Team India: 150 ವಿಕೆಟ್ ಕಬಳಿಸಲು ಯಾರು ಎಷ್ಟು ಎಸೆತ ಎಸೆದಿದ್ದರು? ಇಲ್ಲಿದೆ ಮಾಹಿತಿ

| Updated By: ಝಾಹಿರ್ ಯೂಸುಫ್

Updated on: Feb 04, 2024 | 10:24 AM

Team India Records: ಟೀಮ್ ಇಂಡಿಯಾ ಪರ ಆಡಿದ ಐವರು ಬೌಲರ್​ಗಳು 10 ಸಾವಿರಕ್ಕೂ ಕಡಿಮೆ ಎಸೆತಗಳಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಭಾರತ ತಂಡದ ವೇಗಿ ಜಸ್​ಪ್ರೀತ್ ಬುಮ್ರಾ. ಉಳಿದ ನಾಲ್ವರು ಬೌಲರ್​ಗಳ ಪಟ್ಟಿ ಈ ಕೆಳಗಿನಂತಿದೆ...

1 / 6
India vs England 2nd Test: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ 150 ವಿಕೆಟ್​ ಕಬಳಿಸುವ ಮೂಲಕ ಎಂಬುದು ವಿಶೇಷ. ಹಾಗಿದ್ರೆ ಭಾರತದ ಪರ ಟೆಸ್ಟ್​ನಲ್ಲಿ 150 ವಿಕೆಟ್​ಗಳನ್ನು ಪಡೆಯಲು ಯಾವ ಬೌಲರ್ ಎಷ್ಟು ಎಸೆತಗಳನ್ನು ಎಸೆದಿದ್ದರು ಎಂದು ನೋಡೋಣ...

2 / 6
1- ಜಸ್​ಪ್ರೀತ್ ಬುಮ್ರಾ: ಟೀಮ್ ಇಂಡಿಯಾ ಪರ 34 ಟೆಸ್ಟ್ ಪಂದ್ಯಗಳನ್ನಾಡಿರುವ ಜಸ್​ಪ್ರೀತ್ ಬುಮ್ರಾ 6781 ಎಸೆತಗಳ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 150 ಟೆಸ್ಟ್​ ವಿಕೆಟ್ ಪಡೆದ ಭಾರತೀಯ ಬೌಲರ್​ ಎನಿಸಿಕೊಂಡಿದ್ದಾರೆ.

3 / 6
2- ಉಮೇಶ್ ಯಾದವ್: ಭಾರತದ ಪರ 57 ಟೆಸ್ಟ್ ಪಂದ್ಯಗಳನ್ನಾಡಿರುವ ಉಮೇಶ್ ಯಾದವ್ ಒಟ್ಟು 170 ವಿಕೆಟ್​ಗಳನ್ನು ಪಡೆದಿದ್ದಾರೆ. ಈ ವೇಳೆ 150 ವಿಕೆಟ್​ಗಳನ್ನು ಪೂರೈಸಲು ಅವರು 7661 ಎಸೆತಗಳನ್ನು ಎಸೆದಿದ್ದರು.

4 / 6
3- ಮೊಹಮ್ಮದ್ ಶಮಿ: ಟೀಮ್ ಇಂಡಿಯಾ ಪರ 64 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶಮಿ ಒಟ್ಟು 229 ವಿಕೆಟ್ ಕಬಳಿಸಿದ್ದಾರೆ. ಇದೇ ವೇಳೆ 150 ವಿಕೆಟ್ ಕಬಳಿಸಲು ಮೊಹಮ್ಮದ್ ಶಮಿ 7755 ಎಸೆತಗಳನ್ನು ಎಸೆದಿದ್ದರು.

5 / 6
4- ಕಪಿಲ್ ದೇವ್: ಭಾರತದ ಪರ 227 ಪಂದ್ಯಗಳನ್ನಾಡಿರುವ ಕಪಿಲ್ ದೇವ್ ಒಟ್ಟು 434 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೇ ವೇಳೆ ಮೊದಲ 150 ವಿಕೆಟ್​ಗಳನ್ನು ಪೂರೈಸಲು ಅವರು 8378 ಎಸೆತಗಳನ್ನು ತೆಗೆದುಕೊಂಡಿದ್ದರು.

6 / 6
5- ರವಿಚಂದ್ರನ್ ಅಶ್ವಿನ್: ಟೀಮ್ ಇಂಡಿಯಾ ಪರ 97 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಶ್ವಿನ್ ಇದುವರೆಗೆ 496 ವಿಕೆಟ್​ಗಳನ್ನು ಪಡೆದಿದ್ದಾರೆ. ಇದರಲ್ಲಿ ಮೊದಲ 150 ವಿಕೆಟ್​ಗಳನ್ನು ಕಬಳಿಸಲು ಅಶ್ವಿನ್ 8380 ಎಸೆತಗಳನ್ನು ಎಸೆದಿದ್ದರು.

Published On - 10:23 am, Sun, 4 February 24