Babar Azam: ಪಾಕ್​ ತಂಡದಿಂದ ಬಾಬರ್ ಆಝಂಗೆ ಗೇಟ್ ಪಾಸ್: ವರದಿ

Babar Azam: ಪಾಕಿಸ್ತಾನ್ ಪರ 100 ಟೆಸ್ಟ್ ಇನಿಂಗ್ಸ್ ಆಡಿರುವ ಬಾಬರ್ ಆಝಂ ಒಟ್ಟು 3997 ರನ್ ಕಲೆಹಾಕಿದ್ದಾರೆ. ಈ ವೇಳೆ 26 ಅರ್ಧಶತಕ ಹಾಗೂ 9 ಶತಕಗಳನ್ನು ಬಾರಿಸಿದ್ದಾರೆ. ಆದರೆ ಅವರು ಕೊನೆಯ ಅರ್ಧಶತಕ ಬಾರಿಸಿದ್ದು 2022 ರಲ್ಲಿ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: Oct 13, 2024 | 1:24 PM

ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲು ಪಿಸಿಬಿ ಆಯ್ಕೆ ಸಮಿತಿ ನಿರ್ಧರಿಸಿದೆ. ಈ ನಿರ್ಧಾರದಂತೆ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಬರ್ ಆಝಂ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ 4ನೇ ಕ್ರಮಾಂಕದಲ್ಲಿ ಮತ್ತೋರ್ವ ಆಟಗಾರನಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

1 / 5
ಕ್ರಿಕ್​ಇನ್​ಫೋ ವರದಿ ಪ್ರಕಾರ, ಮುಲ್ತಾನ್​ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಬಾಬರ್ ಆಝಂ ಅವರನ್ನು ಕೈ ಬಿಡಲಿದ್ದಾರೆ. ಅಲ್ಲದೆ ಅಕ್ಟೋಬರ್ 20 ರಿಂದ ಶುರುವಾಗಲಿರುವ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಬಾಬರ್​ಗೆ ಸೂಚಿಸಲಾಗಿದೆ.

2 / 5
ಕಳಪೆ ಫಾರ್ಮ್​ನಲ್ಲಿರುವ ಬಾಬರ್ ಆಝಂ ಟೆಸ್ಟ್ ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸಿ 2 ವರ್ಷಗಳೇ ಕಳೆದಿವೆ. ಅದರಲ್ಲೂ ರನ್​ ಮಳೆಯೇ ಹರಿದಿರುವ ಮುಲ್ತಾನ್ ಟೆಸ್ಟ್​ನಲ್ಲಿ ಬಾಬರ್ ಕಲೆಹಾಕಿದ್ದು ಕೇವಲ 35 ರನ್​ಗಳು ಮಾತ್ರ. ಹೀಗಾಗಿಯೇ ಅವರನ್ನು ತಂಡದಿಂದ ಕೈ ಬಿಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಹೊಸ ಆಯ್ಕೆ ಸಮಿತಿ ನಿರ್ಧರಿಸಿದೆ.

3 / 5
ಕಳೆದ 18 ಇನಿಂಗ್ಸ್​ಗಳಿಂದ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗದ ಬಾಬರ್ ಆಝಂ ಅವರನ್ನು ತಂಡದಲ್ಲಿ ಮುಂದುವರೆಸುವುದು ಸೂಕ್ತವಲ್ಲ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಿಂದ ಬಾಬರ್ ಆಝಂ ಅವರನ್ನು ಕೈಬಿಡುವಂತೆ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಬಾಬರ್ ಹೊರಬೀಳುವುದು ಬಹುತೇಕ ಖಚಿತವಾಗಿದೆ.

4 / 5
ಅಂದಹಾಗೆ ಬಾಬರ್ ಆಝಂ ಟೆಸ್ಟ್ ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸಿ ಬರೋಬ್ಬರಿ 650 ದಿನಗಳೇ ಕಳೆದಿವೆ. ಡಿಸೆಂಬರ್ 26, 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಅವರು ಕೊನೆಯ ಅರ್ಧಶತಕ ಬಾರಿಸಿದ್ದರು. ಇದಾದ ಬಳಿಕ ಟೆಸ್ಟ್​ನಲ್ಲಿ ಒಂದೇ ಒಂದು ಹಾಫ್ ಸೆಂಚುರಿ ಸಿಡಿಸಿಲ್ಲ. ಹೀಗಾಗಿಯೇ ಇದೀಗ ಟೆಸ್ಟ್ ತಂಡದಿಂದ ಬಾಬರ್ ಆಝಂಗೆ ಗೇಟ್ ಪಾಸ್ ನೀಡಲು ನಿರ್ಧರಿಸಲಾಗಿದೆ.

5 / 5
Follow us