Suryakumar Yadav: ಮಂಕಾದ ಸೂರ್ಯ: ವಿಶ್ವಕಪ್ ತಂಡದಿಂದ ಔಟ್..?

| Updated By: ಝಾಹಿರ್ ಯೂಸುಫ್

Updated on: Mar 19, 2023 | 10:28 PM

Suryakumar Yadav Odi Records: ಈ ವರ್ಷದ ಆರಂಭದಲ್ಲೇ ಟೀಮ್ ಇಂಡಿಯಾ ಏಕದಿನ ವಿಶ್ವಕಪ್​ಗಾಗಿ ಬಲಿಷ್ಠ ತಂಡವನ್ನು ರೂಪಿಸುವ ಸೂಚನೆ ನೀಡಿತ್ತು. ಇದಕ್ಕಾಗಿ 20 ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿತ್ತು.

1 / 7
ಟಿ20 ಕ್ರಿಕೆಟ್​ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಏಕದಿನ ಕ್ರಿಕೆಟ್ ಕೆರಿಯರ್​ಗೆ ಕಾರ್ಮೋಡ ಕವಿದಿದೆ. ಏಕೆಂದರೆ ಸತತ ಅವಕಾಶ ಲಭಿಸಿದರೂ ಸೂರ್ಯ ಮಾತ್ರ ಪ್ರಜ್ವಲಿಸುತ್ತಿಲ್ಲ. ಅದರಲ್ಲೂ ಕ್ರೀಸ್​ಗೆ ಆಗಮಿಸಿದ ವೇಗದಲ್ಲೇ ಹಿಂತಿರುಗುತ್ತಿರುವುದು ಇದೀಗ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಇದೇ ಕಾರಣದಿಂದ ಇದೀಗ ಏಕದಿನ ವಿಶ್ವಕಪ್ ತಂಡದಿಂದ ಸೂರ್ಯಕುಮಾರ್ ಯಾದವ್ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.

2 / 7
ಈ ವರ್ಷದ ಆರಂಭದಲ್ಲೇ ಟೀಮ್ ಇಂಡಿಯಾ ಏಕದಿನ ವಿಶ್ವಕಪ್​ಗಾಗಿ ಬಲಿಷ್ಠ ತಂಡವನ್ನು ರೂಪಿಸುವ ಸೂಚನೆ ನೀಡಿತ್ತು. ಇದಕ್ಕಾಗಿ 20 ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿತ್ತು. ಹೀಗೆ ಕಳೆದ ಕೆಲ ಸರಣಿಗಳಲ್ಲಿ ಸತತ ಅವಕಾಶ ಪಡೆದ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಒಬ್ಬರು.

3 / 7
ಆದರೆ ಏಕದಿನ ಕ್ರಿಕೆಟ್​ನಲ್ಲಿ 20 ಇನಿಂಗ್ಸ್ ಆಡಿದರೂ ಸೂರ್ಯಕುಮಾರ್ ಯಾದವ್ ಅವರ ಸರಾಸರಿ ರನ್​ಗಳಿಕೆಯು 25 ರಲ್ಲೇ ಇದೆ ಎಂಬುದೇ ಅಚ್ಚರಿ. ಅದರಲ್ಲೂ ಕೊನೆಯ 5 ಇನಿಂಗ್ಸ್​ಗಳನ್ನು ತೆಗೆದುಕೊಂಡರೆ 2 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನು ಕೊನೆಯ 10 ಏಕದಿನ ಇನಿಂಗ್ಸ್​ಗಳಲ್ಲಿ ಅವರ ಬ್ಯಾಟ್​ನಿಂದ ಮೂಡಿಬಂದ ಗರಿಷ್ಠ ಸ್ಕೋರ್ ಕೇವಲ 34 ರನ್​ ಮಾತ್ರ.

4 / 7
2021 ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್ 3 ಇನಿಂಗ್ಸ್ ಮೂಲಕ 124 ರನ್ ಬಾರಿಸಿ ಹೊಸ ಭರವಸೆ ಮೂಡಿಸಿದ್ದರು. ಆದರೆ 2022 ರಲ್ಲಿ 12 ಇನಿಂಗ್ಸ್​ಗಳಲ್ಲಿ ಕೇವಲ 260 ರನ್​ ಕಲೆಹಾಕಿದ್ದರು. ಈ ವರ್ಷ 5 ಇನಿಂಗ್ಸ್​ನಲ್ಲಿ ಕಲೆಹಾಕಿರುವುದು ಕೇವಲ​ 49 ರನ್ ಮಾತ್ರ.

5 / 7
ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಗೋಲ್ಡನ್ ಡಕ್​ಗೆ ಔಟಾಗಿದ್ದಾರೆ. ಎರಡು ಬಾರಿ ಕೂಡ ಮಿಚೆಲ್ ಸ್ಟಾರ್ಕ್​ ಎಸೆತಗಳಲ್ಲಿ ಎಲ್​ಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದ್ದರು. ಇದೀಗ ಕಾರಣದಿಂದಾಗಿ ಇದೀಗ ಸೂರ್ಯಕುಮಾರ್ ಯಾದವ್ ಅವರ ಆಯ್ಕೆ ಬಗ್ಗೆ ಪ್ರಶ್ನೆಗಳೆದ್ದಿವೆ.

6 / 7
ಏಕೆಂದರೆ ಏಕದಿನ ಕ್ರಿಕೆಟ್​ನಲ್ಲಿ 20 ಇನಿಂಗ್ಸ್ ಆಡಿದರೂ ಸೂರ್ಯಕುಮಾರ್ ಯಾದವ್ 25.47 ಸರಾಸರಿಯಲ್ಲಿ ಕೇವಲ 433 ರನ್​ ಕಲೆಹಾಕಿದ್ದಾರೆ. ಇದಾಗ್ಯೂ ಮುಂಬೈ ಆಟಗಾರನಿಗೆ ಸತತವಾಗಿ ಅವಕಾಶ ನೀಡಲಾಗುತ್ತಿದೆ.

7 / 7
ಮತ್ತೊಂದೆಡೆ 10 ಏಕದಿನ ಇನಿಂಗ್ಸ್​ನಲ್ಲಿ 66 ಸರಸಾರಿಯಲ್ಲಿ 330 ರನ್ ಪೇರಿಸಿರುವ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ ಎಂಬುದೇ ಅಚ್ಚರಿ.

Published On - 6:30 pm, Sun, 19 March 23