2012 ರಲ್ಲಿ ಶುರುವಾರ ವಿರಾಟ್ ಕೊಹ್ಲಿಯ ಟಿ20 ವಿಶ್ವಕಪ್ ಕನಸು, 2014 ರಲ್ಲಿ ಅಂತಿಮ ಹಂತಕ್ಕೆ ಬಂದಿತ್ತು. ಆದರೆ ಫೈನಲ್ನಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದ ಕಾರಣ ಟ್ರೋಫಿ ಎತ್ತಿ ಹಿಡಿಯುವ ಕೊಹ್ಲಿಯ ಕನಸು ಕನಸಾಗಿಯೇ ಉಳಿಯಿತು. ಇದಾದ ಬಳಿಕ 2016, 2021 ಮತ್ತು 2022 ರ ಟಿ20 ವಿಶ್ವಕಪ್ಗಳಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡರೂ, ಭಾರತ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ವಿಫಲವಾಗಿದೆ.