- Kannada News Photo gallery Cricket photos Jhulan Goswami completes 250th ODI wicket in Womens World Cup 2022 England Women vs India Women
IND W VS ENG W: ಮಹಿಳಾ ವಿಶ್ವಕಪ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದ ಜೂಲನ್ ಗೋಸ್ವಾಮಿ..!
Womens World Cup 2022: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜೂಲನ್ ಟ್ಯಾಮಿ ಬ್ಯೂಮಾಂಟ್ ಅವರನ್ನು ಔಟ್ ಮಾಡಿದ ತಕ್ಷಣ, ಅವರು ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪೂರೈಸಿದರು.
Updated on: Mar 16, 2022 | 11:30 AM

ಜೂಲನ್ ಗೋಸ್ವಾಮಿ ಅವರು ತಮ್ಮ ಕೊನೆಯ ವಿಶ್ವಕಪ್ ಆಡುತ್ತಿದ್ದಾರೆ ಆದರೆ ಅವರ ಬೌಲಿಂಗ್ನಲ್ಲಿ ಯಾವುದೇ ಕೊರತೆಯಿಲ್ಲ. 10 ಓವರ್ ಬೌಲ್ ಮಾಡಿ 26 ರನ್ ನೀಡಿ ಎರಡು ವಿಕೆಟ್ ಪಡೆದರು. ಜೂಲನ್ ತಮ್ಮ ಕೋಟಾ ಓವರ್‌ಗಳಲ್ಲಿ 42 ಎಸೆತಗಳನ್ನು ಡಾಟ್ ಮಬಾಲ್ ಮಾಡಿದರು. ಅವರು ಸಿದ್ರಾ ಅಮೀನ್ ಮತ್ತು ನಿದಾ ದಾರ್ ಅವರ ವಿಕೆಟ್ ಪಡೆದರು. ಇದೀಗ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ವಿಶ್ವಕಪ್‌ಗೆ ಮುನ್ನ ಅವರ ಹೆಸರಿನಲ್ಲಿ 36 ವಿಕೆಟ್‌ಗಳಿದ್ದವು, ಅದು ಈಗ 38 ಆಗಿದೆ. ಇನ್ನು ಎರಡು ವಿಕೆಟ್ ಕಬಳಿಸುವ ಮೂಲಕ ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಮಹಿಳಾ ಕ್ರಿಕೆಟ್‌ನಲ್ಲಿ ಜೂಲನ್ ಗೋಸ್ವಾಮಿ ಹೊರತುಪಡಿಸಿ, ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಗಳಿಸಲು ಯಾವುದೇ ಬೌಲರ್‌ಗೆ ಸಾಧ್ಯವಾಗಿಲ್ಲ. ಅವರ ನಂತರ ಆಸ್ಟ್ರೇಲಿಯಾದ ಕ್ಯಾಥರೀನ್ ಫಿಟ್ಜ್‌ಪ್ಯಾಟ್ರಿಕ್ 180 ವಿಕೆಟ್‌ಗಳನ್ನು ಪಡೆದಿದ್ದಾರೆ. ವೆಸ್ಟ್ ಇಂಡೀಸ್‌ನ ಅನಿಸಾ ಮೊಹಮ್ಮದ್ ಅವರ ಹೆಸರಿನಲ್ಲಿ 180 ವಿಕೆಟ್‌ಗಳಿವೆ.

ಜೂಲನ್ ಗೋಸ್ವಾಮಿ ಇತರ ಬೌಲರ್‌ಗಳಿಗಿಂತ ODI ಕ್ರಿಕೆಟ್‌ನಲ್ಲಿ 38 ಪ್ರತಿಶತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.

ಜೂಲನ್ ಗೋಸ್ವಾಮಿ ಮಹಿಳಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ. ಗೋಸ್ವಾಮಿ ಅವರು 41 ವಿಕೆಟ್‌ಗಳನ್ನು ಕಬಳಿಸಿದ್ದು ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಲಿನ್ ಫುಲ್‌ಸ್ಟೋನ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಪಂದ್ಯದ ಬಗ್ಗೆ ಮಾತನಾಡುವುದಾದರೆ ಇಂಗ್ಲೆಂಡ್ ವಿರುದ್ಧ ಭಾರತದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಲ್ಲಿ ವಿಫಲರಾದರು. ಮಂಧಾನ 35 ಮತ್ತು ರಿಚಾ ಘೋಷ್ 33 ರನ್ ಗಳಿಸಿದರು. ಜೂಲನ್ ಗೋಸ್ವಾಮಿ ಕೂಡ 20 ರನ್ ಕೊಡುಗೆ ನೀಡಿದರು. ಉಳಿದವರು ಬಂದಷ್ಟೇ, ವೇಗವಾಗಿ ಪೆವಿಲಿಯನ್ ಸೇರಿದರು.




