Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

Edited By:

Updated on: Jul 02, 2022 | 2:36 PM

Team India: ಕೇವಲ ತಿಂಗಳುಗಳ ಅಂತರದಲ್ಲಿ, ಅಂದರೆ ಸರಣಿಗಳಿಂದ ಸರಣಿಗೆ ಟೀಮ್ ಇಂಡಿಯಾ ನಾಯಕರುಗಳು ಬದಲಾಗಿರುವುದು ವಿಶೇಷ. ಹಾಗಿದ್ರೆ ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕ್ಯಾಪ್ಟನ್​ಗಳು ಯಾರೆಲ್ಲಾ ನೋಡೋಣ...

1 / 10
ಒಂದು ವರ್ಷದೊಳಗೆ ಒಂದು ತಂಡವನ್ನು ಎಷ್ಟು ನಾಯಕರುಗಳು ಮುನ್ನಡೆಸಬಹುದು...ಒಂದು, ಎರಡು, ಮೂರು ಅಥವಾ ನಾಲ್ಕು...ಆದರೆ ಟೀಮ್ ಇಂಡಿಯಾವನ್ನು ಕೇವಲ 1 ವರ್ಷದೊಳಗೆ 8 ಕ್ಯಾಪ್ಟನ್​ಗಳು ಮುನ್ನಡೆಸಿದ್ದಾರೆ ಎಂಬುದೇ ಅಚ್ಚರಿ. ಅದರಲ್ಲೂ ಮೂರು ಸ್ವರೂಪಗಳಿಗೂ ಖಾಯಂ ನಾಯಕ ಆಯ್ಕೆಯಾದ ಮೇಲೆ 4 ಕ್ಯಾಪ್ಟನ್​​ಗಳು ಕಾಣಿಸಿಕೊಂಡಿದ್ದಾರೆ.

ಒಂದು ವರ್ಷದೊಳಗೆ ಒಂದು ತಂಡವನ್ನು ಎಷ್ಟು ನಾಯಕರುಗಳು ಮುನ್ನಡೆಸಬಹುದು...ಒಂದು, ಎರಡು, ಮೂರು ಅಥವಾ ನಾಲ್ಕು...ಆದರೆ ಟೀಮ್ ಇಂಡಿಯಾವನ್ನು ಕೇವಲ 1 ವರ್ಷದೊಳಗೆ 8 ಕ್ಯಾಪ್ಟನ್​ಗಳು ಮುನ್ನಡೆಸಿದ್ದಾರೆ ಎಂಬುದೇ ಅಚ್ಚರಿ. ಅದರಲ್ಲೂ ಮೂರು ಸ್ವರೂಪಗಳಿಗೂ ಖಾಯಂ ನಾಯಕ ಆಯ್ಕೆಯಾದ ಮೇಲೆ 4 ಕ್ಯಾಪ್ಟನ್​​ಗಳು ಕಾಣಿಸಿಕೊಂಡಿದ್ದಾರೆ.

2 / 10

ಟೀಮ್ ಇಂಡಿಯಾ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ಬಳಿಕ ಇಂತಹದೊಂದು ಪರ್ವ ಶುರುವಾಗಿದೆ. ಏಕೆಂದರೆ ಕಿಂಗ್​ ಕೊಹ್ಲಿ ಇರುವವರೆಗೂ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಆಗಿರಲಿಲ್ಲ. ಇದೀಗ ಕೇವಲ ತಿಂಗಳುಗಳ ಅಂತರದಲ್ಲಿ, ಅಂದರೆ ಸರಣಿಗಳಿಂದ ಸರಣಿಗೆ ಟೀಮ್ ಇಂಡಿಯಾ ನಾಯಕರುಗಳು ಬದಲಾಗಿರುವುದು ವಿಶೇಷ. ಹಾಗಿದ್ರೆ ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕ್ಯಾಪ್ಟನ್​ಗಳು ಯಾರೆಲ್ಲಾ ನೋಡೋಣ...

