ಅತೀ ಕಡಿಮೆ ಎಸೆತಗಳಲ್ಲಿ 3 ಸಾವಿರ ರನ್ ಪೂರೈಸಿದ ಬ್ಯಾಟ್ಸ್ಮನ್ ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Oct 02, 2022 | 6:10 PM
T20 Records: ಬಾಬರ್ ಹಾಗೂ ವಿರಾಟ್ ಕೊಹ್ಲಿಗೆ ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತದಲ್ಲಿ 3 ಸಾವಿರ ರನ್ ಪೂರೈಸಿದ ಬ್ಯಾಟ್ಸ್ಮನ್ ಯಾರೆಲ್ಲಾ ನೋಡೋಣ...
1 / 7
ಇಂಗ್ಲೆಂಡ್ ವಿರುದ್ಧದ 6ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ (Babar Azam) ಆಜಂ 59 ಎಸೆತಗಳಲ್ಲಿ 87 ರನ್ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಬಾಬರ್ ಟಿ20 ಕ್ರಿಕೆಟ್ನಲ್ಲಿ 3 ಸಾವಿರ ರನ್ ಪೂರೈಸಿದರು. ಈ ಸಾಧನೆಯೊಂದಿಗೆ ಪಾಕ್ ನಾಯಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ (Virat Kohli) ವಿಶ್ವ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.
2 / 7
ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 3 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ರನ್ ಮೆಷಿನ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 81 ಇನಿಂಗ್ಸ್ಗಳ ಮೂಲಕ ಈ ಮೈಲುಗಲ್ಲು ಸಾಧಿಸಿದ್ದರು. ಇದೀಗ ಪಾಕ್ ತಂಡದ ನಾಯಕ ಬಾಬರ್ ಆಜಂ ಕೂಡ 81 ಇನಿಂಗ್ಸ್ ಮೂಲಕವೇ 3 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ಅತೀ ಕಡಿಮೆ ಎಸೆತಗಳಲ್ಲಿ 3 ಸಾವಿರ ರನ್ ಪೂರೈಸಿದ ದಾಖಲೆಯನ್ನು ಬಾಬರ್ ಹಾಗೂ ವಿರಾಟ್ ಕೊಹ್ಲಿಗೆ ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತದಲ್ಲಿ 3 ಸಾವಿರ ರನ್ ಪೂರೈಸಿದ ಬ್ಯಾಟ್ಸ್ಮನ್ ಯಾರೆಲ್ಲಾ ನೋಡೋಣ...
3 / 7
1- ರೋಹಿತ್ ಶರ್ಮಾ: ಹಿಟ್ಮ್ಯಾನ್ ಟಿ20 ಕ್ರಿಕೆಟ್ನಲ್ಲಿ ಕೇವಲ 2149 ಎಸೆತಗಳಲ್ಲಿ 3 ಸಾವಿರ ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
4 / 7
2- ವಿರಾಟ್ ಕೊಹ್ಲಿ: ಕಿಂಗ್ ಕೊಹ್ಲಿ 2169 ಎಸೆತಗಳಲ್ಲಿ ಟಿ20 ಕ್ರಿಕೆಟ್ನಲ್ಲಿ 3 ಸಾವಿರ ರನ್ ಪೂರೈಸಿದ್ದರು.
5 / 7
3- ಮಾರ್ಟಿನ್ ಗಪ್ಟಿನ್: ನ್ಯೂಜಿಲೆಂಡ್ ಆಟಗಾರ ಗಪ್ಟಿಲ್ 2203 ಎಸೆತಗಳಲ್ಲಿ ಚುಟುಕು ಕ್ರಿಕೆಟ್ನಲ್ಲಿ 3 ಸಾವಿರ ರನ್ ಬಾರಿಸಿದ್ದರು.
6 / 7
4- ಪೌಲ್ ಸ್ಟೀರ್ಲಿಂಗ್: ಐರ್ಲೆಂಡ್ ಆಟಗಾರ ಪೌಲ್ ಸ್ಟೀರ್ಲಿಂಗ್ ಟಿ20 ಕ್ರಿಕೆಟ್ನಲ್ಲಿ 2226 ಎಸೆತಗಳನ್ನು ಎದುರಿಸಿ 3 ಸಾವಿರ ರನ್ ಕಲೆಹಾಕಿದ್ದರು.
7 / 7
5- ಬಾಬರ್ ಆಜಂ: ಪಾಕ್ ತಂಡದ ನಾಯಕ ಬಾಬರ್ ಆಜಂ ಟಿ20 ಕ್ರಿಕೆಟ್ನಲ್ಲಿ 2317 ಎಸೆತಗಳನ್ನು ಎದುರಿಸುವ ಮೂಲಕ 3 ಸಾವಿರ ರನ್ ಪೂರೈಸಿದ್ದಾರೆ.