ವಿಶೇಷ ಎಂದರೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 110 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ ಇದುವರೆಗೆ 4038 ರನ್ ಕಲೆಹಾಕಿದ್ದಾರೆ. ಇದೀಗ 4026 ರನ್ ಬಾರಿಸಿರುವ ರೋಹಿತ್ ಶರ್ಮಾ ಮುಂದಿನ ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಹಾಗಾಗಿ ಭಾರತ ತಂಡದ ಮುಂದಿನ ಪಂದ್ಯಗಳಲ್ಲಿ ರನ್ ಸರದಾರನ ಪಟ್ಟಕ್ಕಾಗಿ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ನಡುವೆ ಪೈಪೋಟಿ ಕಂಡು ಬರಲಿದೆ.