ಟ್ಯಾಟೂ ಪ್ರಿಯರ ಕಣ್ಣು ಕುಕ್ಕುತ್ತಿದೆ ಸೂರ್ಯಕುಮಾರ್ ಯಾದವ್ ಹೊಸ ಟ್ಯಾಟೂ; ಫೋಟೋ ನೋಡಿ
Suryakumar Yadav: ಸೂರ್ಯಕುಮಾರ್ ಯಾದವ್ ತಮ್ಮ ಕೈ ಮೇಲೆ ಈವಲ್ ಐ ಎಂಬ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ದುಷ್ಟ ಕಣ್ಣು ನೆಗೆಟಿವ್ ವೈಬ್‌ಗಳನ್ನು ದೂರವಿಡುತ್ತದೆ. ಹೀಗಾಗಿ ಸೂರ್ಯಕುಮಾರ್ ಕೈ ಮೇಲೆ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
Updated on:Jun 05, 2022 | 8:41 PM



ಮುಂಬೈನ ಲೈನ್ಸ್ ಅಂಡ್ ಶೇಡ್ಸ್ ಟ್ಯಾಟೂ ಸ್ಟುಡಿಯೋದಲ್ಲಿ ಸೂರ್ಯಕುಮಾರ್ ಯಾದವ್ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದು ನೀಲಿ ಮತ್ತು ಬಿಳಿ ಬಣ್ಣವನ್ನು ಹೊಂದಿರುವ ವರ್ಣರಂಜಿತ ಹಚ್ಚೆಯಾಗಿದೆ.

ಸೂರ್ಯ ಕುಮಾರ್ ಅವರ ದೇಹದ ಮೇಲೆ ಹಲವು ಟ್ಯಾಟೂಗಳಿವೆ. ಬ್ರೇಕ್ಫಾಸ್ಟ್ ವಿಥ್ ಚಾಂಪಿಯನ್ಸ್ ಶೋನಲ್ಲಿ ಅವರು ತಮ್ಮ ಮೊದಲ ಹಚ್ಚೆ ಬಗ್ಗೆ ಹೇಳಿದರು. ಸೂರ್ಯ ತಮ್ಮ ಹೆತ್ತವರ ಹೆಸರನ್ನು ಮೊದಲ ಬಾರಿಗೆ ಹಚ್ಚೆ ಹಾಕಿಸಿಕೊಂಡಿದ್ದರು ಎಂಬುದನ್ನು ಬಹಿರಂಗಗೊಳಿಸದ್ದರು. ಇದಾದ ನಂತರ ಅವರ ಕೈಯ ಮೇಲೆ ಅವರ ಫೋಟೋ ಕೂಡ ಹಚ್ಚೆ ಹಾಕಿಸಿಕೊಂಡಿದ್ದರು.

ಸೂರ್ಯ ಈ ಸೀಸನ್ನಲ್ಲಿ ಕೇವಲ 8 ಪಂದ್ಯಗಳನ್ನು ಆಡಿ 43.39 ರ ಪ್ರಭಾವಶಾಲಿ ಬ್ಯಾಟಿಂಗ್ ಸರಾಸರಿ ಮತ್ತು 145.67 ರ ಸ್ಟ್ರೈಕ್ ರೇಟ್‌ನಲ್ಲಿ 303 ರನ್ ಗಳಿಸಿದರು. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೂ ಹೊರಗಿಡಲಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಸೀಮಿತ ಓವರ್ಗಳ ಸರಣಿಗೂ ಮುನ್ನ ಅವರು ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ.
Published On - 8:23 pm, Sun, 5 June 22




