T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Oct 16, 2022 | 3:56 PM

T20 World Cup 2022: ಭಾರತೀಯ ಮೂಲದ ಕೆಲ ಆಟಗಾರರು ವಿದೇಶಿ ತಂಡಗಳಲ್ಲಿದ್ದು, ಈ ಮೂಲಕ ಟಿ20 ವಿಶ್ವಕಪ್ ಗೆಲ್ಲಲು ಪೈಪೋಟಿಗೆ ಇಳಿದಿದ್ದಾರೆ. ಹಾಗಿದ್ರೆ ವಿದೇಶಿ ತಂಡಗಳಲ್ಲಿರುವ ಭಾರತೀಯ ಮೂಲದ ಆಟಗಾರರು ಯಾರೆಲ್ಲಾ ನೋಡೋಣ...

1 / 9
ಚುಟುಕು ಕ್ರಿಕೆಟ್​ನ ಮಹಾಸಮರ ಟಿ20 ವಿಶ್ವಕಪ್​ ಶುರುವಾಗಿದೆ. ಈ ಬಾರಿ ಒಟ್ಟು 16 ತಂಡಗಳು ಕಣಕ್ಕಿಳಿಯುತ್ತಿದ್ದು, 240 ಆಟಗಾರರು ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

2 / 9
ವಿಶೇಷ ಎಂದರೆ ಈ 240 ಆಟಗಾರರಲ್ಲಿ ಟೀಮ್ ಇಂಡಿಯಾದ 15 ಮಂದಿಯನ್ನು ಹೊರತುಪಡಿಸಿ ಕೆಲ ಭಾರತೀಯರು ಕೂಡ ಕಣದಲ್ಲಿದ್ದಾರೆ. ಅಂದರೆ ಭಾರತೀಯ ಮೂಲದ ಕೆಲ ಆಟಗಾರರು ವಿದೇಶಿ ತಂಡಗಳಲ್ಲಿದ್ದು, ಈ ಮೂಲಕ ಟಿ20 ವಿಶ್ವಕಪ್ ಗೆಲ್ಲಲು ಪೈಪೋಟಿಗೆ ಇಳಿದಿದ್ದಾರೆ. ಹಾಗಿದ್ರೆ ವಿದೇಶಿ ತಂಡಗಳಲ್ಲಿರುವ ಭಾರತೀಯ ಮೂಲದ ಆಟಗಾರರು ಯಾರೆಲ್ಲಾ ನೋಡೋಣ...

3 / 9
1- ಚುಂಡಂಗಪೊಯಿಲ್ ರಿಜ್ವಾನ್ (ಯುಎಇ): ಕೇರಳ ಮೂಲದ ರಿಜ್ವಾನ್ ಇದೀಗ ಯುಎಇ ಪರ ಆಡುತ್ತಿದ್ದಾರೆ. ವಿಶೇಷ ಎಂದರೆ ಈ ಹಿಂದೆ ರಿಜ್ವಾನ್ IPL 2011ರ ವೇಳೆ ಕೊಚ್ಚಿ ಟಸ್ಕರ್ಸ್ ಕೇರಳ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು.

4 / 9
2- ಇಶ್ ಸೋಧಿ (ನ್ಯೂಜಿಲೆಂಡ್): ಪಂಜಾಬ್ ಮೂಲದ ಇಶ್ ಸೋಧಿ  ನ್ಯೂಜಿಲೆಂಡ್ ಪರ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಇದೀಗ ಕಿವೀಸ್ ತಂಡದ ಪ್ರಮುಖ ಸ್ಪಿನ್ನರ್​ ಆಗಿ ಈ ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

5 / 9
3- ಸಿಮಿ ಸಿಂಗ್ (ಐರ್ಲೆಂಡ್): ಪಂಜಾಬ್ ಮೂಲದವರೇ ಆಗಿರುವ ಸಿಮಿ ಸಿಂಗ್ ಕಳೆದ ಕೆಲ ವರ್ಷಗಳಿಂದ ಐರ್ಲೆಂಡ್ ತಂಡದ ಖಾಯಂ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ. ಇದೀಗ ಈ ವಿಶ್ವಕಪ್​ನಲ್ಲೂ ಐರಿಷ್ ತಂಡದ ಭಾಗವಾಗಿದ್ದಾರೆ.

6 / 9
4- ಚಿರಾಗ್ ಸೂರಿ (ಯುಎಇ): ಐಪಿಎಲ್ ಒಪ್ಪಂದ ಪಡೆದ ಏಕೈಕ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟಿಗ ಎಂದರೆ ಚಿರಾಗ್ ಸೂರಿ. 2017 ರ ಐಪಿಎಲ್​ನಲ್ಲಿ ಗುಜರಾತ್ ಲಯನ್ಸ್ ಅವರನ್ನು ಖರೀದಿಸಿತು. ಇದೀಗ ಚಿರಾಗ್ ಯುಎಇ ತಂಡದ ಪ್ರಮುಖ ಅಂಗವಾಗಿದ್ದಾರೆ.

7 / 9
5- ಕಾರ್ತಿಕ್ ಮೇಯಪ್ಪನ್ (ಯುಎಇ): ಚೆನ್ನೈ ಮೂಲದ ಕಾರ್ತಿಕ್ ಮೇಯಪ್ಪನ್ ಇದೀಗ ಯುಎಇ ರಾಷ್ಟ್ರೀಯ ತಂಡಕ್ಕಾಗಿ ಆಡುತ್ತಿದ್ದಾರೆ.

8 / 9
6- ವಿಕ್ರಮಜಿತ್ ಸಿಂಗ್ (ನೆದರ್ಲ್ಯಾಂಡ್ಸ್): ಪಂಜಾಬ್‌ನ ಚೀಮಾ ಮೂಲದ ವಿಕ್ರಮಜಿತ್ ಸಿಂಗ್ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

9 / 9
7- ವೃತ್ಯ ಅರವಿಂದ್ (ಯುಎಇ): ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಉಪನಾಯಕರಾಗಿರುವ ವೃತ್ಯ ಅರವಿಂದ ಚೆನ್ನೈ ಮೂಲದವರು. ಇದೀಗ ಯುಇಎ ತಂಡ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

Published On - 3:54 pm, Sun, 16 October 22