Melbourne Weather: ಪಾಕ್-ಇಂಗ್ಲೆಂಡ್ ಫೈನಲ್ ಫೈಟ್ಗೆ ಮಳೆ ಅಡ್ಡಿ?: ಮೆಲ್ಬೋರ್ನ್ನಲ್ಲಿ ಹವಾಮಾನ ಹೇಗಿದೆ?
TV9 Web | Updated By: Vinay Bhat
Updated on:
Nov 13, 2022 | 9:16 AM
Pakistan vs England, T20 World Cup Final: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (Pakistan vs England) ನಡುವೆ ಫೈನಲ್ ಪಂದ್ಯ ಆಯೋಜಿಸಲಾಗಿದೆ.
1 / 7
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (Pakistan vs England) ನಡುವೆ ಫೈನಲ್ ಪಂದ್ಯ ಆಯೋಜಿಸಲಾಗಿದೆ.
2 / 7
ಆದರೆ, ಈ ರೋಚಕ ಕದನಕ್ಕೆ ವರುಣ ಅಡ್ಡಿಪಡಿಸಲಿದ್ದಾನೆ. ಮೆಲ್ಬೋರ್ನ್ನಲ್ಲಿ ನಿನ್ನೆಯಿಂದಲೇ ಮೋಡ ಕವಿದ ವಾತಾವರಣ ಹೆಚ್ಚಿದ್ದು, ಪಂದ್ಯದ ದಿನ 95 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ 25 ಮಿಮೀ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
3 / 7
ಹೀಗಾಗಿ ಫೈನಲ್ ಪಂದ್ಯ ನಡೆಯುವುದು ಅನುಮಾನ. ಭಾನುವಾರ ಮಳೆಯಾಗಿ ಪಂದ್ಯ ನಡೆಯದಿದ್ದರೆ ಸೋಮವಾರವನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ ಆದರೆ ಆ ದಿನವೂ 5ರಿಂದ 10 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಜಂಟಿ ಚಾಂಪಿಯನ್ ಆಗುವ ನಿರೀಕ್ಷೆ ಇದೆ.
4 / 7
ಐಸಿಸಿ ನಿಯಮದ ಪ್ರಕಾರ ಟಿ20 ವಿಶ್ವಕಪ್ನ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಲಿತಾಂಶ ನೀಡಲು ಎರಡೂ ಇನ್ನಿಂಗ್ಸ್ಗಳಲ್ಲಿ ಕನಿಷ್ಠ 10 ಓವರ್ ಆಟ ನಡೆಯಬೇಕು ಎಂದಿದೆ. ಒಂದೊಮ್ಮೆ ಭಾನುವಾರ ಪಂದ್ಯವು ಆರಂಭವಾಗಿ ಮಳೆಯಿಂದ ಅರ್ಧಕ್ಕೆ ನಿಂತರೆ ಮರುದಿವಸ ಉಳಿದ ಭಾಗವನ್ನು ಮುಂದುವರಿಸಲಾಗುವುದು.
5 / 7
ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ಇದುವರೆಗೂ ಒಂದೊಂದು ಬಾರಿ ಚಾಂಪಿಯನ್‌ಗಳಾಗಿವೆ. 2009ರಲ್ಲಿ ಪಾಕಿಸ್ತಾನ ತನ್ನ ಮೊದಲನೇ ಟಿ20 ವಿಶ್ವಕಪ್ ಜಯಿಸಿತ್ತು. ಇಂಗ್ಲೆಂಡ್ 2010ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು. ಹೀಗಾಗಿ ಇದೀಗ ಎರಡನೇ ಬಾರಿ ಕಪ್ ಗೆಲ್ಲುವ ತಂಡ ಯಾವುದು ಎಂಬುದು ನೋಡಬೇಕಿದೆ.
6 / 7
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು ಬ್ಯಾಟಿಂಗ್ – ಬೌಲಿಂಗ್ನಲ್ಲಿ ಬಲಿಷ್ಠವಾಗಿದೆ. ಪಾಕ್ ಪಾಳಯದಲ್ಲಿ ನಾಯಕ ಬಾಬರ್ ಅಜಮ್ ಸರಿಯಾದ ಸಮಯಕ್ಕೆ ಫಾರ್ಮ್ಗೆ ಬಂದಿರುವುದು ಖುಷಿ ತಂದಿದೆ. ಮೊಹಮ್ಮದ್ ರಿಜ್ವಾನ್ ಕೂಡ ತಂಡಕ್ಕೆ ಆಸರೆಯಾಗುತ್ತಿದ್ದಾರೆ.
7 / 7
ಇಂಗ್ಲೆಂಡ್ ತಂಡ ಹೆಚ್ಚಾಗಿ ಬ್ಯಾಟರ್ಗಳ ಮೇಲೆ ಅವಲಂಬಿತವಾಗಿದೆ. 11ನೇ ಕ್ರಮಾಂಕದಲ್ಲಿ ಬರುವ ಆಟಗಾರ ಕೂಡ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮುಖ್ಯವಾಗಿ ಓಪನರ್ಗಳಾದ ಅಲೆಕ್ಸ್ ಹೇಲ್ಸ್ ಹಾಗೂ ಜೋಸ್ ಬಟ್ಲರ್ ಕಳೆದ ಸೆಮೀಸ್ ಪಂದ್ಯದಲ್ಲಿ ಭಾರತ ವಿರುದ್ಧ ನೀಡಿದ ಪ್ರದರ್ಶನ ಪಾಕ್ ಪಡೆಯಲ್ಲಿ ಭಯ ಹುಟ್ಟಿಸಿರುವುದು ನಿಜ.
Published On - 9:16 am, Sun, 13 November 22