- Kannada News Photo gallery Cricket photos IPL 2023: R Ashwin predicts Ben Stokes' destination in IPL 2023 Auction Kannada News zp
IPL 2023: ಬೆನ್ ಸ್ಟೋಕ್ಸ್ರನ್ನು ಖರೀದಿಸಲಿರುವ ತಂಡ ಯಾವುದೆಂದು ತಿಳಿಸಿದ ಅಶ್ವಿನ್
IPL 2023 Auction: ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಹೆಸರು ಬೆನ್ ಸ್ಟೋಕ್ಸ್. ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಟೋಕ್ಸ್ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಅನುಮಾನವೇ ಇಲ್ಲ.
Updated on: Dec 05, 2022 | 7:30 PM

ಐಪಿಎಲ್ ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 23 ರಂದು ನಡೆಯಲಿರುವ ಈ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೀಡಿದ್ದಾರೆ. ಇವರಲ್ಲಿ ಕೆಲ ಸ್ಟಾರ್ ಆಲ್ರೌಂಡರ್ ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ.

ಹೀಗೆ ಕಾಣಿಸಿಕೊಂಡ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಹೆಸರು ಬೆನ್ ಸ್ಟೋಕ್ಸ್. ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಟೋಕ್ಸ್ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಹಿಂದೆ ತಮ್ಮ ಖ್ಯಾತಿಗೆ ತಕ್ಕಂತೆ ಐಪಿಎಲ್ನಲ್ಲೂ ಪ್ರದರ್ಶನ ನೀಡಿದ್ದರು.

ಇದಾಗ್ಯೂ ಅವರು 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮಿನಿ ಹರಾಜಿನ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮರಳಲು ಬೆನ್ ಸ್ಟೋಕ್ಸ್ ಮುಂದಾಗಿದ್ದಾರೆ. ಇತ್ತ ಸ್ಟೋಕ್ಸ್ ಹೆಸರು ಹರಾಜು ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ 10 ಫ್ರಾಂಚೈಸಿಗಳು ಕೂಡ ಸ್ಟಾರ್ ಆಟಗಾರನ ಖರೀದಿಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ.

ಆದರೆ ಈ ಮಾಸ್ಟರ್ ಪ್ಲ್ಯಾನ್ನಲ್ಲಿ ಬೆನ್ ಸ್ಟೋಕ್ಸ್ ಯಾವ ತಂಡದ ಪಾಲಾಗಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಅಶ್ವಿನ್ ಅವರ ಪ್ರಕಾರ ಸ್ಟೋಕ್ಸ್ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಮುಂದಾಗಲಿದೆ. ಆದರೆ....

ಬೆನ್ ಸ್ಟೋಕ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಲಿದ್ದಾರೆ ಎಂದು ಭಾವಿಸುತ್ತೇನೆ. ಏಕೆಂದರೆ ಲಕ್ನೋ ತಂಡಕ್ಕೆ ಉತ್ತಮ ಆಲ್ರೌಂಡರ್ನ ಅವಶ್ಯಕತೆಯಿದೆ. ಹೀಗಾಗಿ ಸ್ಟೋಕ್ಸ್ ಖರೀದಿಗಾಗಿ ಲಕ್ನೋ ಹೆಚ್ಚಿನ ಮೊತ್ತ ವ್ಯಯಿಸಲಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿ ಒಟ್ಟು ನಾಲ್ವರು ವಿದೇಶಿ ಆರರನ್ನು ಬಿಡುಗಡೆ ಮಾಡಿದೆ. ಅದರಂತೆ ತಂಡದಿಂದ ದುಷ್ಮಂತ ಚಮೀರಾ, ಆ್ಯಂಡ್ರೊ ಟೈ, ಎವಿನ್ ಲೂಯಿಸ್ ಹಾಗೂ ಜೇಸನ್ ಹೋಲ್ಡರ್ ಹೊರಬಿದ್ದಿದ್ದಾರೆ. ಅಲ್ಲದೆ ಒಟ್ಟು 23 ಕೋಟಿ 35 ಲಕ್ಷ ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಬೆನ್ ಸ್ಟೋಕ್ಸ್ ಖರೀದಿಗೆ ಪೈಪೋಟಿ ನಡೆಸುವುದು ಖಚಿತ ಎಂದೇ ಹೇಳಬಹುದು.

ಲಕ್ನೋ ಸೂಪರ್ ಜೈಂಟ್ಸ್ ತಂಡ ಉಳಿಸಿಕೊಂಡಿರುವ ಆಟಗಾರರು: ಎಲ್ ರಾಹುಲ್ (ನಾಯಕ), ಆಯುಷ್ ಬಡೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್



















