T20 World Cup 2024: 15 ವರ್ಷಗಳಿಂದ ಇದೇ ಕಥೆ; ಟಿ20 ವಿಶ್ವಕಪ್​ನಲ್ಲಿ ಜಡೇಜಾ ಫೇಲ್..!

Ravindra Jadeja: ಜಡೇಜಾ ಅವರ ಬ್ಯಾಟಿಂಗ್ ವೈಫಲ್ಯದ ಕಥೆ ಹೊಸದಲ್ಲ. ಬದಲಿಗೆ ಅವರು ಯಾವಾಗಲೂ ಈ ವಿಚಾರದಲ್ಲಿ ವಿಫಲರಾಗಿದ್ದಾರೆ. ಜಡೇಜಾ 2009 ರಿಂದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ ಮತ್ತು 2022 ರ ವಿಶ್ವಕಪ್ ಹೊರತುಪಡಿಸಿ ಪ್ರತಿ ಬಾರಿ ಆಡಿದ್ದಾರೆ. ಈ ಎಲ್ಲಾ ಆವೃತ್ತಿಗಳಲ್ಲಿ ಜಡೇಜಾ ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದಾರೆ.

ಪೃಥ್ವಿಶಂಕರ
|

Updated on: Jun 10, 2024 | 5:51 PM

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿಯಲ್ಲಿ ಕೇವಲ 119 ರನ್ ಗಳಿಸಿದ ಹೊರತಾಗಿಯೂ ಟೀಂ ಇಂಡಿಯಾ ಪಾಕಿಸ್ತಾನವನ್ನು 6 ರನ್‌ಗಳಿಂದ ಸೋಲಿಸಿತು.

1 / 9
ತಂಡದ ಈ ಗೆಲುವಿನ ಶ್ರೇಯ ವೇಗಿಗಳಿಗೆ ಸಲ್ಲಬೇಕು. ಇನ್ನು ಬ್ಯಾಟಿಂಗ್ ವಿಚಾರದಲ್ಲಿ ರಿಷಬ್ ಪಂತ್ ಹೊರತುಪಡಿಸಿ ಟೀಂ ಇಂಡಿಯಾದ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ಸ್ಟಾರ್ ಬ್ಯಾಟರ್​​ಗಳು ಸಪ್ಪೆ ಪ್ರದರ್ಶನ ನೀಡಿದರು.

2 / 9
ಇವರೆಲ್ಲರ ನಡುವೆ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಸತತ ವೈಫಲ್ಯ ತಂಡವನ್ನು ಚಿಂತೆಗೀಡುಮಾಡಿದೆ ಇದು ಇಂದು ನಿನ್ನೆಯ ಕಥೆಯಲ್ಲಿ ಬರೋಬ್ಬರಿ ಕಳೆದ 15 ವರ್ಷಗಳಿಂದಲ್ಲೂ ಟಿ20 ವಿಶ್ವಕಪ್​ನಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್​ನಲ್ಲಿ ತಂಡಕ್ಕೆ ನೀಡಿದ ಕೊಡುಗೆ ಅಷ್ಟಕಷ್ಟೆ.

3 / 9
ವಾಸ್ತವವಾಗಿ ನ್ಯೂಯಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಪಿಚ್‌ ಬ್ಯಾಟಿಂಗ್‌ಗೆ ಅನುಕೂಲವಾಗುವುದಿಲ್ಲ ಎಂಬ ಆತಂಕ ಮೊದಲಿನಿಂದಲೂ ಇತ್ತು. ಅದಕ್ಕಿಂತ ಹೆಚ್ಚಾಗಿ, ಮಳೆಯಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಇನ್ನಷ್ಟು ಕಷ್ಟಕರವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾಗೆ ತನ್ನ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳ ಕೊಡುಗೆಯ ಅಗತ್ಯವಿತ್ತು.

