T20 World Cup 2024: ಬಹುನಿರೀಕ್ಷಿತ ಟಿ20 ವಿಶ್ವಕಪ್ಗೆ ಅಧಿಕೃತ ಚಾಲನೆ ದೊರೆತಿದೆ. ಡಲ್ಲಾಸ್ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಯುಎಸ್ಎ ಮತ್ತು ಕೆನಡಾ ತಂಡಗಳು ಕಣಕ್ಕಿಳಿದಿದ್ದವು. ವಿಶೇಷ ಎಂದರೆ ಈ ಕೆನಡಾ ತಂಡದಲ್ಲಿ ಕನ್ನಡಿಗರೊಬ್ಬರು ಕೂಡ ಕಾಣಿಸಿಕೊಂಡಿದ್ದಾರೆ. ಅದು ಸಹ ಕರ್ನಾಟಕದ ಪರ ಕ್ರಿಕೆಟ್ ಆಡಿದ ಆಟಗಾರ ಎಂಬುದು ಮತ್ತೊಂದು ವಿಶೇಷ.
ಹೌದು, ಕೆನಡಾ ಪರ ಕಣಕ್ಕಿಳಿದಿರುವ ಶ್ರೇಯಸ್ ಮೋವಾ. ನಮ್ಮೂರ ಹುಡುಗ. ಅದರಲ್ಲೂ ನಮ್ಮ ದಾವಣಗೆರೆಯ ಕ್ರಿಕೆಟಿಗ. ಈ ಹಿಂದೆ ಅಂಡರ್-16 ಮತ್ತು ಅಂಡರ್-19 ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಕೆನಡಾ ಪರ ಟಿ20 ವಿಶ್ವಕಪ್ ಆಡುತ್ತಿರುವುದು ವಿಶೇಷ.
ಅದರಂತೆ 2021 ರಲ್ಲಿ ಕೆನಡಾ ತಂಡಕ್ಕೆ ಆಯ್ಕೆಯಾದ ಶ್ರೇಯಸ್ ಮೋವಾ, ಅದೇ ವರ್ಷ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಅಲ್ಲದೆ ಈ ವರ್ಷ ಏಕದಿನ ಕ್ರಿಕೆಟ್ಗೂ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅದರಂತೆ 2021 ರಲ್ಲಿ ಕೆನಡಾ ತಂಡಕ್ಕೆ ಆಯ್ಕೆಯಾದ ಶ್ರೇಯಸ್ ಮೊವ್ವ, ಅದೇ ವರ್ಷ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಅಲ್ಲದೆ ಈ ವರ್ಷ ಏಕದಿನ ಕ್ರಿಕೆಟ್ಗೂ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅದರಲ್ಲೂ ಯುಎಸ್ಎ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಕೆನಡಾ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದಿರುವುದೇ ಶ್ರೇಯಸ್ ಮೋವಾ. ಈ ಮೂಲಕ ಕೆನಡಾ ಪರ ಚೊಚ್ಚಲ ಟಿ20 ವಿಶ್ವಕಪ್ ಆಡಿದ ಆಟಗಾರರಲ್ಲಿ ಕನ್ನಡಿಗರೊಬ್ಬರು ಕೂಡ ಕಾಣಿಸಿಕೊಂಡಿರುವುದು ಹೆಮ್ಮೆಯ ವಿಷಯ.
Published On - 7:33 am, Sun, 2 June 24