T20 World Cup 2026: ಎರಡಂಕಿ ಮೊತ್ತ ದಾಖಲಿಸಿ ಇತಿಹಾಸ ಸೃಷ್ಟಿಸುವ ಹೊಸ್ತಿಲಿನಲ್ಲಿ ಸೂರ್ಯ

Updated on: Mar 08, 2026 | 4:43 PM

T20 World Cup Final: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದು ಭಾರತಕ್ಕೆ ಮೂರನೇ ಪ್ರಶಸ್ತಿ ಗೆಲ್ಲುವ ಐತಿಹಾಸಿಕ ಅವಕಾಶ. ಆದರೆ, ಟಿ20 ವಿಶ್ವಕಪ್ ಫೈನಲ್‌ಗಳಲ್ಲಿ ಭಾರತದ ನಾಯಕರು ಬ್ಯಾಟಿಂಗ್‌ನಲ್ಲಿ ಎರಡಂಕಿ ಮೊತ್ತ ತಲುಪಲು ವಿಫಲರಾದ ಹೀನಾಯ ದಾಖಲೆಯಿದೆ. ಸೂರ್ಯಕುಮಾರ್ ಈ ಸವಾಲನ್ನು ಎದುರಿಸಿ, ತಂಡಕ್ಕೆ ಗೆಲುವು ತರುವುದರ ಜೊತೆಗೆ ವೈಯಕ್ತಿಕವಾಗಿ ಆ ದಾಖಲೆಯನ್ನು ಮುರಿಯುವ ಭರವಸೆ ಮೂಡಿಸಿದ್ದಾರೆ.

1 / 6
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ, ಟೀಂ ಇಂಡಿಯಾ ಇತಿಹಾಸ ನಿರ್ಮಿಸಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ಟೀಂ ಇಂಡಿಯಾ ತನ್ನ ಮೂರನೇ ಟಿ20 ವಿಶ್ವಕಪ್ ಗೆಲ್ಲಲು ಪ್ರಯತ್ನಿಸಲಿದೆ. ಇದರ ಜೊತೆಗೆ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಹೀನಾಯ ದಾಖಲೆಯ ಸರಣಿಯನ್ನು ಮುರಿಯುವ ಇರಾದೆಯಲ್ಲಿದ್ದಾರೆ.

2 / 6
ವಾಸ್ತವವಾಗಿ ಭಾರತ ಮೂರು ಬಾರಿ ಟಿ20 ವಿಶ್ವಕಪ್ ಫೈನಲ್‌ ಆಡಿದೆ. ಆದರೆ ಈ ಮೂರು ಫೈನಲ್ ಪಂದ್ಯಗಳಲ್ಲೂ  ಭಾರತ ತಂಡದ ನಾಯಕನ ಬ್ಯಾಟಿಂಗ್ ನಿರಾಶಾದಾಯಕವಾಗಿದೆ. ಈ ಮೂರು ಫೈನಲ್‌ಗಳಲ್ಲಿ ಟೀಂ ಇಂಡಿಯಾ ನಾಯಕನಿಗೆ ಎರಡಂಕಿ ಮೊತ್ತ ತಲುಪಲು ಸಾಧ್ಯವಾಗಿಲ್ಲ.

3 / 6
ಕಳೆದ ಮೂರು ಫೈನಲ್‌ಗಳಲ್ಲಿ, ಟೀಂ ಇಂಡಿಯಾದ ನಾಯಕರು ಒಟ್ಟು 19 ರನ್‌ಗಳನ್ನು ಗಳಿಸಿದ್ದಾರೆ. ಪ್ರಶಸ್ತಿ ಸುತ್ತಿನ ಪಂದ್ಯಗಳಲ್ಲಿ ತಂಡದ ನಾಯಕರು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದಾಗ್ಯೂ, ತಂಡವು ಎರಡು ಬಾರಿ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ. ಈಗ, ಎಲ್ಲರ ಕಣ್ಣುಗಳು ಸೂರ್ಯಕುಮಾರ್ ಯಾದವ್ ಮೇಲಿದ್ದು, ಪಂದ್ಯದ ಫಲಿತಾಂಶ ಏನೇ ಇರಲಿ, ಸೂರ್ಯನ ಬ್ಯಾಟಿಂಗ್ ಈ ಅಂಕಿಅಂಶವನ್ನು ಬದಲಾಯಿಸುವ ದೊಡ್ಡ ಭರವಸೆಯಾಗಿದೆ.

4 / 6
2007 ರ ಟಿ20 ವಿಶ್ವಕಪ್ ಫೈನಲ್ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿತ್ತು. ಆ ಪಂದ್ಯದಲ್ಲಿ, ಎಂಎಸ್ ಧೋನಿ ಪಾಕಿಸ್ತಾನ ವಿರುದ್ಧ ಕೇವಲ 6 ರನ್ ಗಳಿಸಿದ್ದರು. ಆದಾಗ್ಯೂ, ಭಾರತ ಪಂದ್ಯವನ್ನು ಗೆದ್ದು ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಂಡಿತು. ನಂತರ, 2014 ರ ಟಿ20 ವಿಶ್ವಕಪ್‌ನಲ್ಲಿ, ಎಂಎಸ್ ಧೋನಿ ಶ್ರೀಲಂಕಾ ವಿರುದ್ಧ 7 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಆದರೆ ಆ ಪಂದ್ಯವನ್ನು ಭಾರತ ಸೋತಿತು.

5 / 6
ಇದಾದ ಬಳಿಕ ಕೊನೆಯ ಆವೃತ್ತಿಯಲ್ಲಿ ಅಂದರೆ 2024 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೂ ಎರಡಂಕಿ ಮೊತ್ತ ತಲುಪಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಕೇವಲ 9 ರನ್ ಗಳಿಸಿ ಔಟಾದರು. ರೋಹಿತ್ ಅವರ ಕಳಪೆ ಪ್ರದರ್ಶನದ ಹೊರತಾಗಿಯೂ ಭಾರತ ಪ್ರಶಸ್ತಿಯನ್ನು ಗೆದ್ದುಕೊಂಡಿತು.

6 / 6
ಸೂರ್ಯಕುಮಾರ್ ಯಾದವ್ ಇಲ್ಲಿಯವರೆಗೆ ಈ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆಡಿರುವ ಎಂಟು ಪಂದ್ಯಗಳಲ್ಲಿ 34.57 ಸರಾಸರಿಯಲ್ಲಿ 242 ರನ್ ಗಳಿಸಿದ್ದಾರೆ. ಇದರೊಂದಿಗೆ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಸೂರ್ಯ ಎರಡಂಕಿ ಮೊತ್ತ ದಾಖಲಿಸಿ, ನಾಯಕರ ರನ್ ಬರಕ್ಕೆ ಬ್ರೇಕ್ ಹಾಕುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Follow Us