Ram Mandir Inauguration: ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರೋಹಿತ್ ಶರ್ಮಾ ಗೈರು: ಕಾರಣವೇನು?
Rohit Sharma: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ವರದಿ ಆಗಿದೆ. ಹಿಟ್ಮ್ಯಾನ್ ಹೈದರಾಬಾದ್‌ಗೆ ಪ್ರಯಾಣಿಸಲಿರುವ ಕಾರಣ ಸಮಾರಂಭದಿಂದ ಹೊರಗುಳಿಯುವ ಸಾಧ್ಯತೆಯಿದೆಯಂತೆ.
1 / 6
ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಇಡೀ ಭಾರತವೇ ಕಣ್ತುಂಬಿಕೊಳ್ಳುತ್ತಿದೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶದ ಕೆಲವು ದೊಡ್ಡ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಸಮಾರಂಭಕ್ಕೆ 1000 ಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದಾರೆ.
2 / 6
ಆದಾಗ್ಯೂ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ವರದಿ ಆಗಿದೆ. ಹಿಟ್ಮ್ಯಾನ್ ಹೈದರಾಬಾದ್‌ಗೆ ಪ್ರಯಾಣಿಸಲಿರುವ ಕಾರಣ ಸಮಾರಂಭದಿಂದ ಹೊರಗುಳಿಯುವ ಸಾಧ್ಯತೆಯಿದೆಯಂತೆ.
3 / 6
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ರೋಹಿತ್ ಶರ್ಮಾ ಜನವರಿ 25 ರಂದು (ಗುರುವಾರ) ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ಗಾಗಿ ಅಭ್ಯಾಸವನ್ನು ಪ್ರಾರಂಭಿಸಲು ಜನವರಿ 22 ರಂದು ಹೈದರಾಬಾದ್‌ಗೆ ಪ್ರಯಾಣಿಸಲಿದ್ದಾರೆ.
4 / 6
ಟೀಮ್ ಇಂಡಿಯಾ ಆಟಗಾರರಿಗೆ ಜನವರಿ 21 ರಂದು (ಭಾನುವಾರ) ಐಚ್ಛಿಕ ನೆಟ್ ಸೆಷನ್ ಆಯೋಜಿಸಲಾಗಿತ್ತು. ಆದರೆ, ಇದನ್ನು ರೋಹಿತ್ ಶರ್ಮಾ ತಪ್ಪಿಸಿಕೊಂಡಿದ್ದರು. ಅವರು ತಮ್ಮ ತವರು ನಗರವಾದ ಮುಂಬೈನಲ್ಲಿರುವ BKC ಮೈದಾನದಲ್ಲಿ ವೈಯಕ್ತಿಕವಾಗಿ ಪ್ರ್ಯಾಕ್ಟೀಸ್ ಮಾಡಿದ್ದರು.
5 / 6
ರೋಹಿತ್ ಶರ್ಮಾ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸುವ ಯಾವುದೇ ಫೋಟೋವನ್ನು ಹಂಚಿಕೊಳ್ಳಲಿಲ್ಲ. ಆದರೆ, ಎರಡು ದಿನಗಳ ಮೊದಲು ರೋಹಿತ್ಗೆ ಆಹ್ವಾನವನ್ನು ನೀಡಲಾಗಿದೆ ಎನ್ನಲಾಗಿದೆ.
6 / 6
ರೋಹಿತ್ ಸೋಮವಾರ ಭಾರತ ತಂಡವನ್ನು ಸೇರಿಕೊಂಡರೆ, ಅವರು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಗೈರಾಗುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಕೆಲ ಆಟಗಾರರು ಅಯೋಧ್ಯೆಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.