- Kannada News Photo gallery Cricket photos IND vs ENG r ashwin just 10 wickets away to complete 500 wickets in test cricket
IND vs ENG: ಭಾರತದ 2ನೇ ಬೌಲರ್; ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಲ್ಲಿದ್ದಾರೆ ಆರ್. ಅಶ್ವಿನ್..!
IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಜನವರಿ 25 ರಿಂದ ಆರಂಭವಾಗಲಿದೆ. ಟೀಂ ಇಂಡಿಯಾದ ದಿಗ್ಗಜ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ಈ ಟೆಸ್ಟ್ ಸರಣಿ ವಿಶೇಷವಾಗಲಿದೆ. ಟೆಸ್ಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲು ಆರ್ ಅಶ್ವಿನ್ ಅವರಿಗೆ ದೊಡ್ಡ ಅವಕಾಶವಿದೆ.
Updated on: Jan 21, 2024 | 6:37 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಜನವರಿ 25 ರಿಂದ ಆರಂಭವಾಗಲಿದೆ. ಟೀಂ ಇಂಡಿಯಾದ ದಿಗ್ಗಜ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ಈ ಟೆಸ್ಟ್ ಸರಣಿ ವಿಶೇಷವಾಗಲಿದೆ. ಟೆಸ್ಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲು ಆರ್ ಅಶ್ವಿನ್ ಅವರಿಗೆ ದೊಡ್ಡ ಅವಕಾಶವಿದೆ.

ರವಿಚಂದ್ರನ್ ಅಶ್ವಿನ್ ಇದುವರೆಗೆ ಟೀಂ ಇಂಡಿಯಾ ಪರ 94 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 94 ಪಂದ್ಯಗಳ 178 ಇನ್ನಿಂಗ್ಸ್‌ಗಳಲ್ಲಿ ಅಶ್ವಿನ್ 23.66 ಸರಾಸರಿಯಲ್ಲಿ 489 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 34 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿರುವ ಅಶ್ವಿನ್ 8 ಬಾರಿ ಪಂದ್ಯವೊಂದರಲ್ಲಿ 10 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

ಇದೀಗ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ಸಿದ್ಧರಾಗಿರುವ ಆರ್ ಅಶ್ವಿನ್ ಟೆಸ್ಟ್‌ನಲ್ಲಿ 500 ವಿಕೆಟ್‌ಗಳನ್ನು ಪೂರೈಸಲು ಕೇವಲ 10 ವಿಕೆಟ್‌ಗಳ ಅಂತರದಲ್ಲಿದ್ದಾರೆ. ಇಲ್ಲಿಯವರೆಗೆ ಭಾರತದ ಪರ ಒಬ್ಬ ಬೌಲರ್ ಮಾತ್ರ ಟೆಸ್ಟ್‌ಗಳಲ್ಲಿ 500 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದು, ಇದೀಗ ಈ ಪಟ್ಟಿಗೆ ಅಶ್ವಿನ್ ಕೂಡ ಸೇರ್ಪಡೆಗೊಳಲ್ಲಿದ್ದಾರೆ.

ಕನ್ನಡಿಗ ಅನಿಲ್ ಕುಂಬ್ಳೆ ಮಾತ್ರ ಭಾರತ ಪರ 500 ಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕುಂಬ್ಳೆ ತಮ್ಮ ವೃತ್ತಿಜೀವನದಲ್ಲಿ 619 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಶೋಯೆಬ್ ಬಶೀರ್, ಝಾಕ್ ಕ್ರೌಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜಾಕ್ ಲೀಚ್, ಒಲ್ಲಿ ಪೋಪ್, ರಾಬಿನ್ಸನ್, ಜೋ ರೂಟ್ ಮತ್ತು ಮಾರ್ಕ್ ವುಡ್.

ಮೊದಲ 2 ಟೆಸ್ಟ್‌ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್.