3 / 10

ವಿರಾಟ್ ಕೊಹ್ಲಿ: ಕಳೆದ ವರ್ಷಾಂತ್ಯದವರೆಗೂ ಟೀಮ್ ಇಂಡಿಯಾ ನಾಯಕರಾಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿಯೊಂದಿಗೆ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಹೊಸ ನಾಯಕರಾಗಿ ಆಯ್ಕೆಯಾಗಿದ್ದರು.

4 / 10

ಅಜಿಂಕ್ಯ ರಹಾನೆ: ಅಕ್ಟೋಬರ್​ನಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್​ ಸರಣಿಯ ಕೊನೆಯ 3 ಪಂದ್ಯಗಳಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿದ್ದರು. ಈ ವೇಳೆ ಅಜಿಂಕ್ಯ ರಹಾನೆ ಭಾರತ ತಂಡವನ್ನು ಮುನ್ನಡೆಸಿದ್ದರು.

5 / 10

ಶಿಖರ್ ಧವನ್: ಕಳೆದ ವರ್ಷ ಜುಲೈನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಸರಣಿ ಆಡುತ್ತಿದ್ದ ವೇಳೆ ಶಿಖರ್ ಧವನ್ ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಮೀಸಲು ಟೀಮ್ ಇಂಡಿಯಾದ ನಾಯಕರಾಗಿ ಕಾಣಿಸಿಕೊಂಡಿದ್ದರು.

6 / 10

ರೋಹಿತ್ ಶರ್ಮಾ: ವಿರಾಟ್ ಕೊಹ್ಲಿಯ ರಾಜೀನಾಮೆ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಖಾಯಂ ನಾಯಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಸೇರಿದಂತೆ ಪ್ರಮುಖ ಸರಣಿಗಳಲ್ಲಿ ಹಿಟ್​ಮ್ಯಾನ್ ತಂಡವನ್ನು ಮುನ್ನಡೆಸಿದ್ದರು.

7 / 10

ಕೆಎಲ್ ರಾಹುಲ್: ವಿರಾಟ್ ಕೊಹ್ಲಿಯ ರಾಜೀನಾಮೆ ಬಳಿಕ ಟೀಮ್ ಇಂಡಿಯಾದ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣ ಅವರು ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಉಪನಾಯಕರಾಗಿದ್ದ ಕೆಎಲ್ ರಾಹುಲ್ ಅವರು ಟೀಮ್ ಇಂಡಿಯಾ ನಾಯಕರಾಗಿ ಪದಾರ್ಪಣೆ ಮಾಡಿದ್ದರು.

8 / 10

ರಿಷಬ್ ಪಂತ್: ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಿದ್ದರು.

9 / 10

ಹಾರ್ದಿಕ್ ಪಾಂಡ್ಯ: ಭಾರತ ತಂಡವು ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಕಾರಣ ಐರ್ಲೆಂಡ್​ಗೆ ಮೀಸಲು ಟೀಮ್ ಇಂಡಿಯಾವನ್ನು ಕಳುಹಿಸಲಾಗಿತ್ತು. ಎರಡು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು.

10 / 10

ಜಸ್​ಪ್ರೀತ್ ಬುಮ್ರಾ: ಇಂಗ್ಲೆಂಡ್ ವಿರುದ್ದದ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಪಂದ್ಯದಿಂದ ಕೊರೋನಾ ಕಾರಣದಿಂದ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಹೀಗಾಗಿ ಭಾರತ ತಂಡವನ್ನು ಜಸ್​ಪ್ರೀತ್ ಬುಮ್ರಾ ಮುನ್ನೆಡೆಸುತ್ತಿದ್ದಾರೆ. ಇತ್ತ ಬುಮ್ರಾ ಟೀಮ್ ಇಂಡಿಯಾ ಕ್ಯಾಪ್ಟನ್ ಪಟ್ಟ ಪಡೆಯುತ್ತಿದ್ದಂತೆ ಒಂದೇ ವರ್ಷದಲ್ಲಿ ಬಿಸಿಸಿಐ 8 ನಾಯಕರಗಳನ್ನು ಕಣಕ್ಕಿಳಿಸಿದಂತಾಗಿದೆ.

Published On - 2:36 pm, Sat, 2 July 22

Loading...
Unable to load recommendations.
Follow Us