4 / 9
ಇದರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಅವರಂತಹ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದರು. ಅಂತಹ ಪರಿಸ್ಥಿತಿಯಲ್ಲಿ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಕೊಡುಗೆ ಅತ್ಯಗತ್ಯವಾಗಿತ್ತು. ಆದರೆ ಜಡೇಜಾಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

5 / 9
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 15 ಓವರ್​ಗಳಲ್ಲಿ ಕೇವಲ 96 ರನ್​ಗಳಿಗೆ ಆರ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಜಡೇಜಾ ಕ್ರೀಸ್​ಗೆ ಕಾಲಿಟ್ಟಿದ್ದರು. ಭಾರತದ ಇನ್ನಿಂಗ್ಸ್‌ನಲ್ಲಿ ಇನ್ನೂ 35 ಎಸೆತಗಳು ಬಾಕಿ ಇದ್ದಿದ್ದರಿಂದ ಜಡೇಜಾಗೆ ಉತ್ತಮ ಇನ್ನಿಂಗ್ಸ್ ಕಟ್ಟುವ ಅವಕಾಶವಿತ್ತು. ಆದರೆ ಜಡೇಜಾ ಮೊದಲ ಎಸೆತದಲ್ಲೇ ಖಾತೆ ತೆರೆಯದೆ ಔಟಾದರು. ಈ ಮೂಲಕ ಮತ್ತೊಮ್ಮೆ ಜಡೇಜಾ ಟಿ20 ವಿಶ್ವಕಪ್‌ನಲ್ಲಿ ಅಗತ್ಯದ ಸಮಯದಲ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದರು.

6 / 9
ಜಡೇಜಾ ಅವರ ಬ್ಯಾಟಿಂಗ್ ವೈಫಲ್ಯದ ಕಥೆ ಹೊಸದಲ್ಲ. ಬದಲಿಗೆ ಅವರು ಯಾವಾಗಲೂ ಈ ವಿಚಾರದಲ್ಲಿ ವಿಫಲರಾಗಿದ್ದಾರೆ. ಜಡೇಜಾ 2009 ರಿಂದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ ಮತ್ತು 2022 ರ ವಿಶ್ವಕಪ್ ಹೊರತುಪಡಿಸಿ ಪ್ರತಿ ಬಾರಿ ಆಡಿದ್ದಾರೆ.

7 / 9
ಈ ಎಲ್ಲಾ ಆವೃತ್ತಿಗಳಲ್ಲಿ ಜಡೇಜಾಗೆ ಯಾವಾಗಲೂ ಬ್ಯಾಟಿಂಗ್ ಮಾಡುವ ಅವಕಾಶ ಸಿಗುತ್ತಿರಲಿಲ್ಲ. ಆದರೆ ಅವಕಾಶ ಸಿಕ್ಕಾಗಲೂ ಜಡೇಜಾಗೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ 10 ಇನ್ನಿಂಗ್ಸ್‌ಗಳನ್ನು ಆಡಿರುವ ಜಡೇಜಾ 99 ಎಸೆತಗಳನ್ನು ಆಡಿದ್ದರೂ 95 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದರಲ್ಲಿ ಕೇವಲ 6 ಬೌಂಡರಿ ಮತ್ತು 1 ಸಿಕ್ಸರ್ ಮಾತ್ರ ಸೇರಿವೆ.

8 / 9
ಬ್ಯಾಟಿಂಗ್​ನಲ್ಲಿ ಜಡೇಜಾ ಸಪ್ಪೆ ಪ್ರದರ್ಶನ ನೀಡಿದ್ದರೂ, ಬೌಲಿಂಗ್​ನಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಅವರು 21 ವಿಕೆಟ್ ಪಡೆದಿದ್ದಾರೆ ಆದರೆ ಬ್ಯಾಟಿಂಗ್‌ನಲ್ಲಿಯೂ ಅವರಿಂದ ದೊಡ್ಡ ನಿರೀಕ್ಷೆಗಳಿವೆ. ಆದರೆ ಇದುವರೆಗೂ ಜಡೇಜಾ ಬ್ಯಾಟಿಂಗ್ ಮೂಲಕ ಯಾವುದೇ ಗಮನಾರ್ಹ ಪ್ರದರ್ಶನ ನೀಡಿಲ್ಲ.

9 / 9
Follow us
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್

ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು

ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?

ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ

ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ

‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು

ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?

ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​

ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು

Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