T20 World Cup 2024: ಸ್ಟಾರ್ ಕ್ರಿಕೆಟಿಗನಿಗೆ ವೀಸಾ ನೀಡಲು ನಿರಾಕರಿಸಿದ ಅಮೆರಿಕ..!

|

Updated on: May 30, 2024 | 9:02 PM

T20 World Cup 2024: ಜೂನ್​ 2 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗಾಗಿ ಹೆಚ್ಚಿನ ತಂಡಗಳು ಈಗಾಗಲೇ ಅಮೆರಿಕವನ್ನು ತಲುಪಿವೆ. ಕೆಲವು ತಂಡಗಳು ಅಭ್ಯಾಸ ಪಂದ್ಯಗಳನ್ನೂ ಆಡುತ್ತಿವೆ. ಈ ನಡುವೆ ಕ್ರಿಕೆಟ್ ಶಿಶು ನೇಪಾಳ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಟಗಾರ ಸಂದೀಪ್ ಲಾಮಿಚಾನೆಗೆ ವೀಸಾ ನೀಡಲು ಅಮೆರಿಕ ನಿರಾಕರಿಸಿದೆ.

1 / 7
ಜೂನ್​ 2 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗಾಗಿ ಹೆಚ್ಚಿನ ತಂಡಗಳು ಈಗಾಗಲೇ ಅಮೆರಿಕವನ್ನು ತಲುಪಿವೆ. ಕೆಲವು ತಂಡಗಳು ಅಭ್ಯಾಸ ಪಂದ್ಯಗಳನ್ನೂ ಆಡುತ್ತಿವೆ. ಈ ನಡುವೆ ಕ್ರಿಕೆಟ್ ಶಿಶು ನೇಪಾಳ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಟಗಾರ ಸಂದೀಪ್ ಲಮಿಚಾನೆಗೆ ವೀಸಾ ನೀಡಲು ಅಮೆರಿಕ ನಿರಾಕರಿಸಿದೆ.

2 / 7
ಯುಎಸ್ ರಾಯಭಾರ ಕಚೇರಿಯು ಲಾಮಿಚಾನೆಗೆ ವೀಸಾ ನೀಡಲು ನಿರಾಕರಿಸಿದೆ. ಹೀಗಾಗಿ ಅವರು ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶಗಳು ತುಂಬಾ ಕಡಿಮೆಯಾಗಿದೆ. ವಾಸ್ತವವಾಗಿ ಸಂದೀಪ್ ಅವರಿಗೆ ವೀಸಾ ನಿರಾಕರಣೆ ಮಾಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಸಂದೀಪ್‌ಗೆ ವೀಸಾ ನಿರಾಕರಿಸಲಾಗಿತ್ತು.

3 / 7
ಸಂದೀಪ್ ನೇಪಾಳ ತಂಡದ ಸ್ಟಾರ್ ಆಟಗಾರನಲ್ಲದೆ ವಿವಾದಾತ್ಮಕ ಆಟಗಾರನೂ ಹೌದು. ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗಿತ್ತು. ಈ ಆರೋಪದಡಿಯಲ್ಲಿ ಅವರಿಗೆ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ ಈ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಿದ ಬಳಿಕ ಅವರನ್ನು ದೋಷಮುಕ್ತಗೊಳಿಸಿ ಜೈಲು ಶಿಕ್ಷೆಯನ್ನು ರದ್ದುಗೊಳಿಸಲಾಗಿತ್ತು.

4 / 7
ಕಳೆದ ತಿಂಗಳಷ್ಟೇ ಸಂದೀಪ್​ ಆರೋಪ ಮುಕ್ತರಾಗಿದ್ದರು. ಹೀಗಾಗಿ ನೇಪಾಳ ತಂಡದಲ್ಲಿ ಲಾಮಿಚಾನೆಯನ್ನು ಸೇರಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಅಮೆರಿಕ ಸರ್ಕಾರ ಸಂದೀಪ್​ಗೆ ವೀಸಾ ನೀಡಲು ಎರಡನೇ ಬಾರಿಗೆ ನಿರಾಕರಿಸಿದೆ.

5 / 7
ಈ ಬಗ್ಗೆ ನೋವು ತೋಡಿಕೊಂಡಿರುವ ಸಂದೀಪ್, ತನ್ನ ಯುಎಸ್ ವೀಸಾವನ್ನು ತಿರಸ್ಕರಿಸಲಾಗಿದೆ. ಈ ನಿರ್ಧಾರ ದುರದೃಷ್ಟಕರ ಎಂದಿದ್ದಾರೆ. ನೇಪಾಳ ಕ್ರಿಕೆಟ್ ಸಂಸ್ಥೆ ಕೂಡ ಹಲವು ಏಜೆನ್ಸಿಗಳ ಮೂಲಕ ಯುಎಸ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿತ್ತು. ಆದಾಗ್ಯೂ, ವೀಸಾವನ್ನು ನಿರಾಕರಿಸಲಾಗಿದೆ.

6 / 7
 ನೇಪಾಳ ತಂಡವನ್ನು ಡಿ ಗುಂಪಿನಲ್ಲಿ ಇರಿಸಲಾಗಿದೆ. ಇದರಲ್ಲಿ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೇಪಾಳ ಮತ್ತು ನೆದರ್ಲೆಂಡ್ಸ್ ತಂಡಗಳು ಸೇರಿವೆ. ನೇಪಾಳ ತಂಡ ತನ್ನ ಮೊದಲ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಜೂನ್ 4 ರಂದು ಆಡಲಿದೆ.

7 / 7
ಟಿ20 ವಿಶ್ವಕಪ್​ಗೆ ನೇಪಾಳದ ತಂಡ: ರೋಹಿತ್ ಪೌಡೆಲ್ (ನಾಯಕ), ದೀಪೇಂದ್ರ ಸಿಂಗ್ ಐರಿ, ಆಸಿಫ್ ಶೇಖ್, ಅನಿಲ್ ಕುಮಾರ್ ಸಾಹ್, ಕುಶಾಲ್ ಮಲ್ಲಾ, ಲಲಿತ್ ರಾಜಬಂಶಿ, ಕರಣ್ ಕೆಸಿ, ಗುಲ್ಶನ್ ಝಾ, ಸೋಂಪಾಲ್ ಕಾಮಿ, ಪ್ರತಿಸ್ ಜಿಸಿ, ಸಂದೀಪ್ ಜೋರಾ, ಅವಿನಾಶ್ ಬೋಹ್ರಾ, ಸಾಗರ್ ಧಕಲ್, ಕಮಲ್ ಸಿಂಗ್ ಐರಿ.