IND vs NZ 2nd ODI: ಇಂದು ದ್ವಿತೀಯ ಏಕದಿನ: ರಾಯ್​ಪುರದಲ್ಲಿ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ

Edited By:

Updated on: Jan 21, 2023 | 9:00 AM

India vs New Zealand ODI: ಟೀಮ್ ಇಂಡಿಯಾ ಇದೀಗ ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ರಾಯ್​ಪುರಕ್ಕೆ ಬಂದಿಳಿದಿರುವ ರೋಹಿತ್ ಪಡೆ ಭರ್ಜರಿ ಅಭ್ಯಾಸ ನಡೆಸುತ್ತಿದೆ.

1 / 7
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 12 ರನ್​ಗಳ ರೋಚಕ ಜಯ ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ರಾಯ್​ಪುರಕ್ಕೆ ಬಂದಿಳಿದಿರುವ ರೋಹಿತ್ ಪಡೆ ಭರ್ಜರಿ ಅಭ್ಯಾಸ ನಡೆಸುತ್ತಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 12 ರನ್​ಗಳ ರೋಚಕ ಜಯ ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ರಾಯ್​ಪುರಕ್ಕೆ ಬಂದಿಳಿದಿರುವ ರೋಹಿತ್ ಪಡೆ ಭರ್ಜರಿ ಅಭ್ಯಾಸ ನಡೆಸುತ್ತಿದೆ.

2 / 7

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಜನವರಿ 21 ರಂದು ರಾಯ್​ಪುರದ ಶಾಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

3 / 7

ಇತ್ತ ನ್ಯೂಜಿಲೆಂಡ್ ಆಟಗಾರರು ಕೂಡ ಮೈದಾನದಲ್ಲಿ ಬ್ಯಾಟಿಂಗ್ - ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡುಬಂತು.

4 / 7

ಎರಡನೇ ಏಕದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಶುರುವಾಗಲಿದೆ. 1 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ಲೈವ್ ವೀಕ್ಷಿಸಬಹುದು.

5 / 7

ಈ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ಗೆದ್ದ ತಂಡದ ಆಟಗಾರರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಅತ್ತ ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲೂ ಬದಲಾವಣೆ ಸಾಧ್ಯತೆ ಕಡಿಮೆಯಿದೆ.

6 / 7

ರಾಯ್‌ಪುರ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಬೌಲರ್‌ಗಳು ಸಹ ಈ ಪಿಚ್‌ನ ಸಹಾಯ ಪಡೆಯುತ್ತಾರೆ. ಸ್ಪೀಡ್‌ ಬಾಲ್ ಮತ್ತು ಬೌನ್ಸ್ ಎರಡನ್ನೂ ಪಡೆಯಬಹುದು.

7 / 7

ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. ರಾಯ್‌ಪುರದ ಗರಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಅನ್ನು ತಲುಪಬಹುದು. ರಾತ್ರಿಯಲ್ಲಿ ತಾಪಮಾನವು 16 ಡಿಗ್ರಿ ಇರಲಿದೆ. ಹೀಗಾಗಿ ಪಂದ್ಯದ ದಿನ ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಊಹಿಸಲಾಗಿದೆ.

Published On - 9:00 am, Sat, 21 January 23

TV9 Web

TV9 Kannada

Read More
Loading...
Unable to load recommendations.
Follow Us