕೆಆರ್​ ತಂಡದಿಂದ ಹೊರನಡೆದ ಅಲೆಕ್ಸ್ ಹೇಲ್ಸ್ ಬದಲಿಗೆ ಆರೋನ್ ಫಿಂಚ್​ಗೆ ಆಯ್ಕೆಯಾಗಿದ್ದರು. ಇದಾಗ್ಯೂ ರೈನಾ ಅವರ ಆಯ್ಕೆಗೆ ಯಾವುದೇ ಫ್ರಾಂಚೈಸಿ ಮುಂದಾಗಿರಲಿಲ್ಲ.

3 / 5
ಇದೀಗ ಸುರೇಶ್ ರೈನಾ ಐಪಿಎಲ್​ಗೆ ರಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ. ಬದಲಾಗಿ ಐಪಿಎಲ್ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಜೊತೆ ಸುರೇಶ್ ರೈನಾ ಅವರು ಕೂಡ ಸ್ಟಾರ್ ಸ್ಪೋರ್ಟ್ಸ್​​ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಕಾಮೆಂಟೇಟರ್​ ಆಗಿ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ ಸುರೇಶ್ ರೈನಾ.

4 / 5
ಟೀಮ್ ಇಂಡಿಯಾ ಪರ 2005ರಲ್ಲಿ ಪದಾರ್ಪಣೆ ಮಾಡಿದ್ದ ಸುರೇಶ್ ರೈನಾ 2020, ಆಗಸ್ಟ್ 15 ರಂದು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. 15 ವರ್ಷಗಳ ವೃತ್ತಿಜೀವನದಲ್ಲಿ ರೈನಾ 226 ಏಕದಿನ ಪಂದ್ಯಗಳನ್ನು ಆಡಿದ್ದು 5,615 ರನ್ ಬಾರಿಸಿದ್ದಾರೆ. ಇನ್ನು 78 ಟಿ20 ಪಂದ್ಯಗಳಿಂದ 1,605 ರನ್ ಕಲೆಹಾಕಿದ್ದಾರೆ. ಹಾಗೆಯೇ 19 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 768 ರನ್ ಬಾರಿಸಿದ್ದಾರೆ.

5 / 5
ಇನ್ನು ಐಪಿಎಲ್​ನಲ್ಲಿ ರೈನಾ 205 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 1 ಶತಕ, 39 ಅರ್ಧ ಶತಕಗಳ ನೆರವಿನಿಂದ 5528 ರನ್ ಗಳಿಸಿದ್ದಾರೆ. ಇದಲ್ಲದೇ 25 ವಿಕೆಟ್ ಕಬಳಿಸಿ ಕೂಡ ಮಿಂಚಿದ್ದರು. ಸಿಎಸ್​ಕೆ ಅಲ್ಲದೆ ಈ ಹಿಂದೆ ಗುಜರಾತ್ ಲಯನ್ಸ್  ತಂಡದ ನಾಯಕರಾಗಿಯೂ ಕೂಡ ರೈನಾ ಕಾಣಿಸಿಕೊಂಡಿದ್ದರು. ಇದೀಗ ಐಪಿಎಲ್ ಸೀಸನ್​ 15 ಮೂಲಕ ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.