Updated on: Dec 06, 2022 | 3:02 PM
ಡಿಸೆಂಬರ್ 6....ಈ ದಿನ ಭಾರತೀಯ ಕ್ರಿಕೆಟ್ ತಂಡದ 5 ಆಟಗಾರರ ಜನ್ಮದಿನ. ಇವರಲ್ಲಿ ನಾಲ್ವರು ಪ್ರಸ್ತುತ ತಂಡಗಳ ಭಾಗವಾಗಿದ್ದರೆ, ಓರ್ವ ಕ್ರಿಕೆಟಿಗ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಹಾಗಿದ್ರೆ ಒಂದೇ ದಿನ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಟೀಮ್ ಇಂಡಿಯಾದ ಐವರು ಕ್ರಿಕೆಟಿಗರು ಯಾರೆಲ್ಲಾ ಎಂದು ನೋಡೋಣ...
ರವೀಂದ್ರ ಜಡೇಜಾಗೆ: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಇಂದು 34 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೌರಾಷ್ಟ್ರದಲ್ಲಿ 6 ಡಿಸೆಂಬರ್ 1988 ರಂದು ಜನಿಸಿದ ರವೀಂದ್ರ ಜಡೇಜಾ ಅವರು 2009 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಜಡೇಜಾ ಇದುವರೆಗೆ 171 ಏಕದಿನ, 64 ಟಿ20 ಮತ್ತು 60 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಜಡೇಜಾ 13 ಅರ್ಧ ಶತಕಗಳನ್ನು ಒಳಗೊಂಡಂತೆ 32.62 ರ ಸರಾಸರಿಯಲ್ಲಿ 2447 ರನ್ ಗಳಿಸಿದ್ದಾರೆ. ಹಾಗೆಯೇ 189 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲಲಿ 457 ರನ್ ಹಾಗೂ 51 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾದ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ಇಂದು 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 6 ಡಿಸೆಂಬರ್ 1993 ರಂದು ಅಹಮದಾಬಾದ್‌ನಲ್ಲಿ ಜನಿಸಿದ ಬುಮ್ರಾ ಭಾರತ ಪರ 72 ಏಕದಿನ, 60 T20 ಮತ್ತು 30 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 121 ವಿಕೆಟ್‌ಗಳನ್ನು, ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ 70 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಬುಮ್ರಾ ಟೆಸ್ಟ್ ಪಂದ್ಯಗಳಲ್ಲಿ 21.99 ಸರಾಸರಿಯಲ್ಲಿ 128 ವಿಕೆಟ್‌ಗಳನ್ನು ಪಡೆದಿದ್ದಾರೆ.
ಶ್ರೇಯಸ್ ಅಯ್ಯರ್: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಇಂದು 28 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಯ್ಯರ್ ಭಾರತ ಪರ ಇದುವರೆಗೆ 49 ಟಿ20, 37 ಏಕದಿನ ಹಾಗೂ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಏಳು ಅರ್ಧಶತಕ ಸೇರಿದಂತೆ 30.67ರ ಸರಾಸರಿಯಲ್ಲಿ 1043 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 48.52 ಸರಾಸರಿಯಲ್ಲಿ 1452 ರನ್ ಕಲೆಹಾಕಿದ್ದಾರೆ. ಹಾಗೆಯೇ ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೇಯಸ್ 46.88 ಸರಾಸರಿಯಲ್ಲಿ 422 ರನ್ ಗಳಿಸಿದ್ದಾರೆ.
ಕರುಣ್ ನಾಯರ್: ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರಿಗೆ ಇಂದು 31ನೇ ಜನ್ಮದಿನ. ವೀರೇಂದ್ರ ಸೆಹ್ವಾಗ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಎರಡನೇ ಭಾರತೀಯ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕರುಣ್ಗೆ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ಟೀಮ್ ಇಂಡಿಯಾ ಪರ ಇದುವರೆಗೆ ಆರು ಟೆಸ್ಟ್‌ಗಳಲ್ಲಿ 62.33 ಸರಾಸರಿಯಲ್ಲಿ 374 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಒಟ್ಟು 46 ರನ್ ಗಳಿಸಿದ್ದಾರೆ.
ಆರ್‌ಪಿ ಸಿಂಗ್: ಟೀಮ್ ಇಂಡಿಯಾದ ಮಾಜಿ ವೇಗಿ ಆರ್‌ಪಿ ಸಿಂಗ್ ಅವರಿಗೆ ಇಂದು 37 ವರ್ಷ ತುಂಬಿದೆ. ಟೀಮ್ ಇಂಡಿಯಾ ಪರ 14 ಟೆಸ್ಟ್ ಪಂದ್ಯವಾಡಿರುವ ಆರ್‌ಪಿ ಒಟ್ಟು 40 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು 58 ಏಕದಿನ ಪಂದ್ಯಗಳಿಂದ 69 ವಿಕೆಟ್ ಮತ್ತು 10 T20 ಪಂದ್ಯಗಳಿಂದ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಆರ್‌ಪಿ ಸಿಂಗ್ ಅವರು 2007ರ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದರು ಎಂಬುದು ವಿಶೇಷ.
Published On - 2:54 pm, Tue, 6 December 22