T20 World Cup 2022: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಭುವನೇಶ್ವರ್ ಕುಮಾರ್

Edited By:

Updated on: Oct 27, 2022 | 5:31 PM

Bhuvneshwar Kumar: ಒಂದು ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಮೇಡನ್ ಓವರ್​ ಮಾಡಿದ ದಾಖಲೆ ಕೂಡ ಭುವನೇಶ್ವರ್ ಕುಮಾರ್ ಪಾಲಾಗಿದೆ.

1 / 9

T20 World Cup 2022: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಹೊಸ ಇತಿಹಾಸ ಬರೆದಿದ್ದಾರೆ. ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನೆದರ್​ಲ್ಯಾಂಡ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಭುವಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು.

2 / 9

ವಿಶೇಷ ಎಂದರೆ ಮೊದಲ ಓವರ್ ಎಸೆದಿದ್ದ ಭುವನೇಶ್ವರ್ ಯಾವುದೇ ರನ್​ ನೀಡಿರಲಿಲ್ಲ. ಈ ಮೂಲಕ ಮೊದಲ ಓವರ್​ನ್ನು ಮೇಡನ್ ಮಾಡಿದ್ದರು. ಇದಾದ ಬಳಿಕ 3ನೇ ಓವರ್​ನಲ್ಲಿ ಮರಳಿದ ಭುವಿ ಮತ್ತೊಮ್ಮೆ ವಿಕ್ರಮಜಿತ್ ಸಿಂಗ್ ವಿಕೆಟ್ ಪಡೆದು ಮೇಡನ್ ಓವರ್ ಮಾಡಿದರು.

3 / 9

ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಮೇಡನ್ ಓವರ್ ಎಸೆದ ಟೀಮ್ ಇಂಡಿಯಾದ ಮೊದಲ ಬೌಲರ್ ಎಂಬ ದಾಖಲೆ ಬರೆದರು.

4 / 9

ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ನಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಇಂಗ್ಲೆಂಡ್​ನ ಗ್ರೇಮ್ ಸ್ವಾನ್ (2012), ಶ್ರೀಲಂಕಾದ ನುವಾನ್ ಕುಲಶೇಖರ (2014) ಮತ್ತು ರಂಗನಾ ಹೆರಾತ್ (2014) ಈ ಸಾಧನೆ ಮಾಡಿದ್ದರು. ಇದೀಗ ಭುವಿ ಕೂಡ ಈ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.

5 / 9

ಇನ್ನು ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಮೇಡನ್ ಓವರ್ ಎಸೆದ ಜಸ್​ಪ್ರೀತ್ ಬುಮ್ರಾ ದಾಖಲೆಯನ್ನು ಭುವಿ ಸರಿಗಟ್ಟಿದರು. ಬುಮ್ರಾ-ಭುವಿ ಟಿ20 ಕ್ರಿಕೆಟ್​ನಲ್ಲಿ 9 ಮೇಡನ್ ಓವರ್ ಎಸೆಯುವ ಮೂಲಕ ಈ ವಿಶೇಷ ದಾಖಲೆ ಬರೆದಿದ್ದಾರೆ.

6 / 9

ಹಾಗೆಯೇ ಒಂದು ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಮೇಡನ್ ಓವರ್​ ಮಾಡಿದ ದಾಖಲೆ ಕೂಡ ಭುವಿ ಪಾಲಾಗಿದೆ. ಈ ಹಿಂದೆ ಈ ದಾಖಲೆ ಜಸ್​ಪ್ರೀತ್ ಬುಮ್ರಾ ಹೆಸರಿನಲ್ಲಿತ್ತು. ಬುಮ್ರಾ 2016 ರಲ್ಲಿ 4 ಮೇಡನ್ ಓವರ್ ಮಾಡಿದ್ದರು.

7 / 9

ಇದೀಗ 2022 ರಲ್ಲಿ ಭುವನೇಶ್ವರ್ ಕುಮಾರ್ 5 ಮೇಡನ್ ಓವರ್ ಎಸೆಯುವ ಮೂಲಕ ಒಂದು ವರ್ಷದಲ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಮೇಡನ್ ಓವರ್ ಮಾಡಿದ ಬೌಲರ್ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

8 / 9

ಇನ್ನು ಒಂದು ವರ್ಷದಲ್ಲಿ ಟೀಮ್ ಇಂಡಿಯಾ ಪರ ಟಿ20 ಯಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಕೂಡ ಭುವನೇಶ್ವರ್ ಕುಮಾರ್ ಬರೆದಿದ್ದಾರೆ. ಈ ಹಿಂದೆ ಜಸ್​ಪ್ರೀತ್ ಬುಮ್ರಾ 2016 ರಲ್ಲಿ 28 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಇದೀಗ 33 ವಿಕೆಟ್ ಕಬಳಿಸುವ ಮೂಲಕ ಭುವಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

9 / 9

ಒಟ್ಟಿನಲ್ಲಿ ನೆದರ್​ಲ್ಯಾಂಡ್ಸ್ ವಿರುದ್ಧ 3 ಓವರ್​ಗಳಲ್ಲಿ 2 ಮೇಡನ್ ಓವರ್ ಹಾಗೂ 9 ರನ್​ಗೆ 2 ವಿಕೆಟ್ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ.

Published On - 5:31 pm, Thu, 27 October 22

Loading...
Unable to load recommendations.
Follow Us