ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವಿಶ್ವ ದಾಖಲೆ ಸೃಷ್ಟಿಯಾಗಿರುವುದು ಬೌಂಡರಿಗಳಿಂದ ಎಂಬುದು ವಿಶೇಷ. ಇಂತಹದೊಂದು ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಭಾರತೀಯ ಬ್ಯಾಟರ್ಗಳು.
ಬಾಂಗ್ಲಾದೇಶ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮೊದಲ ಓವರ್ನಿಂದ ಶುರುವಾದ ಈ ಸಿಡಿಲಬ್ಬರ ಕೊನೆಗೊಂಡಿದ್ದು 20ನೇ ಓವರ್ನ ಕೊನೆಯ ಎಸೆತದಲ್ಲಿನ ಸಿಕ್ಸ್ನೊಂದಿಗೆ. ಅದು ಕೂಡ 20 ಓವರ್ಗಳಲ್ಲಿ 297 ರನ್ ಕಲೆಹಾಕುವ ಮೂಲಕ.
ಈ 297 ರನ್ಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು 47 ಬೌಂಡರಿಗಳನ್ನು ಬಾರಿಸಿದ್ದರು ಎಂಬುದು ವಿಶೇಷ. ಇದರಲ್ಲಿ 22 ಸಿಕ್ಸ್ ಹಾಗೂ 25 ಫೋರ್ಗಳು ಒಳಗೊಂಡಿದ್ದವು. ಇದರೊಂದಿಗೆ ಟಿ20 ಇನಿಂಗ್ಸ್ನಲ್ಲಿ ಅತ್ಯಧಿಕ ಬೌಂಡರಿಗಳನ್ನು ಬಾರಿಸಿದ ವಿಶ್ವ ದಾಖಲೆ ಭಾರತ ತಂಡದ ಪಾಲಾಯಿತು.
ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ನಿರ್ಮಿಸಿದ್ದು ಜೆಕ್ ರಿಪಬ್ಲಿಕ್ ತಂಡ. 2019 ರಲ್ಲಿ ಟರ್ಕಿ ವಿರುದ್ಧದ ಪಂದ್ಯದಲ್ಲಿ ಜೆಕ್ ರಿಪಬ್ಲಿಕ್ ತಂಡವು 43 ಬೌಂಡರಿಗಳನ್ನು (ಸಿಕ್ಸ್-ಫೋರ್) ಬಾರಿಸಿ ಈ ವಿಶ್ವ ದಾಖಲೆ ಬರೆದಿದ್ದರು.
ಇದೀಗ ಬಾಂಗ್ಲಾದೇಶ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 5 ವರ್ಷಗಳ ಹಳೆಯ ದಾಖಲೆಯನ್ನು ಟೀಮ್ ಇಂಡಿಯಾ ಅಳಿಸಿ ಹಾಕಿದೆ. ಅಲ್ಲದೆ 22 ಸಿಕ್ಸ್ ಹಾಗೂ 25 ಫೋರ್ಗಳೊಂದಿಗೆ ಒಟ್ಟು 47 ಬೌಂಡರಿ ಬಾರಿಸಿ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 298 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮೂರನೇ ಟಿ20 ಪಂದ್ಯವನ್ನು ಟೀಮ್ ಇಂಡಿಯಾ 133 ರನ್ಗಳಿಂದ ಗೆದ್ದುಕೊಂಡಿದೆ. ಅಲ್ಲದೆ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.