Sarfaraz Khan: 9 ಶತಕ, 5 ಅರ್ಧಶತಕ: ದೇಶೀಯ ಅಂಗಳದಲ್ಲಿ ಸರ್ಫರಾಜ್ ಕಿಂಗ್..!

Sarfaraz Khan: ಯಾವುದೇ ತಂಡದ ನಿರ್ಣಾಯಕ ಪಂದ್ಯದಲ್ಲಿ ಸರ್ಫರಾಜ್ ಖಾನ್ ಮಹತ್ವದ ಪಾತ್ರವಹಿಸುತ್ತಿರುವುದು ಸ್ಪಷ್ಟ. ಹೀಗಾಗಿಯೇ ಭರ್ಜರಿ ಫಾರ್ಮ್​ನಲ್ಲಿರುವ ಯುವ ಬ್ಯಾಟ್ಸ್​ಮನ್​ಗೆ ಭಾರತ ಟೆಸ್ಟ್​ ತಂಡದಲ್ಲಿ ಅವಕಾಶ ನೀಡಬೇಕೆಂಬ ಕೂಗುಗಳು ಕೇಳಿ ಬರುತ್ತಿದೆ.

Oct 02, 2022 | 12:05 PM
TV9kannada Web Team

| Edited By: Zahir PY

Oct 02, 2022 | 12:05 PM

ಭಾರತದ ಯುವ ಬ್ಯಾಟ್ಸ್​ಮನ್ ಸರ್ಫರಾಜ್ ಖಾನ್ ಸದ್ಯ ದೇಶೀಯ ಅಂಗಳದ ಅತ್ಯಂತ ಯಶಸ್ವಿ ಬ್ಯಾಟ್ಸ್​ಮನ್. ಏಕೆಂದರೆ ಸರ್ಫರಾಜ್ ಬ್ಯಾಟ್​ನಿಂದ ಬ್ಯಾಕ್ ಟು ಬ್ಯಾಕ್ ಶತಕಗಳು ಮೂಡಿಬರುತ್ತಿವೆ. ಶತಕ ಬರದಿದ್ದರೆ ಅರ್ಧಶತಕಗಳು ಸಿಡಿಯುತ್ತಿವೆ.

1 / 5
ಅಂದರೆ ಕಳೆದ 24 ಇನಿಂಗ್ಸ್​ಗಳಲ್ಲಿ ಸರ್ಫರಾಜ್ ಖಾನ್ ಬರೋಬ್ಬರಿ 9 ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಮೂಲಕ ಬರೋಬ್ಬರಿ 2,200 ರನ್​ ಕಲೆಹಾಕಿದ್ದಾರೆ.

2 / 5
ಅಷ್ಟೇ ಯಾಕೆ, ಕ್ರಿಕೆಟ್ ಪಿತಾಮಹಾ ಎಂದು ಕರೆಯಲ್ಪಡುವ ಡಾನ್ ಬ್ರಾಡ್ಮನ್ ಅವರ ನಂತರದ ಸ್ಥಾನವನ್ನೂ ಕೂಡ ಸರ್ಫರಾಜ್ ಅಲಂಕರಿಸಿದ್ದಾರೆ. ಅಂದರೆ ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ ಕನಿಷ್ಠ 2 ಸಾವಿರ ರನ್ ಬಾರಿಸಿ ಅತ್ಯುತ್ತಮ ಬ್ಯಾಟಿಂಗ್ ಅವರೇಜ್ ಹೊಂದಿರುವ ಆಟಗಾರರಲ್ಲಿ ಆಸ್ಟ್ರೇಲಿಯಾದ ದಂತಕಥೆ ಬ್ರಾಡ್ಮನ್ 95.14 ಸರಾಸರಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 81.49* ಸರಾಸರಿಯೊಂದಿಗೆ ಸರ್ಫರಾಜ್ ಖಾನ್ 2ನೇ ಸ್ಥಾನಕ್ಕೇರಿದ್ದಾರೆ.

3 / 5
ಇಲ್ಲಿ ಮತ್ತೊಂದು ವಿಶೇಷ ಎಂದರೆ ನಿರ್ಣಾಯಕ ಪಂದ್ಯಗಳಲ್ಲಿ ಸರ್ಫರಾಜ್ ಖಾನ್ ಅವರ ಬ್ಯಾಟಿಂಗ್. ಅಂದರೆ ಈ ಬಾರಿಯ ರಣಜಿ ಫೈನಲ್​ ಪಂದ್ಯದಲ್ಲಿ 134 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಇನ್ನು ದುಲೀಪ್ ಟ್ರೋಫಿ ಫೈನಲ್​ನಲ್ಲೂ 127 ರನ್​ ಬಾರಿಸಿ ವೆಸ್ಟ್ ಝೋನ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

4 / 5
ಇದೀಗ ಇರಾನಿ ಕಪ್​ನಲ್ಲೂ 138 ರನ್​ ಬಾರಿಸಿ ಅಬ್ಬರಿಸಿದ್ದಾರೆ. ಅಂದರೆ ಯಾವುದೇ ತಂಡದ ನಿರ್ಣಾಯಕ ಪಂದ್ಯದಲ್ಲಿ ಸರ್ಫರಾಜ್ ಖಾನ್ ಮಹತ್ವದ ಪಾತ್ರವಹಿಸುತ್ತಿರುವುದು ಸ್ಪಷ್ಟ. ಹೀಗಾಗಿಯೇ ಭರ್ಜರಿ ಫಾರ್ಮ್​ನಲ್ಲಿರುವ ಯುವ ಬ್ಯಾಟ್ಸ್​ಮನ್​ಗೆ ಟೆಸ್ಟ್​ನಲ್ಲಿ ಅವಕಾಶ ನೀಡಬೇಕೆಂಬ ಕೂಗುಗಳು ಕೇಳಿ ಬರುತ್ತಿದೆ. ಅದರಂತೆ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಲಿದ್ದಾರಾ ಕಾದು ನೋಡಬೇಕಿದೆ.

5 / 5

Follow us on

Most Read Stories

Click on your DTH Provider to Add TV9 Kannada